ಕುಂತಲ್ಲೆ ಪಡೆಯಿರಿ ಪಾನ್ (PAN) ಕಾರ್ಡ್..!ನೀವು ಮಾಡಬೇಕಾಗಿರುವುದು ಇಷ್ಟೆ..!

03 Jul 2018 11:31 AM | General
787 Report

ಇದೀಗ ಎಲ್ಲ ಕಡೆಯಲ್ಲಿಯೂ ಕೂಡ ಡಿಜಿಟಲ್ ಇಂಡಿಯಾದ ಸಲುವಾಗಿ ಎಲ್ಲವೂ ಡಿಜಿಟಲ್ ಮಾಡುವುದಕ್ಕೆ ಭಾರತ ಸರ್ಕಾರವು ಮುಂದಾಗಿದ್ದು ಆದಾಯ ತೆರಿಗೆ ಇಲಾಖೆಯಲ್ಲಿಯೂ ಮಹತ್ವ ರೀತಿಯ ಬದಲಾವಣೆಗಳನ್ನು ಮಾಡಿದೆ. ಈಗ ಮತ್ತೊಂದು ಮಹತ್ವದ ಯೋಜನೆಯನ್ನು ಜಾರಿಗೆ ತರುವ ಕೆಲಸಕ್ಕೆ ಮುಂದಾಗದೆ.

ಎಸ್… ಪರ್ಮನೆಂಟ್ ಅಕೌಂಟ್ ನಂಬರ್ (PAN) ಪಾನ್ ಕಾರ್ಡ್ ಅನ್ನು ಈಗ ನೀವು ಇದ್ದ ಜಾಗದಲ್ಲಿಯೇ ಪಡೆದುಕೊಳ್ಳುವುದಕ್ಕೆ ಆದಾಯ ತೆರಿಗೆ ಇಲಾಖೆ ಅನುವು ಮಾಡಿಕೊಟ್ಟಿದೆ. ಪ್ರತಿಯೊಬ್ಬ ಭಾರತೀಯ ಪ್ರಜೆಯು ಆದಾಯ ತೆರಿಗೆ ಪಾವತಿ ಮಾಡಬೇಕು ಮತ್ತು ದೇಶದ ಅಭಿವೃದ್ದಿಗೆ ಕೈಜೋಡಿಸುವಂತೆ ಆಗಲಿ ಎಂದು ಇನ್ಸ್ಟೆಂಟ್ ಪ್ಯಾನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಅವಕಾಶವನ್ನು ಮಾಡಿಕೊಟ್ಟಿದೆ. ಈ ಪಾನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಯಾವುದೇ ರೀತಿಯ ಹೆಚ್ಚು ದಾಖಲೆಗಳು ಬೇಕಾಗಿಲ್ಲ. ಕೇವಲ ಒಂದು ಮೊಬೈಲ್ ಮತ್ತು ಆಧಾರ್ ಕಾರ್ಡ್ ಇದ್ದರೆ ಸಾಕು ಆಧಾಯ ತೆರಿಗೆ ಇಲಾಖೆಯ ಪೋರ್ಟಾಲ್ ನಲ್ಲಿ ಅವಕಾಶ ಮಾಡಿಕೊಟ್ಟಿದ್ದು ಅಲ್ಲಿ ತಮ್ಮ ವೈಯಕ್ತಿಕ ವಿವಿರ ತುಂಬಿ ಮೊಬೈಲ್ ನಂಬರ್ ಮತ್ತು ಆಧಾರ್ ನಂಬರ್ ನೀಡಿದರೆ ಸಾಕು ಕೂಡಲೆ ನಿಮಗೆ ಇನ್‍ಸ್ಟೆಂಟ್ ಆಧಾರ್ ನಂಬರ್ ಸಿಗಲಿದೆ. ಈ ನಂಬರ್ ಅನ್ನು ನಾವು ನಮ್ಮ ಆಧಾಯ ತೆರಿಗೆ ಇಲಾಖೆಯ ಕೆಲಸಗಳಿಗೆ ಬಳಸಿಕೊಳ್ಳಬಹುದು. ಈ ಯೋಜನೆಯಲ್ಲಿ ಮೊದಲು ಬಂದವರಿಗೆ ಮೊದಲ ಆಧ್ಯತೆಯಾಗಿ ನೀಡಲಾಗುತ್ತದೆ. https://portal.incometaxindiaefiling.gov.in/e-Filing/Services/ApplyePAN.html ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಇ-ಪಾನ್ ಕಾರ್ಡ್ ಅರ್ಜಿಯನ್ನು ತುಂಬಿ ಪ್ಯಾನ್ ಕಾರ್ಡ್ ಪಡೆಯಿರಿ.

Edited By

Manjula M

Reported By

Manjula M

Comments