ಶಾದಿ ಭಾಗ್ಯ ಯೋಜನೆ ಅನುದಾನ ದುಪ್ಪಟ್ಟು..?

26 Jun 2018 10:12 AM | General
472 Report

ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆ ಹಿನ್ನಲೆಯಲ್ಲಿ ಸಮುದಾಯದ ಬೇಡಿಕೆಗಳ ಬಗ್ಗೆ ಚರ್ಚಿಸಲು ಆಲ್ಫಸಂಖ್ಯಾತ ಸಚಿವ ಜಮೀರ್ ಅಹ್ಮದ್ ನಗರಾಭಿರುದ್ದಿ ಸಚಿವ ಯು.ಟಿ ಖಾದರ್ ನೇತೃತ್ವದಲ್ಲಿ ಮುಸ್ಲಿಮ ನಾಯಕರ ಜೊತೆ ಸಭೆ ನಡೆಸಿದರು .

ನಗರದ ಖಾಸಗಿ ಹೋಟೆಲ್‌ನಲ್ಲಿ  ನಡೆದ ಸಭೆಯಲ್ಲಿ  ಶಾದಿ ಭಾಗ್ಯ ಯೋಜನೆಯಲ್ಲಿ ಈಗ ಪ್ರತಿ ಹೆಣ್ಣುಮಗಳಿಗೆ 50 ಸಾವಿರ ಸಹಾಯ ದನವನ್ನು 1 ಲಕ್ಷಕ್ಕೆ ಹೆಚ್ಚಿಸಬೇಕು ಎನ್ನುವ ಬಗ್ಗೆ ಪ್ರಸ್ತಾಪಿಸಲಾಗಿದೆ ಮತ್ತು ಸಮುದಾಯದ ಶೈಕ್ಷಣಿಕ ಮತ್ತು ಉದ್ಯೋಗಕ್ಕೆ ಹೆಚ್ಚು ಒತ್ತು ನೀಡುವ ಕಾರ್ಯಕ್ರಮಕ್ಕೆ ಬಜೆಟ್ ನಲ್ಲಿ  ಹೆಚ್ಚು ಅನುದಾನ ಮೀಸಲಿಡಬೇಕು. ಮುಖ್ಯಮಂತ್ರಿಗಳು ನಡೆಸುವ ಪೂರ್ವಭಾವಿ ಸಭೆಯಲ್ಲಿ ಹೆಚ್ಚು ಮನವಾರಿಕೆ ಮಾಡಿಕೊಡಬೇಕು ಎಂದು ತಿಳಿದು ಬಂದಿದೆ. ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ಕೆ. ರೆಹಮಾನ್ ಖಾನ್ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಿ.ಎ ಫಾರೂಕ್ , ಶಾಸಕ ಎನ್.ಎ ಹ್ಯಾರಿಸ್, ಕನಿಜ್ ಫಾತಿಮಾ ಮತ್ತು ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಸೇರಿದಂತೆ ಹಲವು ಮುಸ್ಲಿಂ ನಾಯಕರು ಇದ್ದರೂ ಎಂದು ತಿಳಿದು ಬಂದಿದೆ.

Edited By

Shruthi G

Reported By

Shruthi G

Comments