ಮೊಬೈಲ್​ ಬಳಕೆ ಕುರಿತು ಪತ್ರಕರ್ತರಿಗೆ ಗುಡ್ ನ್ಯೂಸ್ ​ಕೊಟ್ಟ ಸುಪ್ರೀಂಕೋರ್ಟ್..!

26 Jun 2018 2:53 PM | General
223 Report

ಪತ್ರಕರ್ತರಿಗೆ ಸುಪ್ರೀಂಕೋರ್ಟ್​ ಗುಡ್ ನ್ಯೂಸ್ ನೀಡಿದೆ. ಮಾನ್ಯತೆ ಪಡೆಯದ ಪತ್ರಕರ್ತಕರೂ ಕೂಡ ಕೋರ್ಟ್​​ಹಾಲ್​ಗೆ ಮೊಬೈಲ್​ ತೆಗೆದುಕೊಂಡು ಹೋಗಲು ಸುಪ್ರೀಂಕೋರ್ಟ್ ಅವಕಾಶ ಕೊಟ್ಟಿದೆ.

ಇತ್ತೀಚೆಗೆ ಮಾನ್ಯತೆ ಪಡೆದ ಪತ್ರಕರ್ತರಿಗೆ ಮೊಬೈಲ್​ ತೆಗೆದುಕೊಂಡು ಹೋಗಲು ಸುಪ್ರೀಂ ಅನುವು ಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ ಈಗ ನೋಂದಣಿ ರಹಿತ ಪತ್ರಕರ್ತಕರಿಗೂ ಫೋನ್​ ಕೊಂಡೊಯ್ಯಲು ಸುಪ್ರೀಂ ಅವಕಾಶ ನೀಡಿದೆ. ಈ ಬಗ್ಗೆ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಸಹಾಯಕ ರಿಜಿಸ್ಟರ್ ಡಾ.ಸುಶೀಲ್​ ಕುಮಾರ್ ಶರ್ಮಾ ಅಧಿಸೂಚನೆ ಹೊರಡಿಸಿದ್ದಾರೆ. 'ಗೌರವಾನ್ವಿತ ಸಿಜಿಐ ಅವರು ಕೋರ್ಟ್​ರೂಮ್​ನಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗೂ ಪತ್ರಕರ್ತರು ಮೊಬೈಲ್​ ತರಲು ಅವಕಾಶ ಕೊಟ್ಟಿದ್ದಾರೆ.  ರಿಜಿಸ್ಟ್ರಾರ್​ ಮೂಲಕ 6 ತಿಂಗಳ ಪಾಸ್​ ಪಡೆದ ಎಲ್ಲರ ಮೊಬೈಲ್​ಗೂ ಅವಕಾಶ ನೀಡಲಾಗಿದೆ. ಕೋರ್ಟ್​ರೂಮ್​ನಲ್ಲಿ ಮೊಬೈಲ್ ಸೈಲೆಂಟ್​ ಮೂಡ್​ನಲ್ಲಿರಬೇಕೆಂದು' ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Edited By

Shruthi G

Reported By

Shruthi G

Comments