ಬಾಬಾ ರಾಮ್ ದೇವ್ ಗಿನ್ನಿಸ್ ರೆಕಾರ್ಡ್:ಲಕ್ಷಕ್ಕೂ ಅಧಿಕ ಜನರ ಯೋಗ..!

21 Jun 2018 1:16 PM | General
380 Report

4 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಂದು ರಾಜಸ್ಥಾನದಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಅವರ ಮಾರ್ಗದರ್ಶನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಏಕಕಾಲಕ್ಕೆ ಯೋಗಾಸನಗಳನ್ನು ಪ್ರದರ್ಶಿಸಿದ್ದು,ಗಿನ್ನಿಸ್ ರೆಕಾರ್ಡ್ ಪುಟಕ್ಕೆ ಸೇರ್ಪಡೆಯಾಗಿದೆ. ಕಾರ್ಯಕ್ರಮದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಕೂಡ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಳೆದ ವರ್ಷವು ಪತಂಜಲಿ ಯೋಗ ಪೀಠ ಹಲವು ದಾಖಲೆಗಳನ್ನು ನಿರ್ಮಾಣ ಮಾಡಿತ್ತು. 51 ಗಂಟೆಗಳ ಕಾಲ ಅತೀ ದೊಡ್ಡ ಯೋಗ ಮ್ಯಾರಥಾನ್,ಉದ್ದನೆಯ ಶಿರ್ಶಾಸನ ವನ್ನು ಮಾಡಿರುವುದು ದಾಖಲೆ ಪುಟದಲ್ಲಿ ಸೇರಿಕೊಂಡಿತ್ತು. ಇದೀಗಾ ಕೋಟಾದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ 1 ಲಕ್ಷ 5ಸಾವಿರ ಸಂಖ್ಯೆಯ ಯೋಗಾ ಉತ್ಸಾಹಿಗಳನ್ನು ಲೆಕ್ಕಹಾಕಲಾಗಿದೆ,ಇನ್ನೂ ಹೆಚ್ಚಿನ ಜನರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಸನಗಳನ್ನು ಮಾಡುತ್ತಿದ್ದಾರೆ.

Edited By

Manjula M

Reported By

Manjula M

Comments