ಪತ್ರ ಬರೆದರೆ ನಿಮಗೆ ಸಿಗಲಿದೆ 50 ಸಾವಿರ ರೂಪಾಯಿ ಬಹುಮಾನ..! ಹೇಗೆ ಅಂತಿರಾ ಇದನ್ನೊಮ್ಮೆ ಓದಿ..?

13 Jul 2018 12:35 PM | General
9850 Report

ಇಂದಿನ ಗ್ಯಾಜೆಟ್ ಯುಗದಲ್ಲಿ ಪತ್ರ ಬರೆಯುವ ಸಂಸ್ಕೃತಿ ಮರೆಯಾಗುತ್ತಿದೆ.. ಇಂದಿನ ಪೀಳಿಗೆಗಂತೂ ಪತ್ರ ಬರೆಯುವುದು ಹೇಗೆ ಎಂಬುದೇ ತಿಳಿದಿಲ್ಲ. ವಿದ್ಯಾರ್ಥಿಗಳು ಕೇವಲ ಪರೀಕ್ಷೆಯ ದೃಷ್ಟಿಯಿಂದ ಮಾತ್ರವೇ ಪತ್ರ ಬರೆಯುತ್ತಿರಬಹುದು. ಆದರೆ ಪತ್ರ ಬರೆಯುವವರ ಸಂಖ್ಯೆ ಮಾತ್ರ ಬಹುತೇಕ ಕಡಿಮೆಯಾಗಿದೆ.

ಇದಕ್ಕಾಗಿಯೇ ಜನಸಾಮಾನ್ಯರು ಮತ್ತು ವಿದ್ಯಾರ್ಥಿಗಳಲ್ಲಿ ಪತ್ರ ಲೇಖನದ ಅಭಿರುಚಿ, ಬರವಣಿಗೆ ಕೌಶಲ್ಯ ಹಾಗೂ ದೇಶಪ್ರೇಮವನ್ನು ಜಾಗೃತಿಗೊಳಿಸುವ ಸಲುವಾಗಿ ಭಾರತೀಯ ಅಂಚೆ ಇಲಾಖೆಯು ದೇಶ್ಯಾದ್ಯಂತ ರಾಷ್ರಮಟ್ಟದ ಮುಕ್ತ ಪತ್ರಲೇಖನ ಸ್ಪರ್ಧೆಯನ್ನು ಏರ್ಪಡಿಸಿದೆ. ನನ್ನ ಮಾತೃಭೂಮಿಗೆ ಪತ್ರ, Letter to My Motherland, मेरे देश के नाम खत -ಎಂಬ ವಿಷಯದ ಮೇಲೆ ಹಾಗೂ A4 ಅಳತೆಯ ಹಾಳೆಯಲ್ಲಿ 1000 ಪದಗಳ ಮಿತಿಯೊಳಗೆ ಪತ್ರವನ್ನು ಬರೆದು ಎನ್ವೆಲಪ್ ನಲ್ಲಿ ಅಥವಾ ILC (ಇನ್ ಲ್ಯಾಂಡ್) ಪತ್ರದಲ್ಲಿ 500 ಪದಗಳಿಗೆ ಮೀರದಂತೆ ಬರೆಯಬೇಕು. ಬರೆದ ಪತ್ರವನ್ನು ಚೀಫ್ ಪೋಸ್ಟ್ ಮಾಸ್ಟರ್, ಜನರಲ್ ಕರ್ನಾಟಕ ವೃತ್ತ, ಬೆಂಗಳೂರು-560001 ಇವರಿಗೆ ತಲುಪುವಂತೆ ಅಂಚೆ ಮೂಲಕ ಕಳುಹಿಸಬೇಕು..

ಪತ್ರ ಲೇಖನ ಸ್ಪರ್ಧೆಯಲ್ಲಿ 18 ವರ್ಷ ಒಳಗಿನ ಮತ್ತು 18 ವರ್ಷ ಮೇಲ್ಪಟ್ಟ ಎಂಬ ಎರಡು ವಿಭಾಗಗಳಿದ್ದು, ರಾಷ್ಟ್ರಮಟ್ಟದ ಪ್ರತಿ ವಿಭಾಗಕ್ಕೆ ಅತ್ತ್ಯುತ್ತಮ ಪತ್ರಕ್ಕೆ 50,000 ರೂ ನಗದು ಬಹುಮಾನವನ್ನು ನೀಡಲಾಗುವುದು.ರಾಜ್ಯಮಟ್ಟದ ಅತ್ತ್ಯುತ್ತಮ ಪತ್ರಕ್ಕೆ 25,000 ರೂ. ನಗದು ಬಹುಮಾನ ಮತ್ತು ದ್ವಿತೀಯ, ತೃತೀಯ ಸ್ಥಾನಗಳಿಗೂ ಸೂಕ್ತ ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಪತ್ರವನ್ನು ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯಲು ಅವಕಾಶವಿದೆ. ಪತ್ರವನ್ನು ಇದೇ ತಿಂಗಳ 30ರೊಳಗಾಗಿ ತಲುಪುವಂತೆ ಕಳುಹಿಸಿಕೊಡಬೇಕು. ಮುದ್ರಿತ ಪತ್ರಗಳನ್ನು ಸ್ವೀಕರಿಸುವುದಿಲ್ಲ. ಬದಲಾಗಿ ಕೈ ಬರಹದಲ್ಲಿ ಮಾತ್ರವೇ ಬರೆದಿರಬೇಕು. ಪತ್ರ ಲೇಖನ ಸ್ಪರ್ಧೆಗೆ ಭಾಗವಹಿಸಲು ಬಯಸುವವರು ಧಹೀ ಅಖರ್ ಲೆಟರ್ ಕಾಂಪಿಟೇಷನ್ 2018ಕ್ಕೆ ನೋಂದಣಿ ಮಾಡಿಕೊಂಡು ಈಗಲೇ ಪತ್ರ ಬರೆಯಿರಿ

Edited By

Manjula M

Reported By

Manjula M

Comments