ಮೀನು ಪ್ರಿಯರೆ ಎಚ್ಚರ..! ಮೀನು ತಿನ್ನುವ ಮೊದಲು ಇದನ್ನೊಮ್ಮೆ ಓದಿ

02 Jul 2018 2:18 PM | General
668 Report

ಬಲ್ಲವನೆ ಬಲ್ಲ ಬೆಲ್ಲದ ರುಚಿಯ ಎನ್ನುವ ಹಾಗೆ ಮೀನಿನ ರುಚಿಯನ್ನು ಕೂಡ ಬಲ್ಲವನೇ ಬಲ್ಲ. ಮೀನು ಪ್ರಿಯರಿಗಂತೂ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುತ್ತದೆ. ಆದರೆ ಮತ್ಸ್ಯವನ್ನು ತಿನ್ನುವ ಮೊದಲು ಸ್ವಲ್ಪಎಚ್ಚರ ವಹಿಸಿ ಏಕೆಂದರೆ ಮೀನಿನ ಮೂಲಕ ವಿಷಕಾರಿ ರಾಸಾಯನಿಕಗಳು ದೇಹ ಸೇರುತ್ತಿವೆ ಎಂದು ಹೇಳಲಾಗುತ್ತಿದೆ.

ಮಳೆಗಾಲ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧವನ್ನು  ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಆಂಧ್ರ ಪ್ರದ್ರೇಶ, ತಮಿಳುನಾಡು, ಕೇರಳದಿಂದ ಮೀನುಗಳು ಪೊರೈಕೆ ಆಗುತ್ತಿದೆ. ಆದರೆ ಆ ಮೀನುಗಳು ದೀರ್ಘಕಾಲ ಕೆಡಬಾರದು ಅಂತ ಅಪಾಯಕಾರಿ ರಾಸಾಯನಿಕಗಳನ್ನು ಬಳಸುತ್ತಿದ್ದಾರಂತೆ. ಮಂಜುಗಡ್ಡೆ ಬೆಲೆ ದುಬಾರಿ ಆಗಿರುವ ಕಾರಣ ಕಡಿಮೆಗೆ ಸಿಗುವ ಅಮೋನಿಯಂ ಮಿಶ್ರಿತ ಕೆಮಿಕಲ್ ಇಂಜೆಕ್ಟ್ ಮಾಡುತ್ತಿದ್ದಾರೆ ಎಂಬ ಆರೋಪವು ಕೂಡ ಕೇಳಿಬಂದಿದೆ. ಹಾಗಾಗಿ ಮೀನು ತಿನ್ನುವ ಮೊದಲು ಸ್ವಲ್ಪ ಯೋಚಿಸಿ.

Edited By

Manjula M

Reported By

Manjula M

Comments