ನಮ್ಮ ಮೆಟ್ರೋಗೆ ಭಾರೀ ಮೊತ್ತದ ನೆರವು ನೀಡಿದ ಇನ್ಫೋಸಿಸ್ ಫೌಂಡೇಷನ್..!! ಎಷ್ಟು ಗೊತ್ತಾ?

07 Jul 2018 4:12 PM | General
2754 Report

ಹಲವು ಸಾಮಾಜಿಕ ಕಾರ್ಯಗಳ ಮೂಲಕ ಮಾದರಿಯಾಗಿರುವ ಐಟಿ ಸಂಸ್ಥೆ ಇನ್ಫೋಸಿಸ್ ಮೆಟ್ರೋ ಕಾಮಗಾರಿಗೆ 200 ಕೋಟಿ ರೂಪಾಯಿ ನೆರವನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ.

ಶನಿವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೃಹ ಕಚೇರಿ ಕೃಷ್ಣಾಗೇ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿದ ಫೌಂಡೇ‍ಷನ್ ಅಧ್ಯಕ್ಷೆ ಸುಧಾಮೂರ್ತಿ ಅವರು ಕೊನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ಕಾಮಗಾರಿಗೆ 200 ಕೋಟಿ ರೂ ಹಣಕಾಸಿನ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಮೆಟ್ರೋ ಹಳಿ ನಿರ್ಮಾಣಕ್ಕೆ ನೂರು ಕೋಟಿ ರೂಪಾಯಿ , ನಿಲ್ದಾಣಕ್ಕೆ 100 ಕೋಟಿ ರೂಪಾಯಿ ನೆರವು ನೀಡುವುದಾಗಿ ಸುಧಾ ಮೂರ್ತಿ ಅವರು ಘೋಷಿಸಿದ್ದಾರೆ. ಈ ಬಗ್ಗೆ ಜುಲೈ 19 ರಂದು ಸರಕಾರ ಮತ್ತು ಇನ್ಫೋಸಿಸ್ ನಡುವೆ ಎಂಓಯು ನಡೆಯಲಿದೆ ಎಂದು ತಿಳಿಸಿದರು. ಇನ್ಫೋಸಿಸ್ ಫೌಂಡೇಷನ್ ಹಲವು ಒಳ್ಳೆಯ ಕೆಲಸ ಮಾಡುವ ಮೂಲಕ ಮಾದರಿ ಸಂಸ್ಥೆಯಾಗಿದೆ ಎಂದರು. ಸುಧಾಮೂರ್ತಿ ಅವರು ಮಾತನಾಡಿ ನಮ್ಮ ಕೊಡುಗೆಯಲ್ಲಿ ರಾಜಕೀಯವಿಲ್ಲ. ನಮ್ಮಲ್ಲಿ ಇರುವುದನ್ನು ಜನರಿಗೆ ಅನುಕೂಲವಾಗಲು ನೀಡಿದ್ದೇವೆ. 30 ವರ್ಷಗಳ ಕಾಲ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣವನ್ನು ನಿರ್ವಹಣೆ ಮಾಡುತ್ತೇವೆ ಎಂದು ತಿಳಿಸಿದರು.

Edited By

Shruthi G

Reported By

Shruthi G

Comments