ನಿಮ್ಮ ಮನೆಯಲ್ಲಿ ಹೆಣ್ಣು ಮಗು ಇದ್ದರೆ ನಿಮಗೆ ಸಿಗಲಿದೆ 60 ಲಕ್ಷ ರೂ..! ಅರ್ಜಿ ಸಲ್ಲಿಸುವ ಕಂಪ್ಲೀಟ್ ಡಿಟೇಲ್ಸ್...

11 Jul 2018 2:46 PM | General
96433 Report

ನರೆಂದ್ರ ಮೋದಿಯವರು ಅಧಿಕಾರಕ್ಕೆ ಬಂದನಂತರದಲ್ಲಿ ಅನೇಕ ಸುಧಾರಣೆಗಳು ಮತ್ತು ಅಭಿವೃದ್ಧಿ ಕಾರ್ಯಗಳಿಂದಾಗಿ ಹೆಸರು ಮಾಡಿದ್ದಾರೆ, ಹೆಣ್ಣು ಮ್ಕಕಳನ್ನು ಸಮಸ್ಯೆಯಂತೆ ನೋಡುವ ಈ ಸಮಾಜದಲ್ಲಿ ಹೆಣ್ಣು ಮಕ್ಕಳೇ ಮನೆಯ ಭಾಗ್ಯ ಲಕ್ಷ್ಮಿಯರು ಎನ್ನುವಂತಹ ಯೋಜನೆಯೋದನ್ನು ಜಾರಿಗೆ ತಂದಿದ್ದಾರೆ. ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಹಾಗೂ ಅವರ ಭವಿಷ್ಯಗಳಲ್ಲಿನ ವಿದ್ಯಾಭ್ಯಾಸ, ವಿವಾಹದಂತಹ ಖರ್ಚು ವೆಚ್ಚಗಳ ವಿಚಾರದಲ್ಲಿ ಪೋಷಕರಿಗೆ ನೆರವಾಗುವ ಯೋಜನೆಯೊಂದನ್ನು ಭಾರತ ಸರ್ಕಾರವು ಪ್ರಾರಂಭಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಭೇಟಿ ಬಚಾವೋ, ಭೇಟಿ ಪಡಾವೋ’ ಎಂಬ ಆಂದೋಲನದಡಿಯಲ್ಲಿ ಈ ಯೋಜನೆ ತಯಾರು ಮಾಡಿ ಜನವರಿ 22 2015 ರಂದು ಜಾರಿಗೊಳಿಸಿದರು. ಈ ಯೋಜನೆಯಲ್ಲಿ ಫಲಾನುಭವಿಗಳು ಸದ್ಯ ಖಾತೆಯಲ್ಲಿ ತುಂಬಿದ ಹಣಕ್ಕೆ 8.6% ಬಡ್ಡಿಯನ್ನು ಪಡೆಯುತ್ತಿದ್ದು ತೆರಿಗೆ ಉಳಿತಾಯಕ್ಕೂ ಸಹಕಾರಿಯಾಗಿದೆ. ಈ ಯೋಜನೆಯ ಪಲಾನುಭವಿ ಆಗಬೇಕಾದರೆ ಹೆಣ್ಣು ಮಗು ಹೊಂದಿರುವ ಪಾಲಕರು ಸೂಕ್ತ ಧಾಖಲೆಗಳೊಂದಿಗೆ ಭಾರತದ ಯಾವುದೇ ಅಂಚೆ ಕಛೇರಿ ಅಥವಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾತೆ ತೆರೆಯುವ ಮೂಲಕ ಇದರ ಫಲಾನುಭವಿ ಆಗಬಹುದು. 2015 ರ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಹರಿಯಾಣದ ಪಾಣಿಪತ್ ನಲ್ಲಿ ಲೋಕಾರ್ಪಣೆಗೊಳಿಸಿದರು. ಹೆಣ್ಣು ಮಗು ಹುಟ್ಟಿದಂದಿನಿಂದ ಅದಕ್ಕೆ ಹತ್ತು ವರ್ಷ ತುಂಬುವವರೆಗೆ ಯಾವಾಗ ಬೇಕಾದರೂ ಈ ಯೋಜನೆಯ ಅಡಿಯಲ್ಲಿ ಖಾತೆ ತೆರೆಯಬಹುದು. ಒಂದು ಮಗುವಿಗೆ ಕೇವಲ ಒಂದೇ ಖಾತೆ ತೆರೆಯಲು ಅವಕಾಶವಿದೆ. ಅವಳಿ ಜವಳಿ ಹೆಣ್ಣು ಮಕ್ಕಳಾದ ಸಂಧರ್ಭಗಳಲ್ಲೂ ಒಂದೊಂದು ಮಗುವಿಗೂ ಒಂದೊಂದು ಖಾತೆ ತೆರೆಯಲು ಅವಕಾಶವಿದೆ. ತೆರೆಯಲಾದ ಖಾತೆಯನ್ನು ಭಾರತದಾದ್ಯಂತ ಯಾವ ಸ್ಥಳಗಳಿಗೆ ಬೇಕಾದರೂ ವರ್ಗಾವಣೆ ಮಾಡಿಕೊಳ್ಳಬಹುದು.

ಖಾತೆ ತೆರೆದ ನಂತರ ಪೋಷಕರು ಕನಿಷ್ಠ ಪ್ರತೀ ವರ್ಷ ಒಂದು ಸಾವಿರ ರೂಪಾಯಿಗಳನ್ನು ಖಾತೆಗೆ ತುಂಬಬೇಕು. ಗರಿಷ್ಠ ರೂ.1,50,000 ರೂ ಗಳನ್ನು ಖಾತೆಗೆ ತುಂಬಬಹುದು . ಕನಿಷ್ಠ 1000 ರೂಪಾಯಿಗಳಿಗಿಂತ ಕಡಿಮೆ ಹಣವನ್ನು ತುಂಬಿದರೆ ಅಥವಾ ಆ ವರ್ಷ ಖಾತೆಗೆ ಹಣವೇ ತುಂಬದಿದ್ದ ಪಕ್ಷದಲ್ಲಿ ರೂ.50 ದಂಡವನ್ನಾಗಿ ಪಾವತಿಸಬೇಕಾಗುತ್ತದೆ ಹೆಣ್ಣು ಮಗು ಹತ್ತು ವರ್ಷ ಪೂರೈಸಿದ ನಂತರ ಆಕೆಯೇ ಆ ಖಾತೆಯನ್ನು ನಿಭಾಯಿಸಬಹುದು. ಹೆಣ್ಣು ಮಗುವಿಗೆ ಹದಿನೆಂಟು ವರ್ಷಗಳು ತುಂಬಿದ ಬಳಿಕ ಖಾತೆಯಲ್ಲಿ ಇರುವ ಹಣದ 50% ಹಣವನ್ನು ಶೈಕ್ಷಣಿಕ ಖರ್ಚುಗಳಿಗೆ ಪಡೆಯಲು ಅವಕಾಶವಿದೆ. ಈ ಖಾತೆಯು ಹೆಣ್ಣು ಮಗುವಿಗೆ ಇಪ್ಪತ್ತೊಂದು ವರ್ಷಗಳು ತುಂಬಿದಾಗ ಪರಿಪೂರ್ಣವಾಗುತ್ತದೆ. ಆಗ ಆ ಖಾತೆಯನ್ನು ಮುಕ್ತಾಯ ಮಾಡಬೇಕು. ಮುಕ್ತಾಯ ಮಾಡದಿದ್ದ ಪಕ್ಷದಲ್ಲಿ ಆ ಖಾತೆಯಲ್ಲಿರುವ ಹಣಕ್ಕೆ ಮುಂದೆ ಯಾವುದೇ ಬಡ್ಡಿ ಬರುವುದಿಲ್ಲ.

Sponsored

Edited By

Manjula M

Reported By

Manjula M

Comments