ಇಂದಿರಾ ಕ್ಯಾಂಟಿನ್ ನಲ್ಲಿ ಇನ್ಮುಂದೆ ಸಿಗಲಿದೆ ಕಾಫೀ..ಟೀ..!

11 Jul 2018 6:07 PM | General
223 Report

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಬಡವರ ಹಸಿವು ನೀಗಿಸಲು ಹಿಂದಿನ ಸ್ಥಾಪಿಸಲಾದ ಇಂದಿರಾ ಕ್ಯಾಂಟೀನ್‍ನಲ್ಲಿ ಇನ್ನು ಮುಂದೆ ಕಾಫಿ-ಟೀ ಕೂಡ ಸಿಗಲಿದೆ ಎಂದು ತಿಳಿಸಿದ್ದಾರೆ.

ಇದುವರೆಗೆ ಸುಮಾರು 6 ಕೋಟಿ ಜನ ಇಂದಿರಾ ಕ್ಯಾಂಟೀನ್ನಲ್ಲಿ ಊಟ-ಉಪಹಾರ ಮಾಡಿದ್ದಾರೆ. 198 ವಾರ್ಡ್ಗಳಲ್ಲಿ ಸ್ಥಳಾವಕಾಶ ದೊರೆಯದ 22 ವಾರ್ಡ್ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕಡೆ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಲಾಗಿದೆ.. ಒಂದೆರಡು ಕಡೆ ಮೊಬೈಲ್ ಕ್ಯಾಂಟೀನ್ ಕೂಡ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ಇನ್ನು ಮುಂದೆ ಇಂದಿರಾ ಕ್ಯಾಂಟೀನ್ನಲ್ಲೇ ಕಾಫಿ-ಟೀ ಕೊಡುವ ವ್ಯವಸ್ಥೆಯನ್ನು ಮಾಡಲು ಬಿಬಿಎಂಪಿ ಚಿಂತನೆ ಮಾಡಿದೆ.

Sponsored

Edited By

Manjula M

Reported By

Manjula M

Comments