ಗೂಗಲ್ ಕ್ರೋಮ್ ಬಳಸಲು ಇಂಟರ್ನೆಟ್  ಬೇಕಾಗಿಲ್ಲ..!

22 Jun 2018 11:17 AM | General
247 Report

ಗೂಗಲ್ ಗುರುವಾರ ಆಂಡ್ರಾಯ್ಡ್  ಡಿವೈಸಸ್ ಗಾಗಿ ಹೊಸ ಫೀಚರ್ ವೊಂದನ್ನು ಶುರು ಮಾಡಿದೆ. ಇದರ ಸಹಾಯದಿಂದ ಭಾರತವು ಸೇರಿದಂತ ವಿಶ್ವದಾದ್ಯಂತ ಜನರು ಇಂಟರ್ನೆಟ್ ಸೌಲಭ್ಯವಿಲ್ಲದೆ ವೆಬ್ ಸರ್ಚ್ ಮಾಡಬಹುದು ಎಂದು ತಿಳಿಸಿ.

ಇಂಟರ್ನೆಟ್ ಸೌಲಭ್ಯ ಇಲ್ಲದೆ ಹೋದರೂ ಕೂಡ, ವೈಫೈ ಇಲ್ಲದೆ ಹೋದರೂ ಸಹ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಗೂಗಲ್ ಆಂಡ್ರಾಯ್ಡ್ ಆಫ್ಲೈನ್ ​​ಉತ್ಪನ್ನ ನಿರ್ವಾಹಕರಾದ  ಅಮಂಡಾ ಬಾಸ್ ತಿಳಿಸಿದ್ದಾರೆ. ಸ್ವಯಂಚಾಲಿತವಾಗಿ ಡೌನ್ಲೋಡ್ ಆದ ವಿಷ್ಯ ಅಥವಾ ಫೋಟೋ ಇಂಟರ್ನೆಟ್ ಇಲ್ಲದ ಸಮಯದಲ್ಲೂ ನಿಮಗೆ ಸಿಗುತ್ತದೆ. Chrome ನಲ್ಲಿ ಸೈನ್ ಇನ್ ಆದ್ರೆ ಬ್ರೌಸಿಂಗ್ ಇತಿಹಾಸ ನಿಮಗೆ  ಸಿಗಲಿದೆ. ಇದರ ಮೂಲಕ ನೀವು ಲೇಖನ, ಫೋಟೋವನ್ನು ಕೂಡ ವೀಕ್ಷಿಸಬಹದು. ಆಂಡ್ರಾಯ್ಡ್ ನಲ್ಲಿ Chrome ಭಾರತ, ನೈಜೀರಿಯಾ, ಇಂಡೋನೇಷ್ಯಾ, ಬ್ರೆಜಿಲ್ ಸೇರಿದಂತೆ ವಿಶ್ವದ 100 ದೇಶಗಳಲ್ಲಿ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು Chrome ಅಪ್ಡೇಟ್ ಮಾಡಿದಲ್ಲಿ ಮಾತ್ರ ಈ ಸೌಲಭ್ಯವು  ಸಿಗಲಿದೆ ಎಂದು ತಿಳಿಸಿದ್ದಾರೆ.

Edited By

Manjula M

Reported By

Manjula M

Comments