ರಸ್ತೆ ಅಪಘಾತಕ್ಕೊಳಗಾದವರಿಗೆ ನೆರವಾಗಲು ಭಯ ಬೇಡ; ನಿಮ್ಮ ರಕ್ಷಣೆಗೆ ಕಾನೂನು ಇದೆ

04 Jul 2018 5:37 PM | General
360 Report

ರಸ್ತೆ ಅಪಘಾತಕ್ಕೀಡಾದವರಿಗೆ ಸಾಮಾನ್ಯವಾಗಿ ಸಹಾಯ ಮಾಡಲು ಯಾರು ಮುಂದಾಗುವುದಿಲ್ಲ. ಅಲ್ಲಿದಂತಹ ಜನರು ಹಿಂದೆ ಮುಂದೆ ನೋಡುತ್ತಾರೆ, ನಂತರ ಪೊಲೀಸ್ ಠಾಣೆ, ಕೋರ್ಟ್, ಕಚೇರಿ ಓಡಾಡಬೇಕಾಗುತ್ತದೆ ಎಂದು ಅಂದುಕೊಳ್ಳುವವರೇ  ಜಾಸ್ತಿ. ಆದರೆ ರಸ್ತೆ ಅಪಘಾತಕ್ಕೀಡಾದವರನ್ನು ಕಾಪಾಡುವ ಜನರನ್ನು ರಕ್ಷಿಸುವ ಕಾನೂನುಗಳು ಕೂಡ ನಮ್ಮಲ್ಲಿವೆ ಎಂಬುದು ಸಾಕಷ್ಟು ಜನಕ್ಕೆ ತಿಳಿದೆ ಇಲ್ಲ.

ಕರ್ನಾಟಕ ಸರ್ಕಾರವು ಕರ್ನಾಟಕ ಪರೋಪಕಾರ ಮತ್ತು ವೈದ್ಯಕೀಯ ವೃತ್ತಿಪರ ಕಾಯ್ದೆ 2016ನ್ನು ಜಾರಿಗೆ ತಂದಿತ್ತು. ಅದರ ನಿಯಮ ಅಪಘಾತಕ್ಕೀಡಾದ ವ್ಯಕ್ತಿಗಳಿಗೆ ಸಹಾಯ ಮಾಡಿದವರಿಗೆ ಯಾವುದೇ ಕಾನೂನಾತ್ಮಕ ಅಥವಾ ಕಾರ್ಯವಿಧಾನದ ಕಿರುಕುಳ ನೀಡಬಾರದೆಂದು ತಿಳಿಸಲಾಗಿದೆ. ಆದರೆ ಇದರ ಬಗ್ಗೆ ಜನರಿಗೆ ಅರಿವು ಇಲ್ಲ ಎನ್ನುತ್ತಾರೆ ವ್ಯಕ್ತಿ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರು ಚಿಕಿತ್ಸೆ ಆರಂಭಿಸುವವರೆಗಿನ ಅವಧಿಯು ತುಂಬಾ ಮುಖ್ಯವಾಗಿರುತ್ತದೆ. ಅಪಘಾತಕ್ಕೀಡಾದ ಮೊದಲ ಗಂಟೆಯನ್ನು ಗೋಲ್ಡನ್ ಅವರ್ ಎಂದು ಹೇಳುತ್ತಾರೆ. ಆದರೆ ಅವರ ಸಹಾಯಕ್ಕೆ ಜನರು ಬರಬೇಕಷ್ಟೆ. ಈ ನಿಟ್ಟಿನಲ್ಲಿ ಸರ್ಕಾರಗಳು ಮತ್ತು ಸರ್ಕಾರೇತರ ಸಂಘಟನೆಗಳು ಜನತೆಯಲ್ಲಿ ಅರಿವು ಮೂಡಿಸಬೇಕಿದೆ ಎಂದು ಸೇವ್ ಲೈಫ್ ಫೌಂಡೇಶನ್ ನ ಸ್ಥಾಪಕ ಪಿಯೂಷ್ ತೆವಾರಿ ತಿಳಿಸಿದ್ದಾರೆ. ರಾಜ್ಯ ಸರ್ಕಾರವು  ಜಾರಿಗೆ ತಂದಿರುವ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯಡಿ ರಸ್ತೆ ಅಪಘಾತಕ್ಕೀಡಾದವರಿಗೆ 48 ಗಂಟೆಗಳವರೆಗೆ ಉಚಿತ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತದೆ. ಇದು ರಸ್ತೆ ಅಪಘಾತಕ್ಕೀಡಾದ ಎಲ್ಲಾ ರೋಗಿಗಳಿಗೆ ಕೂಡ ಅನ್ವಯವಾಗುತ್ತದೆ. ಇಲ್ಲಿ ಹಣಕಾಸು ಸ್ಥಿತಿಗತಿ, ಜಾತಿ, ಧರ್ಮ ಯಾವುದೇ ಲೆಕ್ಕಾಚಾರ ಹಾಕದೆ ಎಲ್ಲರಿಗೂ ಮೊದಲ 48 ಗಂಟೆಗಳ ಚಿಕಿತ್ಸೆಯನ್ನು ಸಂಪೂರ್ಣವಾಗಿ ಉಚಿತವಾಗಿ ಈ ಯೋಜನೆಯಲ್ಲಿ  ನೀಡಲಾಗುತ್ತದೆ.

Edited By

Manjula M

Reported By

Manjula M

Comments