ಸಾರಿಗೆ ಇಲಾಖೆಯಿಂದ ಮಹಿಳಾ ಸಿಬ್ಬಂದಿಗಳಿಗೆ ಶಾಕಿಂಗ್ ನ್ಯೂಸ್..!

02 Jul 2018 10:03 AM | General
550 Report

ಇತ್ತಿಚಿಗೆ ಹೆಣ್ಣುಮಕ್ಕಳ ಏಳಿಗೆಗಾಗಿ ಸಾಕಷ್ಟು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ನರೇಂದ್ರ ಮೋದಿಯವರ  ಸರ್ಕಾರದಲ್ಲಿ ಭೇಟಿ ಪಡಾವೋ, ಭೇಟಿ ಬಚಾವೋ ಎಂದು ಮಹಿಳೆಯ ಅಭಿವೃದ್ಧಿಗೆ ಪಣತೊಟ್ಟಿದೆ. ಆದರೆ ರಾಜ್ಯ ಸಾರಿಗೆ ಇಲಾಖೆಯಲ್ಲಿ ಮಾತ್ರ ಮಹಿಳೆಯರು ಕೆಲಸಕ್ಕೆ ಬೇಡ ಎಂದು ಹೇಳಲಾಗುತ್ತಿದೆ.

ಹಾಸನ ಕೆಎಸ್‍ಆರ್ ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಯು ಮಹಿಳೆಯರಿಗೆ ಕೆಲಸ ಕೊಡೋದು ಬೇಡ ಪ್ಲೀಸ್ ಎಂದು ಪತ್ರವೊಂದನ್ನು ಬರೆದಿದ್ದಾರೆ. ಕೆಎಸ್‍ಆರ್ ಟಿಸಿ ತಾಂತ್ರಿಕ ವಿಭಾಗದಲ್ಲಿ ನೇಮಕಾತಿಯ ಪ್ರಕ್ರಿಯೆಯು ನಡೆಯುತ್ತಿದ್ದು, ಈ ಕೆಲಸಕ್ಕೆ ಮಹಿಳೆಯರ ನೇಮಕ ಬೇಡ, ಪುರುಷರಿಗಷ್ಟೇ ಅವಕಾಶ ನೀಡೋಣ ಅಂತಾ ಬೆಂಗಳೂರು ಕೆಎಸ್‍ಆರ್ ಟಿಸಿ ಕೇಂದ್ರ ಕಚೇರಿಗೆ ಪತ್ರವನ್ನು ಬರೆದಿದ್ದಾರೆ. ತಾಂತ್ರಿಕ ವಿಭಾಗದಲ್ಲಿ ಭದ್ರತೆಗಾಗಿ ಮಹಿಳೆಯರನ್ನು ನಿಯೋಜಿಸೋದಕ್ಕೆ ಕಷ್ಟವಾಗುತ್ತದೆ. ಮಹಿಳೆಯರು ತುಂಬಾ ಸೂಕ್ಷ್ಮ ಮನಸ್ಥಿತಿಯವರು ಹಾಗಾಗ ರಜೆ ಹಾಕುತ್ತಾರೆ. ಪ್ರಸೂತಿ ರಜೆ, ಆರೋಗ್ಯ ಸರಿ ಇಲ್ಲ ಹೀಗೆ ನಾನಾ ರೀತಿಯ ಕಾರಣದಿಂದ ದೀರ್ಘ ರಜೆಯನ್ನು ಹಾಕುತ್ತಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Edited By

Manjula M

Reported By

Manjula M

Comments