ಈ ಪೋರನ ಸಾಧನೆ ಕೇಳುದ್ರೆ ಬಾಯ್ಮೇಲೆ ಬೆರಳಿಟ್ಕೊತ್ತೀರಾ…!

13 Jun 2018 2:39 PM | General
198 Report

ಸಾಮಾನ್ಯವಾಗಿ 4 ಅಥವಾ 5 ವರ್ಷದ ಮಕ್ಕಳು LKG  UKG ನೊ ಓದುತ್ತಾರೆ. ಇಲ್ಲಾ ಅಂತ ಅಂದರೆ ಗೊಂಬೆಗಳೊಂದಿಗೆ ಆಟವಾಡುತ್ತಲೋ ಅಥವಾ ಟೀವಿಯಲ್ಲಿ ಕಾರ್ಟೂನ್ ನೋಡಿಕೊಂಡೊ ಸುಮ್ಮನಾಗುತ್ತಾರೆ. ಅನೇಕ ಮಂದಿ ನಾಲಕ್ಕೂ ವರ್ಷದ ಮಕ್ಕಳು ಹೆತ್ತವರ ಜೊತೆ ಆಟವಾಡುತ್ತ ಅಥವ ಬೊಂಬೆಗಳನ್ನು ಸಂಗ್ರಹಿಸುತ್ತಾ ಕಾಲಕಳೆಯುತ್ತಾರೆ.ಇನ್ನೂ ಹೀಗಿನ ಮಕ್ಕಳಿಗೊ ಪಾಪಾ ಆಟ ಆಡುವುದಕ್ಕೆ ಸಮುಯವೂ ಇರುವುದಿಲ್ಲ ತಂದೆ ತಾಯಿಯೂ ಕೂಡ ಸುಮ್ಮನೆ ಬಿಡುವುದಿಲ್ಲ. ಮಕ್ಕಳು ಇನ್ನೂ ಪುಟ್ಟ ಪುಟ್ಟ ಹೆಜ್ಜೆಯನ್ನಿಡುವಾಗಲೇ ನರ್ಸರಿ, ಸ್ಕೂಲ್, ಟ್ಯೂಷನ್‍ಗಳಿಗೆ ಸೇರಿಸಿ ಬಿಡುತ್ತಾರೆ.

ಇಷ್ಟೇಲ್ಲಾ ಇದ್ದರೂ ಮಕ್ಕಳು ಕೂಡ ಈ ಆಧುನಿಕ ಪ್ರಪಂಚಕ್ಕೆ  ತಕ್ಕಂತೆ ತಾವು ಬೆಳೆಯುತ್ತಿದ್ದಾರೆ. ಈಗ ಮಕ್ಕಳು ಓದುವುದು ಬರೆಯುವುದನ್ನು ಬಿಟ್ಟು ಮೊಬೈಲ್‍ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಎಂದರೆ ನೀವು ನಂಬಲೇ ಬೇಕು. ಆದರೆ ಇಲ್ಲಿ ನಾವು ಹೇಳ್ತಿರೋ ವಿಶೇಷ ಹುಡುಗ ಅಂಬೆಗಾಲಿಡುವಾಗಲೇ ಇಡೀ ದೇಶದಂದಲೇ ಶಹಭಾಷ್ ಗಿರಿ ಪಡೆದುಕೊಂಡಿದ್ದಾನೆ.ಸಾಧನೆ ಮಾಡುವುದು ಅಷ್ಟು ಸುಲಭದ ಮಾತಲ್ಲ, ಸಾಧನೆ  ಎಲ್ಲಾರೂ ಮಾಡಲೂ ಸಾಧ್ಯವೂ ಇಲ್ಲ.. ಯಾವುದೇ ಉನ್ನತ ಮಟ್ಟದ ಆಸಕ್ತಿ, ಶ್ರದ್ದೆ, ದೃಡತೆಯಿಂದ ಮಾತ್ರ ಸಾಧ್ಯವಾಗುದಿಲ್ಲ, ಆದಕ್ಕೆ ನೂರಕ್ಕೆ ನೂರು ಶತ ಪ್ರಯತ್ನವಿದ್ದರೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೆ ಸಿಗಲಿದೆ. ಮನಸ್ಸಿದ್ದರೆ ಮಾರ್ಗ ಬರೀ ಗಾದೆ ಮಾತಲ್ಲ.. ಅದು ಕುಗ್ಗಿ ಹೋಗಿರುವ ಮನಸ್ಸಿಗೆ ಹುಮ್ಮಸ್ಸು ನೀಡುವ ದಿವ್ಯೌಷಧವಿದ್ದಂತೆ.. ಮನಸ್ಸಿಟ್ಟು ಮಾಡಿದರೆ ಎಂತಹ ಸಾಧನೆ ಕೂಡ ಮಾಡಬಹುದು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿದೆ.ಸಾಧನೆಯೆಂಬ ಗುರಿಯನ್ನು ತಲುಪವ ದಾರಿಯಲ್ಲಿ ಕಲ್ಲು, ಮುಳ್ಳು, ಸಿಗುವುದು ಸರ್ವೇ ಸಾಮಾನ್ಯ.. ಆದರೆ ಅದೆಲ್ಲಾವನ್ನು ತುಳಿದು ಮುಂದೆ ಸಾಗಿದವನಿಗೆ ಯಶಸ್ಸಿನ ಬಾಗಿಲು ತೆರೆದೆ ಕಾಯುತ್ತಿರುತ್ತದೆ.ಹೌದು ಸಾಧನೆ ಮಾಡಲು ಯಾವುದೇ ಜಾತಿ ಮತ ವಯಸ್ಸು ಯಾವುದು ಇರುವುದಿಲ್ಲ.. ಇದಕ್ಕೆ ಸಾಕ್ಷಿ ಅಂಬೆಗಾಲಿಟ್ಟು ಅಮ್ಮನ ಮಡಿಲಲ್ಲಿ ಲಾಲಿ ಹಾಡು ಕೇಳುತ್ತಾ ಆಟಿಕೆಗಳೊಂದಿಗೆ ಆಟವಾಡಬೇಕಿದ್ದ 4 ರ ಪೋರ ಬ್ಯಾಟ್ ಬಾಲ್ ಹಿಡಿದು ಎದುರಾಳಿಯನ್ನು ಬೆನ್ನೆಟ್ಟುತ್ತಿದ್ದಾನೆ.

ಅಷ್ಟಕ್ಕೂ ಈ 4 ರ ಪೋರ ಎಲ್ಲಾ ಮಕ್ಕಳಂತೆ ಅಲ್ಲ, ತದ್ವಿರುದ್ದಕ್ಕೆ ತದ್ವಿರುದ್ದವಾಗಿದ್ದಾನೆ. 12 ವರ್ಷದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದಾನೆ ಕೇವಲ ನಾಲ್ಕು ವರ್ಷದ ಹುಡುಗ ಶಯಾನ್ ಜಮಾಲ್.ಈತನ ಅಸಾಮಾನ್ಯ ಸಾಧನೆ ಎಂದರೆ ನಾಲ್ಕನೇ ವರ್ಷದಲ್ಲಿಯೇ 12 ವರ್ಷದೊಳಗಿನ ಶಾಲಾ ಕ್ರಿಕೇಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾನೆ. ಇದನ್ನು ಕೇಳಿದೊಡನೇ ಎಂತವರಿಗೂ ನಂಬಲು ಅಸಾಧ್ಯವಾಗುವುದರ ಜೊತೆಗೆ ಅಚ್ಚರಿಯಾಗುತ್ತದೆ.ಆಟಿಕೆಗಳೊಂದಿಗೆ ಆಡಬೇಕಿದ್ದ ಪುಟಾಣಿ ಪಂಟ ಶಯಾನ್ ಜಮಾಲ್ ಭರ್ಜರಿ ಬ್ಯಾಟಿಂಗ್ ಮಾಡುವುದರಲ್ಲಿ ಎತ್ತಿದ್ದ ಕೈ. ಎದುರಾಳಿ ಯಾರೇ ಆದರೂ ಚೆಂಡು ಗಡಿ ಮುಟ್ಟುಲೇ ಬೇಕು, ಇದು ಶಯಾನ್ ಜಮಾಲ್‍ನ ಆಟದ ಪಾಲಿಸಿ.. 3ನೇ ವರ್ಷವಿಗದ್ದಾಲೇ ಟಿವಿಯಲ್ಲಿ ಪ್ರಸಾರವಾಗುವ ಪ್ರತಿ ಪಂದ್ಯಗಳನ್ನು ಚಾಚು ತಪ್ಪದೇ ವೀಕ್ಷಿಸುತ್ತಿದ್ದ. ನೋಡುತ್ತಾ ನೋಡುತ್ತಾ ಬ್ಯಾಟ್ ಹಿಡಿಯಲು ತಿರುಗಾಡುತ್ತಿದ್ದಾಗಿನಿಂದಲೇ ಬಿಡದೇ ಪ್ರಯತ್ನ ಮಾಡಿದ ಇದೀಗ ಶಯಾನ್ ಜಮಾಲ್ ರ ಬ್ಯಾಟಿಂಗ್ ವೈಖರಿ ಕ್ರಿಕೆಟಿಗರಿಗೂ ಆಶ್ಚರ್ಯವಾಗುತ್ತದೆ. ಕ್ಷಣ ಮಾತ್ರದಲ್ಲಿ ಎಂತವರನ್ನು ಸೆಳೆಯುತ್ತದೆ.ಯುಕೆಜಿ ಓದುತ್ತಿರುವ ಹಾಲುಗಲ್ಲದ ಪೋರನ ಕ್ರಿಕೇಟ್ ತಯಾರಿ ಮತ್ತು ಬುದ್ಧಿ ಶಕ್ತಿಯ ಮಟ್ಟ ಈ ಸಾಧನೆಗೂ ಮೀರಿದೆ. ಶಯಾನ್ ಜಮಾಲ್ ದೆಹಲಿಯ ಅದ್ಭುತ ಪ್ರತಿಭೆ. 12 ವರ್ಷದೊಳಗಿನ ಕ್ರಿಕೇಟ್ ಟೂರ್ನಿಯಲ್ಲಿ ಮೈದಾನದಲ್ಲಿ ತಲೆಗೆ ಹೆಲ್ಮೆಟ್, ಕೈ ಗ್ಲೋಸ್ ಹಾಕಿಕೊಂಡು ವಿಕೇಟ್ ಮುಂದೆ ಬಂದು ಬ್ಯಾಟು ಕುಟ್ಟುತ್ತಿದ್ದರೆ ಎದುರಾಳಿ ತಂಡದ ಬೌಲರ್‍ಗೆ ಬೆವರು ಬರುತ್ತೆ, ನಡುಕ ಶುರುವಾಗುತ್ತೆ,

ಎದುರಾಳಿಯ ಒಂದೊಂದು ಎಸೆತಕ್ಕು ಶಯಾನ್ ಜಮಾಲ್ ಬ್ಯಾಟ್‍ನಿಂದಲೇ ಉತ್ತರ ನೀಡುತ್ತಾನೆ. ಕಾಮೆಂಟರಿ ಮಾಡುವವರಿಂದ ಹಿಡಿದು, ಪ್ರೇಕ್ಷಕರಿಗು ಹಾಗೂ ಟೀವಿಯಲ್ಲಿ ನೋಡುತ್ತಿದ್ದವರಿಗೂ ಪರಮಾಶ್ಚರ್ಯವಾಗುತ್ತೆ. ಎಲ್ಲಾರ ಮೆಚ್ಚಿನ ಆಟಗಾರನೆ ಈ ಶಯಾನ್ ಜಮಾಲ್.14 ವರ್ಷದೊಳಗಿನ ತಂಡದಲ್ಲಿ ಎಲ್ಲ ಮಕ್ಕಳು 10 ವರ್ಷದ ಮೇಲಿನ ವಯಸ್ಸಿನವರೇ. ಆದರೆ ಇಡೀ ಮೈದಾನದಲ್ಲಿ ಈ ಪುಟಾಣಿಯೇ 5 ವರ್ಷದ ಆಟಗಾರ. ಆದರೆ ಯಾವುದೇ ಕಾರಣಕ್ಕೂ ಇವನ್ನನ್ನು ಅಳುಕಿಸುವಂತೆ ಇಲ್ಲ.. ಇವನ ಆಟ, ಹಾವ ಭಾವ ನೋಡುತ್ತಿದ್ದರೆ ಮುಂದೊಂದು ದಿನ ಟೀಮ್ ಇಂಡಿಯಾದಲ್ಲಿ ಮಿಂಚುವ ತಾರೆಯಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತವೆ. ಶಯಾನ್ ಜಮಾಲ್ ಮಾತ್ರ ವಯಸ್ಸಿನ ಹಂಗು ಅಳುಕಿಲ್ಲದೆ ಮೈದಾನದಲ್ಲಿ ಕಾಣಿಸಿಕೊಂಡು ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೇ ಇತರರಿಗೂ ಮಾದರಿಯಾಗಿದ್ದಾನೆ. ಶಯನಾಗೆ ಕ್ರಿಕೇಟ್ ಮೇಲೆ ಅತೀವ ಆಸಕ್ತಿ, ಶ್ರದ್ದೆ, ಭಕ್ತಿಯ ಜೊತೆಗೆ ಚಾಣಕ್ಷ ನಾಯಕನ ಗುಣ ಹೆಚ್ಚು ಅಂತಲೇ ಹೇಳಬಹುದು.ಇಷ್ಟಕ್ಕು ಈತ ಇಷ್ಟರ ಮಟ್ಟಿಗೆ ಸಾಧನೆ ಮಾಡಬೇಕಾದರೆ ಅದಕ್ಕೆ ಕಾರಣ ಅವರ ತಂದೆ ಅರ್ಷಾದ್. ಶಯಾನ್ ತಂದೆ ಆರ್ಷಾದ್ ಕೂಡ ಓರ್ವ ಕ್ಲಬ್ ಮಟ್ಟದ ಕ್ರಿಕೆಟ್ ಆಟಗಾರ ಹಾಗೂ ಕ್ರಿಕೇಟ್‍ನ ಹುಚ್ಚು ಪ್ರೇಮಿ. ಅಲ್ಲದೇ ಉದ್ಯಮಿಯೂ ಆಗಿರುವ ಇವರು ತಮ್ಮ ಮಗನಿಗೆ ಕ್ರಿಕೆಟ್ ಕುರಿತು ಸಾಕಷ್ಟು ಮಾರ್ಗದರ್ಶನ ನೀಡುತ್ತಿದ್ದಾರೆ. ಆರ್ಷಾದ್ ಬಟ್ಟೆ ವ್ಯಾಪಾರಿಯಾಗಿದ್ದರೂ ತಮ್ಮ ಸಂಪೂರ್ಣ ಗಮನವನ್ನು ತಮ್ಮ ಮಗನ ಮೇಲೆ ಇರಿಸಿರೋದು ಈ ಪೋರನಿಗೆ ಆನೆ ಬಲ ಬಂದಂತಾಗಿದೆ.ಬಾಲಕನ ಪ್ರತಿಭೆಯನ್ನು ಗುರುತ್ತಿಸಿರುವ ಕ್ರಿಕೆಟ್ ಕೋಚ್ ಉತ್ತಮ್ ಭಟ್ಟಾಚಾರ್ಯ. ಪ್ರತಿ ನಿತ್ಯವೂ ತರಬೇತಿ ನೀಡುತ್ತಾರೆ. 

Edited By

Manjula M

Reported By

Manjula M

Comments