ಇಂಜೆಕ್ಷನ್ ಕೊಡುವ ಮೊದಲು ಸಿರೆಂಜ್ ನಿಂದ ಸ್ವಲ್ಪ ಮೆಡಿಸನ್ ನ ಹೊರಗೆ ಹಾಕ್ತಾರೆ..! ಯಾಕೆ ಗೊತ್ತಾ…?

18 Jun 2018 6:05 PM | General
753 Report

ಸಾಮಾನ್ಯವಾಗಿ  ಮನುಷ್ಯ ಅಂದ ಮೇಲೆ ಕಾಯಿಲೆ ಬೀಳೋದು ಕಾಮನ್ ತಾನೆ.. ಸಣ್ಣ ಪುಟ್ಟ ಜ್ವರ ಅಂತೂ ಬಂದೆ ಬರುತ್ತೆ. ಹಾಗಾದ್ರೂ ನೀವು ಹಾಸ್ಪಿಟಲ್ ಗೆ ಹೋಗೆ ಹೋಗ್ತೀರಾ.. ಆಗ ಇಂಜೆಕ್ಷನ್ ತಗೊಂಡೆ ತಗೋತಿರಾ… ಆ ಸಮಯದಲ್ಲಿ ನೀವು ಒಂದು ವಿಷಯವನ್ನು ನೀವು ಗಮನಿಸಿದ್ದೀರಾ..?

ಅದೇನೆಂದರೆ, ನರ್ಸ್ ಇಲ್ಲವೇ ಡಾಕ್ಟರ್ ಮೆಡಿಸಿನ್‌ ಅನ್ನು ಸಿರಂಜಿನಲ್ಲಿ ಪೂರ್ತಿ ಎಳೆದ ಮೇಲೆ ಅದರಿಂದ ಮೊದಲು ಸ್ವಲ್ಪ ಮೆಡಿಸಿನ್ ಹೊರಗೆ ಬಿಟ್ಟಮೇಲೆಯೇ ಇಂಜೆಕ್ಷನ್ ಮಾಡುತ್ತಾರೆ ತಾನೆ.. ಆದರೆ, ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುವುದಿಲ್ಲ. ಡಿಸಿನ್ ಸಿರಂಜಿನೊಳಗೆ ಎಳೆಯುವಾಗ ಮೆಡಿಸಿನ್ ಜೊತೆಗೆ ಅಲ್ಪ ಪ್ರಮಾಣದಲ್ಲಿ ಗಾಳಿ ಸಿರಂಜ್’ನೊಳಗೆ ಹೋಗಿರುತ್ತದೆ. ಸಣ್ಣ ಗಾಳಿ ಗುಳ್ಳೆಗಳ ರೂಪದಲ್ಲಿ ರೋಗಿಯ ರಕ್ತದಲ್ಲಿ ಹೋಗುತ್ತದೆ. ಇದರಿಂದ ಮೆಡಿಸಿನ್ ಎಲ್ಲಾ ಒಂದೇ ಡೋಸ್ ಆಗಿ ರೋಗಿಗೆ ದೊರೆಯುವುದಿಲ್ಲ. ಇದರಿಂದ ರೋಗಿಯ ರೋಗ ಬೇಗ ವಾಸಿಯಾಗುವುದಿಲ್ಲ. ಇದರ ಜೊತೆಗೆ ರೋಗಿಯ ರಕ್ತದಲ್ಲಿ ಸೇರಿದ ಗಾಳಿಯ ಗುಳ್ಳೆಗಳು ಶರೀರದ ಎಲ್ಲಕ್ಕೂ ರಕ್ತದ ಮೂಲಕ ಸೇರಿಕೊಳ್ಳುತ್ತವೆ. ಇದರಿಂದ ಆಗುವ ಪರಿಣಾಮವನ್ನು ” ಏರ್ ಎಂಬಾಲಿಸಮ್” ಎನ್ನುವರು. ಇದರಿಂದ ನಮ್ಮ ಶರೀರದಲ್ಲಿ ತೀವ್ರವಾದ ಅರೋಗ್ಯ ಸಮಸ್ಯೆಗಳು ಬರುತ್ತವೆ. ಏರ್ ಎಂಬಾಲಿಸಮ್ ನಿಂದ ಉಸಿರಾಟಕ್ಕೆ ತೊಂದರೆಯಾಗುತ್ತದೆ..ಎದೆನೋವು ಕಾಣಿಸಿಕೊಳ್ಳುತ್ತದೆ. ಹೃದಯದ ಕಾರ್ಯಕ್ಕೆ ತೊಂದರೆಯಾಗುತ್ತದೆ.. ಮಾನಸಿಕ ಕಾಯಿಲೆಗಳ ಜೊತೆಗೆ ಲೋಬಿಪಿ, ಇತ್ಯಾದಿ ಸಮಸ್ಯೆಗಳು ಬರುತ್ತವೆ. ಕೆಲವೊಮ್ಮೆ ಪ್ರಾಣಕ್ಕೆ ಆಪತ್ತು ಬರಬಹುದು. ಹಾಗಾಗಿ ವೈದ್ಯರು ಸಿರೆಂಜ್’ನಲ್ಲಿನ ಮೆಡಿಸಿನ್ ಅನ್ನು ಮೊದಲು ಸ್ವಲ್ಪ ಹೊರಗೆ ಬಿಟ್ಟು ಇಂಜೆಕ್ಷನ್ ಮಾಡುತ್ತಾರೆ.

Edited By

Manjula M

Reported By

Manjula M

Comments

Andy अपोलो अस्पताल में किडनी दाता को तत्काल ए +, बी +, ओ +, रक्त समूह दाताओं की उम्र 20-70 के बीच की आवश्यकता होती है। हम आपको पूरा पूरा प्रयास देते हैं, हम आपको अपने दान के लिए ईमानदार मूल्य देंगे और सबसे अच्छा चिकित्सा उपचार यह आपके भविष्य के जीवन में मदद करेगा, कृपया अधिक जानकारी के लिए हमसे संपर्क करें। सं। +919343518612 व्हाट्सएप पर भी, ईमेल। [email protected]