ಎಚ್ಚರ: ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವ ಮುನ್ನ ಇದನ್ನೊಮ್ಮೆ ಓದಿ..!

12 Jul 2018 11:07 AM | General
1107 Report

ಸಾಮಾನ್ಯವಾಗಿ ಕಾಯಿಲೆ ಬಂದ ತಕ್ಷಣ ಹತ್ತಿರದಲ್ಲಿರುವ ಸರ್ಕಾರಿ ಆಸ್ಪತ್ರಗೆ ಹೋಗ್ತೀವಿ.  ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜಾಗುವ ಔಷಧಿಗಳ ಗುಣಮಟ್ಟ ಕೇಳಿದರೆ ಎಲ್ಲರೂ ಬೆಚ್ಚಿ ಬೀಳ್ತೀರಾ. ಸರ್ಕಾರಿ ಆಸ್ಪತ್ರೆಗಳಲ್ಲಿ ಸರಬರಾಜು ಆಗುವ  ಔಷಧಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಔಷಧಿಗಳು ಕಳಪೆ ಗುಣಮಟ್ಟದಿಂದ ಕೂಡಿರೋದು ಎಂಬ ಅಪಾಯಕಾರಿ ಮಾಹಿತಿಯನ್ನು ಸಿಎಜಿ (Comptroller and Auditor General of India) ತಿಳಿಸಿದೆ.

ಇಪ್ಪತ್ತು ರಾಜ್ಯಗಳಲ್ಲಿ ಬ್ಲ್ಯಾಕ್ ಲಿಸ್ಟ್ ಗೆ ಸೇರಿರುವಂತಹ ಕಂಪೆನಿಗಳ ಜೊತೆ ಅಧಿಕಾರಿಗಳು ಔಷಧಿ ಖರೀದಿಯನ್ನು ಮಾಡಿದ್ದಾರೆ. 2014 ರಿಂದ 2017 ರ ವರೆಗೆ ರಾಜ್ಯಕ್ಕೆ 14,209 ಬ್ಯಾಚ್‍ಗಳಲ್ಲಿ ಔಷಧಿ ಸರಬರಾಜು ಆಗಿದೆ. ಇವುಗಳಲ್ಲಿ 7,433 ಬ್ಯಾಚ್ ಅಂದರೆ ಅರ್ಧಕ್ಕಿಂತ ಹೆಚ್ಚು ಕಳೆಪ ಗುಣಮಟ್ಟದ ಔಷಧಿಗಳನ್ನು ಆಸ್ಪತ್ರೆಯ ಮುಖಾಂತರ ರೋಗಿಗಳಿಗೆ ಸರಬರಾಜು ಮಾಡಲಾಗಿದೆ ಎಂಬ ಆತಂಕಕಾರಿ ಮಾಹಿತಿಯನ್ನು ವರದಿಯಲ್ಲಿ ತಿಳಿಸಲಾಗಿದೆ. ಸರ್ಕಾರಿ ನೊಂದಾಯಿತ ಲ್ಯಾಬೋರೇಟರಿಯು ಸಹ ಕಳೆಪ ಗುಣಗುಣಮಟ್ಟದ ಔಷಧಿಗೆ ಫುಲ್ ಮಾರ್ಕ್ ನೀಡಿದೆ ಎಂದು ವರದಿಯನ್ನು ನೀಡಿದೆ. ಹಾಗಾಗಿ ಸರ್ಕಾರವು ಇದರ ಬಗ್ಗೆ ಕ್ರಮ ಕೈಗೊಂಡು ಪರಿಶೀಲನೆಯನ್ನು ನಡೆಸಬೇಕಿದೆ.

Edited By

Manjula M

Reported By

Manjula M

Comments