ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದರಾಗ್ತೀದ್ದಿರಾ..? ಹಾಗಾದ್ರೆ ಈ ಮಾಹಿತಿಯನ್ನು ತಿಳಿದುಕೊಳ್ಳಿ..!

18 Jun 2018 11:59 AM | General
1707 Report

ನಾವು ಈಗಿರುವ ಪ್ರಪಂಚ ಸ್ಪರ್ಧಾತ್ಮಕ ಪ್ರಪಂಚ. ಎಲ್ಲಾ ಕಡೆಯಲ್ಲೂ ಕೂಡ ಕಾಂಪಿಟೇಶನ್ ಇದ್ದೆ ಇರುತ್ತದೆ. ಹಾಗಾಗಿ ವಿವಿಧ ರೀತಿಯ ಹುದ್ದೆಗಳಿಗೆ ಕಾಂಪಿಟೇಟಿವ್ ಎಕ್ಸಾಂ ಕೂಡ ಮಾಡುತ್ತಿರುತ್ತಾರೆ. ಅದರಲ್ಲಿ ಕನ್ನಡಕ್ಕೆ ಸಂಬಂಧ ಪಟ್ಟಂತಹ ಪ್ರಶ್ನೆಗಳು ಕೂಡ ಇರುತ್ತವೆ.ಕನ್ನಡ ವ್ಯಾಕರಣದ ಬಗ್ಗೆ ಒಂದಿಷ್ಟು ಗಮನ ಹರಿಸೋಣ.

ಕನ್ನಡ ವರ್ಣಮಾಲೆಗಳು

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಲ ವ ಶ ಷ ಸ ಹ ಳ

ವರ್ಣಮಾಲೆಯ ವಿಧಗಳು

ಸ್ವರಗಳು,ವ್ಯಂಜನಗಳು,ಯೋಗವಾಹಗಳು

ಸ್ವರಗಳು: 13  “ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತೇವೆ”. ಉದಾ: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಸ್ವರಗಳ

ಸ್ವರಗಳ ವಿಧಗಳು-3  ಹ್ರಸ್ವ ಸ್ವರ,  ದೀರ್ಘ ಸ್ವರ,  ಪ್ಲುತ ಸ್ವರ

ಹ್ರಸ್ವ ಸ್ವರ: 6 “ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳಿಗೆ ಹ್ರಸ್ವಸ್ವರ ಎನ್ನುತ್ತಾರೆ”. ಉದಾ: ಅ ಇ ಉ ಋ ಎ ಒ

ದೀರ್ಘ ಸ್ವರ: 7 “ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳಿಗೆ ದೀರ್ಘ ಸ್ವರ ಎನ್ನಲಾಗಿದೆ”. ಉದಾ: ಆ ಈ ಊ ಏ ಓ ಐ ಔ

ಪ್ಲುತ ಸ್ವರ: “ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗುತ್ತದೆ.. ಉದಾ: ಅಕ್ಕಾ, ಅಮ್ಮಾ ಕ್+ಅ=ಕ ಮ್+ಅ=ಮ ಯ್+ಅ=ಯ

ವ್ಯಂಜನಗಳು: 34 “ಸ್ವರಾಕ್ಷರಗಳ ಸಹಾಯದಿಂದ ಉಚ್ಚರಿಸುವ ಅಕ್ಷರಗಳಿಗೆ ವ್ಯಂಜನಗಳು ಎನ್ನಲಾಗುತ್ತದೆ.”.

ವ್ಯಂಜನಗಳ ವಿಧಗಳು: 2

  1. ವರ್ಗೀಯ ವ್ಯಂಜನಾಕ್ಷರಗಳು
  2. ಅವರ್ಗೀಯ ವ್ಯಂಜನಾಕ್ಷರಗಳು

ವರ್ಗೀಯ ವ್ಯಂಜನಾಕ್ಷರಗಳು: 25 “ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಲ್ಲಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎನ್ನಲಾಗುತ್ತದೆ.” ಉದಾ: ವರ್ಗ – ಕ ಖ ಗ ಘ ಙ, ವರ್ಗ – ಚ ಛ ಜ ಝ ಞ, ವರ್ಗ – ಟ ಠ ಡ ಢ ಣ, ವರ್ಗ – ತ ಥ ದ ಧ ನ ವರ್ಗ– ಪ ಫ ಬ ಭ ಮ

ವರ್ಗೀಯ ವ್ಯಂಜನಾಕ್ಷರಗಳ ವಿಧಗಳು: ಅಲ್ಪ ಪ್ರಾಣಾಕ್ಷರಗಳು,ಮಹಾ ಪ್ರಾಣಾಕ್ಷರಗಳು,ಅನುನಾಸಿಕಾಕ್ಷರಗಳು

ಅಲ್ಪ ಪ್ರಾಣಾಕ್ಷರಗಳು: 10 “ಕಡಿಮೆ ಸ್ವರದಿಂದ / ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಕಾಗುಣಿತಾಕ್ಷರಗಳಿಗೆ ಅಲ್ಪ ಪ್ರಾಣಾಕ್ಷರಗಳು ಎನ್ನಲಾಗುತ್ತದೆ.”. ಉದಾ: ಕ, ಚ, ಟ, ತ, ಪ ಗ, ಜ, ಡ, ದ, ಬ

ಮಹಾ ಪ್ರಾಣಾಕ್ಷರಗಳು: 10 “ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಎರಡನೆಯ ಮತ್ತು ನಾಲ್ಕನೆಯ ವ್ಯಂಜನಗಳಿಗೆ ಮಹಾ ಪ್ರಾಣಾಕ್ಷರಗಳು ಎನ್ನಲಾಗುತ್ತದೆ. ಉದಾ: ಖ, ಛ ,ಠ, ಧ, ಫ ಘ, ಝ, ಢ, ಧ, ಭ

ಅನುನಾಸಿಕಾಕ್ಷರಗಳು: 5 “ಮೂಗಿನ ಸಹಾಯದಿಂದುಚ್ಚರಿಸಲ್ಪಡುವ ವರ್ಣಕ್ಕೆ ಅನುನಾಸಿಕಾಕ್ಷರಗಳು ಎನ್ನಲಾಗುತ್ತದೆ.” ಉದಾ: ಙ, ಞ, ಣ, ನ, ಮ

ಅವರ್ಗೀಯ ವ್ಯಂಜನಾಕ್ಷರಗಳು: 9 “ವರ್ಗಗಳಾಗಿ ವಿಂಗಡಿಸಲಾರದ ವ್ಯಂಜನಗಳಿಗೆ ಅವರ್ಗೀಯ ವ್ಯಂಜನಾಕ್ಷರಗಳೆಂದು ಎನ್ನಲಾಗುತ್ತದೆ.”. ಉದಾ: ಯ, ರ, ಲ, ವ, ಶ, ಷ, ಸ ,ಹ, ಳ .... ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಶೇರ್ ಮಾಡಿ

Edited By

Manjula M

Reported By

Manjula M

Comments

Andy  क्या आप पैसे के लिए अपना एक गुर्दा बेचना चाहते हैं? क्या आप वित्तीय टूटने के कारण अपने गुर्दे को पैसे के लिए बेचने का मौका चाहते हैं और आपको नहीं पता कि क्या करना है, फिर आज हमसे संपर्क करें और हम आपको अपनी किडनी के लिए अच्छी राशि प्रदान करेंगे। सं। +919343518612 व्हाट्सएप पर भी, ईमेल। [email protected]