ನೀವು ಪಾಸ್‌ಪೋರ್ಟ್ ಅರ್ಜಿ ಸಲಿಸಬೇಕ? ಹಾಗಾದ್ರೆ ಈ ಮೊಬೈಲ್ ಆಯಪ್ ಬಳಸಿ

27 Jun 2018 2:54 PM | General
397 Report

'ಪಾಸ್‌ಪೋರ್ಟ್ ಸೇವಾ ದಿನ' ಪ್ರಯುಕ್ತ ಕೇಂದ್ರ ಸರಕಾರ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಮೊಬೈಲ್ ಆಯಪ್ ಸೇವೆಯನ್ನು ಜಾರಿಗೆ ತಂದಿದೆ. ಆದ್ದರಿಂದ ಇನ್ನು ಮುಂದೆ ಪಾಸ್‌ಪೋರ್ಟ್‌ಗಾಗಿ ಕಚೇರಿ ಎದುರು ಸರದಿಯಲ್ಲಿ ನಿಲ್ಲಬೇಕಾದ ಅವಶ್ಯಕತೆ ಇಲ್ಲ.

ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಅಧಿಕಾರಿಗಳ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಈ ಸೇವೆಗೆ ಚಾಲನೆ ನೀಡಿದರು. ಆಯಪ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು 'ಪಾಸ್‌ಪೋರ್ಟ್ ಕ್ರಾಂತಿ' ಎಂದು ಅವರು ಬಣ್ಣಿಸಿದರು.

ಆಯಪ್ ಬಳಸುವುದ್ದೆಗೆ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್…

  • ಸ್ಮಾರ್ಟ್‌ಫೋನ್‌ನಲ್ಲಿರುವ ಗೂಗಲ್ ಪ್ಲೇ ಸ್ಟೋರ್ ಅಥವಾ ಐ ಫೋನ್‌ನಲ್ಲಿರುವ ಆಯಪ್ ಸ್ಟೋರ್ ಮೂಲಕ ಪಾಸ್‌ಪೋರ್ಟ್ ಆಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
  • ಬಳಿಕ ಆಯಪ್ ಮೂಲಕ ಪಾಸ್‌ಪೋರ್ಟ್ ಕಚೇರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹೆಸರು, ಜನ್ಮ ದಿನಾಂಕ, ಇ ಮೇಲ್, ಲಾಗ್ ಇನ್ ಐಡಿ ನಮೂದಿಸಬೇಕು.
  • ಲಾಗ್ ಇನ್ ಐಡಿ ಮತ್ತು ಇ ಮೇಲ್ ದೃಢೀಕರಣಗೊಂಡ ಬಳಿಕ ಪಾಸ್ ವರ್ಡ್, ಹಿಂಟ್ ಕ್ವಶ್ಚನ್, ಕ್ಯಾಪ್ಚ (CAPTCHA) ಕೋಡ್ ಎಂಟರ್ ಮಾಡಬೇಕು. ಅನಂತರ ನೋಂದಣಿ ಪ್ರಕ್ರಿಯೆ ಪೂರ್ತಿಗೊಳಿಸಲು ಸಬ್ ಮಿಟ್ ಬಟನ್ ಒತ್ತಬೇಕು.
  • ಇದಾದ ಬಳಿಕ ನಿಗದಿತ ಪಾಸ್‌ಪೋರ್ಟ್ ಕಚೇರಿಯಿಂದ ದಾಖಲಾಗಿರುವ ಇ ಮೇಲ್‌ಗೆ ಲಿಂಕ್ ಬರುತ್ತದೆ. ಅದನ್ನು ಕ್ಲಿಕ್ ಮಾಡುವ ಮೂಲಕ ಖಾತೆಯನ್ನು ಆಯಕ್ಟಿವೇಟ್ ಮಾಡಬೇಕು. ಬಳಿಕ ಅಲ್ಲಿ ನೀಡಿರುವ ಸೂಚನೆಯನ್ನು ಪಾಲಿಸಬೇಕು.
  • ಹೀಗೆ ಲಿಂಕ್ ಮೂಲಕ ಖಾತೆ ಆಯಕ್ಟಿವೇಟ್ ಬಳಿಕ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ದೃಢೀಕರಣಕ್ಕೆ ಅಗತ್ಯವಾಗಿರುವ ದಾಖಲೆಗಳು, ಪಾಸ್‌ಪೋರ್ಟ್ ಕೇಂದ್ರ, ಶುಲ್ಕಗಳ ವಿವರ ಕೂಡಾ ಸಿಗುತ್ತದೆ.

Edited By

Shruthi G

Reported By

Shruthi G

Comments