ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಅರ್ಜಿ ಆಹ್ವಾನ- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

16 Jun 2018 12:56 PM | General
1545 Report

ಕರ್ನಾಟಕ ರಾಜ್ಯ ಪೊಲೀಸ್ ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ (ಪುರುಷ)(ಸಿಎಆರ್/ಡಿಎಆರ್)-2018 ರ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ (ಪುರುಷ)(ಸಿಎಆರ್/ಡಿಎಆರ್) ಹುದ್ದೆಗಳಿಗೆ ಈ ಕೆಳಕಂಡ ಅಧಿಸೂಚನೆಯ ಅನ್ವಯ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಕೆಳಗೆ ನಮೂದಿಸಲಾಗಿರುವ ಅರ್ಹತಾ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳು ಆನ್ ಲೈನ್  ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಖಾಲಿ ಹುದ್ದೆಗಳ ವರ್ಗೀಕರಣವನ್ನು ಅಧಿಕೃತ ವೆಬ್ ಸೈಟ್ ನಲ್ಲಿ (www.ksp.gov.in )ನೀಡಿರುವ ಅಧಿಸೂಚನೆಯಲ್ಲಿನ ಅನುಬಂಧ- ‘ಅ’ ನೋಡಬಹುದು.

ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ (ಪುರುಷ)(ಸಿಎಆರ್/ಡಿಎಆರ್)

ಹುದ್ದೆಗಳು- 688

ಅರ್ಜಿ ಸಲ್ಲಿಸುವ ದಿನಾಂಕ-ಅರ್ಜಿ ಸಲ್ಲಿಸಲು 14.06.2018 ಬೆಳಿಗ್ಗೆ 10.00 ಗಂಟೆಯಿಂದ 05-07-2018 ಸಂಜೆ 6 ಗಂಟೆಯವರೆಗೆ ಸಮಯವಕಾಶ ಇರುತ್ತದೆ. ಅಧಿಕೃತ ಬ್ಯಾಂಕ್ ಹಾಗೂ ಅಂಚೆ ಕಛೇರಿಯ ವೇಳೆಯಲ್ಲಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 09.07.18 ಆಗಿರುತ್ತದೆ.

ವಯೋಮಿತಿ- ಕನಿಷ್ಟ ವಯೋಮಿತಿ 18 ವರ್ಷ, ಸಾಮಾನ್ಯ ಅಭ್ಯರ್ಥಿಗಳಿಗೆ 25 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 27 ವರ್ಷ, ಬುಡಕಟ್ಟು ಜನಾಂಗ ಅಭ್ಯರ್ಥಿಗಳಿಗೆ 30 ವರ್ಷ.

ವಿದ್ಯಾರ್ಹತೆ- ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ

ಶುಲ್ಕದ ವಿವರ- ಸಾಮಾನ್ಯ  ವರ್ಗ,ಪ್ರವರ್ಗ  2(ಎ),2(ಬಿ),3(ಸಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ 250

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ-1 ಬುಡಕಟ್ಟು ಜನಾಂಗ ಸೇರಿದ ಅಭ್ಯರ್ಥಿಗಳಿಗೆ ರೂ 100

ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಅಧಿಕೃತ ವೆಬ್ ಸೈಟ್   www.ksp.gov.in     ನಲ್ಲಿ ನೀಡಲಾಗಿರುವ  ಅಧಿಸೂಚನೆಯನ್ನು ಸೂಚನೆಗಳನ್ನು ಹಾಗೂ ಎಫ್,ಎ,ಕ್ಯೂ ಗಳನ್ನು ಜಾಗರೂಕತೆಯಿಂದ  ನೋಡಿ

Edited By

Manjula M

Reported By

Manjula M

Comments