ಟೆಲಿಕಾಂ ಮಾರುಕಟ್ಟೆಯೇ ತಿರುಗಿ ನೋಡುವಂತೆ ಬಂಪರ್ ಆಫರ್ ಕೊಟ್ಟ BSNL..!!

27 Jun 2018 5:38 PM | General
490 Report

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸರಕಾರಿ ಸ್ವಾಮ್ಯದ BSNL ಸಾಕಷ್ಟು ಹವಾ ಕ್ರಿಯೇಟ್ ಮಾಡಿದೆ. ಈಗಾಗಲೇ ಮೂರು ತಿಂಗಳಿಗೂ ಅಧಿಕವ ವ್ಯಾಲಿಡಿಟಿಯ ಪ್ಲಾನ್ ಗಳನ್ನು ಘೋಷಣೆ ಮಾಡಿದ್ದ BSNL, ಇದೀಗ ಮತ್ತೊಂದು ಕ್ರಾಂತಿ ಕಾರಕ ಪ್ಲಾನ್ ವೊಂದನ್ನು ಲಾಂಚ್ ಮಾಡಿದ್ದು, ನಿತ್ಯ 2GB ಡೇಟಾವನ್ನು ನೀಡುವ ಮೂಲಕ ಗ್ರಾಹಕರಿಗೆ ಆಫರ್ ನೀಡಿದೆ.

ಜಿಯೋ ಕಾರ್ಯರಂಭದ ನಂತರದಲ್ಲಿ ಸಾಕಷ್ಟು ಚಟುವಟಿಕೆಯಿಂದ ಕೂಡಿರುವ BSNL, ಖಾಸಗಿ ಟೆಲಿಕಾಂ ಕಂಪನಿಗಳು ನಾಚುವಂತಹ ಆಪರ್ ಗಳನ್ನು ಲಾಂಚ್ ಮಾಡಲು ಮುಂದಾಗಿದೆ. ಇದರಿಂದಾಗಿ BSNL ಸ್ಪರ್ಧೆಯನ್ನು ಎದುರಿಸಲು ಇತರೆ ಟೆಲಿಕಾಂ ಕಂಪನಿಗಳು ಉತ್ತಮ ಆಫರ್ ಗಳನ್ನ ಲಾಂಚ್ ಮಾಡುತ್ತಿವೆ. ಸದ್ಯ ಮಾರುಕಟ್ಟೆಯಲ್ಲಿ ಇರುವ ಎಲ್ಲಾ ಟೆಲಿಕಾಂ ಕಂಪನಿಗಳಿಗೂ ಸೆಡ್ಡು ಹೊಡೆಯಲು ಒಂದು ವರ್ಷದ ಪ್ಲಾನ್ ಅನ್ನು BSNL ಲಾಂಚ್ ಮಾಡಿದೆ. BSNL ಸದ್ಯ ನೀಡಿರುವ ಪ್ಲಾನ್ ಒಂದು ವರ್ಷದ ವ್ಯಾಲಿಡಿಟಿಯನ್ನು ಹೊಂದಿದೆ. ಅಂದರೆ ಒಮ್ಮೆ ರೀಚಾರ್ಜ್ ಮಾಡಿಸಿದರೆ 365 ದಿನಗಳ ಕಾಲ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಮೂರು ತಿಂಗಳಿಗೊಮ್ಮೆ ರೀಚಾರ್ಜ್ ಮಾಡಿಸಿಕೊಳ್ಳುವ ಅವಶ್ಯಕತೆ ತಲೆನೋವಿರುವುದಿಲ್ಲ. ಇದು ದೀರ್ಘಾವಧಿಯ ಲಾಭವನ್ನು ಮಾಡಿಕೊಡಲಿದೆ.

BSNL ಒಂದು ವರ್ಷದ ವ್ಯಾಲಿಡಿಟಿಯನ್ನು ನೀಡುವುದರೊಂದಿಗೆ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಸಲುವಾಗಿ ನಿತ್ಯ 2GB ಡೇಟಾ ನೀಡಲು ಮುಂದಾಗಿದೆ. ಒಟ್ಟು 730 GB ಡೇಟಾ ಬಳಕೆಗೆ ಲಭ್ಯವಾಗಲಿದೆ. ಇದಲ್ಲದೇ ನಿತ್ಯ 100 SMSಗಳನ್ನು ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಇದರಿಂದಾಗಿ ಒಂದೇ ಪ್ಲಾನ್ ನಲ್ಲಿ ಬಳಕೆದಾರರಿಗೆ ದೀರ್ಘಾವಧಿ ಮತ್ತು ಹೆಚ್ಚಿನ ಡೇಟಾ ಲಾಭವನ್ನು ಪಡೆಯಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಇದು ಎರಡು ಮಾದರಿಯ ಲಾಭವನ್ನು ಮಾಡಿಕೊಡಲಿದೆ. BSNL ಒಂದು ವರ್ಷದ ವ್ಯಾಲಿಡಿಟಿಯ ಪ್ಲಾನ್ ಬೆಲೆಯೂ ರೂ. 1,999 ಆಗಲಿದ್ದು, ಇದು ಬಳಕೆದಾರರಿಗೆ ಎಲ್ಲಾ ಮಾದರಿಯಲ್ಲಿಯೂ ಲಾಭವನ್ನು ಮಾಡಿಕೊಡಲಿದೆ. ಡೇಟಾ, ಕರೆ, ವ್ಯಾಲಿಡಿಟಿ ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ಬಳಕೆದಾರರಿಗೆ ಹೇಳಿ ಮಾಡಿಸಿದ ಆಫರ್ ಇದಾಗಿದೆ.

Edited By

Shruthi G

Reported By

Shruthi G

Comments