ಬಿಬಿಎಂಪಿ ಶಾಲೆ, ಕಾಲೇಜುಗಳಿಗೆ ಇನ್ಮುಂದೆ ಉಚಿತ ವೈಫೈ ಸೌಲಭ್ಯ..!

05 Jul 2018 10:23 AM | General
376 Report

ಬಿಬಿಎಂಪಿ ಶಾಲೆ ಮತ್ತು ಕಾಲೇಜುಗಳಿಗೆ ಉಚಿತವಾಗಿ ವೈ-ಫೈ ವ್ಯವಸ್ಥೆಯನ್ನು ಕಲ್ಪಿಸಲು ಪಾಲಿಕೆಯ ಶಿಕ್ಷಣ ಇಲಾಖೆಯು ಈಗಾಗಲೇ ಚಿಂತನೆಯನ್ನು ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.

ಬಿಬಿಎಂಪಿ ಶಾಲಾ ಮತ್ತು ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಬಿಬಿಎಂಪಿ ಶಿಕ್ಷಣ ಇಲಾಖೆಯು ಎಲ್ಲಾ ರೀತಿಯ ಪ್ರಯತ್ನವನ್ನು ನಡೆಸುತ್ತಿದೆ. ಮೂಲಭೂತ ಸೌಕರ್ಯಗಳು ಸರಿಯಾಗಿ ಇಲ್ಲದ ಕಾರಣ ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರಲು ಹಿಂದೇಟು ಹಾಕುತ್ತಿದ್ದರು. ವಿದ್ಯಾರ್ಥಿಗಳನ್ನು ಶಾಲಾ, ಕಾಲೇಜುಗಳ ಕಡೆ ಸೆಳೆಯಲು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾಗಿದೆ.ಅಷ್ಟೆ ಅಲ್ಲದೆ ಬಸ್‌ ನಿಲ್ದಾಣಗಳಲ್ಲಿ ಪಾಸ್‌ ಪಡೆಯಲು ಸಾಲಿನಲ್ಲಿ ನಿಲ್ಲಬೇಕಾಗಿತ್ತು ಅದನ್ನು ತಪ್ಪಿಸಲು ಶಾಲಾ, ಕಾಲೇಜುಗಳ ಮೂಲಕವೇ ಪಾಸ್‌ಗಳನ್ನು ವಿತರಿಸುವ ವ್ಯವಸ್ಥೆಯನ್ನು ಕೂಡ ಮಾಡಿದೆ.ಆದರೆ, ಪಾಲಿಕೆ ಒಡೆತನದ ಶಾಲಾ ಕಾಲೇಜುಗಳಲ್ಲಿ ಪಾಸ್‌ಗಳಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಅಂತರ್ಜಾಲದ ಸೌಲಭ್ಯ ಲಭ್ಯವಿರಲಿಲ್ಲ ಹೀಗಾಗಿ, ಮಕ್ಕಳು ಪಾಸ್‌ಗಳನ್ನು ಪಡೆಯಲಾಗದೆ ತೊಂದರೆ ಅನುಭವಿಸುವಂತಾಗಿತ್ತು. ಖಾಸಗಿ ಸೈಬರ್‌ ಸೆಂಟರ್‌ಗಳಲ್ಲಿ ಪ್ರತಿ ಅರ್ಜಿ ಸಲ್ಲಿಕೆಗೆ 50 ರೂ. ಶುಲ್ಕ ಕೊಡಬೇಕಾಗಿತ್ತು. ಈ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿಯೇ ಪಾಲಿಕೆ ಶಿಕ್ಷಣ ಇಲಾಖೆ ಅಧಿಕಾರಿಗಳು 61 ಶಾಲಾ-ಕಾಲೇಜುಗಳಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Edited By

Manjula M

Reported By

Manjula M

Comments