BPL ಕುಟುಂಬಕ್ಕೆ ಈ ಯೋಜನೆಯಿಂದ ಸಿಗಲಿದೆ 6 ಸಾವಿರ ರೂ..! ಹೇಗೆ ಅಂತಿರಾ..?

12 Jul 2018 2:20 PM | General
13325 Report

ಬಜೆಟ್ ಮಂಡಿಸುವ ವೇಳೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಗರ್ಭಿಣಿ ಮಹಿಳೆಯರಿಗೆ ರಾಜ್ಯ ಸರ್ಕಾರದ ಮಾತೃಪೂರ್ಣ ಮತ್ತು ಕೇಂದ್ರ ಸರ್ಕಾರದ ಮಾತೃವಂದನಾ ಕಾರ್ಯಕ್ರಮಗಳಲ್ಲಿ ಹಲವು ಸೌಲಭ್ಯಗಳು ಈಗಾಗಲೇ ದೊರೆಯುತ್ತಿದ್ದು ಇವುಗಳೊಂದಿಗೆ ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆಯನ್ನು ನಾವು ಹೊಸದಾಗಿ ರೂಪಿಸಿದ್ದು ಇದರ ಕೆಳಗೆ ಹೆರಿಗೆ ಪೂರ್ವದ ಮೂರು ತಿಂಗಳು ಮತ್ತು ಹೆರಿಗೆ ನಂತರದ ಮೂರು ತಿಂಗಳು ತಲಾ ಒಂದು ಸಾವಿರ ರೂ ಹಣವನ್ನು  ನೀಡಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಸ್ವಾಮಿ ಹೇಳಿದ್ದಾರೆ.

ಈ ಯೋಜನೆ ತಾಯಿಯ ಎರಡು ಮಕ್ಕಳಿಗೆ ಅನ್ವಯವಾಗಲಿದೆ ಎಂದ ಅವರು, ನವೆಂಬರ್ ಒಂದರಿಂದ ಜಾರಿಯಾಗಲಿರುವ ಈ ಯೋಜನೆಗೆ ಮುನ್ನೂರೈವತ್ತು ಕೋಟಿ ರೂ. ನೀಡಲಾಗುವುದು ಎಂದು ತಿಳಿಸಿದರು. ಈ ಯೋಜನೆಯ ಮೇಲುಸ್ತುವಾರಿಯನ್ನು ಅಂಗನವಾಡಿ ಆಯಾ ಗ್ರಾಮಗಳ ಅಂಗನವಾಡಿ ಶಿಕ್ಷಕಿಯರಿಗೆ ಅಥವಾ ಕಾರ್ಯಕರ್ತೆಯರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.. 

ಅರ್ಜಿ ಸಲ್ಲಿಸುವ ಬಗ್ಗೆ ವಿವರಗಳು...

ನಿಮ್ಮ ಗ್ರಾಮದ ಅಥವಾ ಸುತ್ತಮುತ್ತಲಿನ ಅಂಗನವಾಡಿ ಶಿಕ್ಷಕಿಯರು ಅಥವಾ ಕಾರ್ಯಕರ್ತೆಯರ ಬಳಿ ನೀವು ಅರ್ಜಿಯನ್ನು ಸಲ್ಲಿಸಿ ಪ್ರಯೋಜನವನ್ನು ಪಡೆಯಬಹುದು. ಬೇಕಾಗುವ ದಾಖಲಾತಿಗಳನ್ನು ಕೂಡ ಇವರಿಗೆ ಸಲ್ಲಿಸಬೇಕಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಅಂಗನವಾಡಿ ಶಿಕ್ಷಕಿಯರನ್ನು ಸಂಪರ್ಕಿಸಿ ಪರಿಪೂರ್ಣ ಮಾಹಿತಿ ಪಡೆಯಿರಿ.

Edited By

Manjula M

Reported By

Manjula M

Comments