ಬಾಡಿಗೆ ಮನೆ ಹಾಗೂ ಮನೆಯಿಲ್ಲದವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್..! ಅರ್ಜಿ ಸಲ್ಲಿಸುವುದರ  ಕಂಪ್ಲೀಟ್  ಡಿಟೇಲ್ಸ್ ಇಲ್ಲಿದೆ..

11 Jul 2018 10:58 AM | General
4580 Report

ಪ್ರಧಾನಿ ಮೋದಿ ಅವರ ಅವಾಸ್ ಯೋಜನೆ ಅಡಿಯಲ್ಲಿ 2012 ರ ಸುಮಾರಿಗೆ ನಮ್ಮ ದೇಶವನ್ನು ಗುಡಿಸಲು ಮುಕ್ತ ದೇಶ ಮಾಡಬೇಕೆಂದು ಪಣ ತೊಟ್ಟಿದ್ದರು. ಹಾಗೆಯೇ ಇದರ ಅನುಗುಣವಾಗಿ ಕರ್ನಾಟಕ ರಾಜ್ಯ ಸರ್ಕಾರವು ಈಗ ಗುಡಿಸಲು ಮುಕ್ತ ಕರ್ನಾಟಕ ಮಾಡಲು ಕೈ ಜೋಡಿಸಿದೆ, ಹೌದು ಪ್ರಧಾನಿ ಮಂತ್ರಿ ಆವಾಸ್ ಯೋಜನೆಗೆ ನೋಂದಣಿ ಮಾಡುವವರು ಇದೆ ತಿಂಗಳ 30 ರ ಒಳಗೆ ನಿಮ್ಮ ಅರ್ಜಿಯನ್ನು ಸಲ್ಲಿಸಬೇಕಾಗಿದೆ.

ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವವರು ಆನ್ಲೈನ್ ಮೂಲಕ ಅರ್ಜಿಯನ್ನು ಹಾಕಲು ಇಷ್ಟ ಪಡುವವರು. ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆ ಜೆರಾಕ್ಸ್ ಪ್ರತಿ, ರೇಷನ್ ಕಾರ್ಡ್ ಜೆರಾಕ್ಸ್, ಹಾಗೆ ಪಾಸ್ ಪೋರ್ಟ್ ಸೈಜ್ ಫೋಟೋ ಚುನಾವಣಾ ಚೀಟಿ ಬೇಕಾಗುತ್ತದೆ. ಹಾಗೆಯೇ ಇದರ ನೋಂದಣಿ ಶುಲ್ಕ ಒಬ್ಬ ಅರ್ಜಿದಾರನಿಗೆ 100 ರೂಪಾಯಿ ಇರುತ್ತದೆ ಇದನ್ನು ನೀವು ನೋಂದಣಿ ಮುಗಿಸಲು ಈ ಹಣವನ್ನು ಕಡ್ಡಾಯ ಕಟ್ಟಲೆ ಬೇಕು ಹಾಗೆ ಈ ವಸತಿ ಯೋಜನೆ ಎಲ್ಲರಿಗೂ ತಲುಪಬೇಕು ಎನ್ನುವ ಬಗ್ಗೆ ಸರ್ಕಾರ ಅಧಿಕಾರಿಗಳಿಗೆ ಖಡಕ್ ಎಚ್ಚರಿಗೆ ಕೊಟ್ಟಿದೆ. ಈ ಸದುಪಯೋಗವನ್ನು ಎಲ್ಲರು ಪಡೆಯಲಿದ್ದಾರೆ.

Edited By

Manjula M

Reported By

Manjula M

Comments