ನಿಮ್ಮ ರಕ್ಷಣೆಗೆ ಮುಂದಾಗಲಿದೆ ಈ ಹೊಸ ಆ್ಯಪ್..! ಕಷ್ಟದಲ್ಲಿದ್ದವರ ರಕ್ಷಣೆಗೆ ಬರ್ತಾರೆ ಪೊಲೀಸರು

20 Jun 2018 10:30 AM | General
351 Report

ಇತ್ತಿಚಿಗೆ ಪೊಲೀಸ್‌ ಸೇವೆ ಮತ್ತಷ್ಟು ಜನಪರವಾಗಿ ನಿಲ್ಲುತ್ತಿದೆ. ಇನ್ನು ಮುಂದೆ ಠಾಣೆಗಳು ಸೇರಿದಂತೆ ಪೊಲೀಸರ ಸಮಗ್ರ ಮಾಹಿತಿಯನ್ನು ನಾಗರೀಕರು ಆ್ಯಪ್‌ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿಯೇ 'ಕೆಎಸ್‌ಪಿ' ಎಂಬ ಹೆಸರಿನಲ್ಲಿ ಹೊಸ ಆ್ಯಪ್‌ ಸಿದ್ಧಪಡಿಸಿರುವ ಇಲಾಖೆಯು ಮಂಗಳವಾರದಿಂದ ಅದನ್ನು ಸಾರ್ವಜನಿಕರ ಬಳಕೆಗೆ ಬಿಡುಗಡೆ ಮಾಡಿದ್ದಾರೆ.

ಈ ಆ್ಯಪ್‌ನಲ್ಲಿ ಪೊಲೀಸ್‌ ಠಾಣೆಗಳು, ಆ ಠಾಣೆಗೆ ಸಂಬಂಧಪಟ್ಟಂತಹ ಅಧಿಕಾರಿಗಳ ದೂರವಾಣಿ ಸಂಖ್ಯೆ, ಇ-ಮೇಲ್‌ ಹಾಗೂ ದೂರವಾಣಿ ಸಂಖ್ಯೆ ಸೇರಿದಂತೆ ಸಂಪೂರ್ಣವಾದ ವಿವರಗಳು ಲಭ್ಯವಿದೆ. ಅಲ್ಲದೆ ಸಮೀಪವಿರುವ  ಠಾಣೆಗೆ ನೀವಿರುವ ಜಾಗದಿಂದ ಹೇಗೆ ತಲುಪಬೇಕು ಹಾಗೂ ಎಷ್ಟುದೂರವಿದೆ ಎಂಬ ಮಾಹಿತಿಯನ್ನು ಸಹ ತಿಳಿಸಲಾಗಿದೆ.ನೀವು ಯಾವುದೇ ಅಪಾಯಕ್ಕೆ ಸಿಲುಕಿದರೂ ಕೂಡ 'ಎಸ್‌ಓಎಸ್‌' ಎಂಬ ಬಟನ್‌ ಒತ್ತಿದರೆ ತಕ್ಷಣವೇ ಪೊಲೀಸರು ತಕ್ಷಣವೆ ರಕ್ಷಣೆಗೆ ಧಾವಿಸಲಿದ್ದಾರೆ. ನೀವು ತಿಳಿಸಿದ ಮೊಬೈಲ್‌ ನಂಬರ್‌ಗೆ ನೀವಿರುವ ಜಾಗದ ಮಾಹಿತಿ ಸಮೇತ ಸಂದೇಶವು  ಬರುತ್ತದೆ. ಅಲ್ಲದೆ, ಕಳುವಾದ ವಾಹನಗಳು, ಕಾಣೆಯಾದವರ ಬಗ್ಗೆ ಎಫ್‌ಐಆರ್‌ ಕುರಿತ ಮಾಹಿತಿಯನ್ನು ಕೂಡ ಈ ಆ್ಯಪ್‌ನಲ್ಲಿ ಪಡೆದುಕೊಳ್ಳಬಹುದು. ನಿಮ್ಮ ಮೊಬೈಲ್ ನ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 'ಕೆಎಸ್‌ಪಿ' ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ನಂತರ ಒಂದು ಬಾರಿ ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ ಈ ಸಾಫ್ಟ್‌ವೇರ್‌ ಆಕ್ಟಿವೇಟ್‌ ಮಾಡಿಕೊಳ್ಳಬೇಕು. ಸಾರ್ವಜನಿಕರ ಸಲಹೆ ಸೂಚನೆಗಳನ್ನು ಪಡೆದು ಈ ಆ್ಯಪ್‌ ಮುಂದಿನ ದಿನಗಳಲ್ಲಿ ಮತ್ತಷ್ಟುಜನ ಸ್ನೇಹಿಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Edited By

Manjula M

Reported By

Manjula M

Comments