ಟೀ ಮಾರುವ ಈತನ ತಿಂಗಳ ಸಂಪಾದನೆ ಕೇಳುದ್ರೆ ಶಾಕ್ ಆಗ್ತೀರಾ..!

09 Jun 2018 11:29 AM | General
606 Report

ಮನುಷ್ಯ ಅಂದ ಮೇಲೆ ದುಡಿಯಬೇಕಾದದ್ದು ಅನಿವಾರ್ಯ. ಬದುಕು ಸಾಗಿಸಲು ದುಡಿಮೆ ಅಗತ್ಯ. ಕೈ ತುಂಬಾ ಹಣ ಸಂಪಾದಿಸಲು ಸಾಕಷ್ಟು ಮಾರ್ಗಗಳಿವೆ. ಆದರೆ ಕೆಲವರು ಎಷ್ಟು ಸಂಪಾದನೆ ಇದ್ದರೂ ಸಾಲದು. ಹೆಚ್ಚು ಹೆಚ್ಚು ಸಂಪಾದನೆಯನ್ನು ಮಾಡಲು ಪ್ರಯತ್ನ ಮಾಡುತ್ತಿರುತ್ತಾರೆ.ಆದರೆ ಕಡಿಮೆ ಖರ್ಚಿನಲ್ಲಿ ಹೇಗೆ ಹೆಚ್ಚು ಸಂಪಾದನೆಯನ್ನು ಮಾಡುವವರು ಕೂಡ ಇರುತ್ತಾರೆ.

ಟೀ ಮಾರುವವನು ತಿಂಗಳಿಗೆ ರೂ.12 ಲಕ್ಷ ಸಂಪಾದಿಸುತ್ತಾನೆ  ಎಂದರೆ ನೀವು ನಂಬಲೇ ಬೇಕು ಎಸ್ ..ಚಹ ಮಾರುವ ಮೂಲಕ ತಿಂಗಳಿಗೆ ರೂ.10 ಲಕ್ಷಗಳಿಂದ ರೂ.12 ಲಕ್ಷಗಳವರೆಗೆ ಸಂಪಾದನೆ ಮಾಡುತ್ತೇನೆ ಎಂದು ಸ್ವತಃ ಟೀ ಮಾರುವವನೆ ಹೇಳಿಕೊಂಡಿದ್ದಾನೆ. ಹೆಸರು ನವ್‍ನಾಥ್ ಯೆವ್ಲೆ. ಮಹಾರಾಷ್ಟ್ರದಲ್ಲಿನ ಪುಣೆಯ ನಿವಾಸಿ. 2011ರಲ್ಲಿ ಈತನು ಅಲ್ಲಿನ ಯೆವ್ಲೆ ಟೀ ಹೌಸ್ ಹೆಸರಿನಲ್ಲಿ ಒಂದು ಟೀ ಅಂಗಡಿಯನ್ನು ಪ್ರಾರಂಭಿಸಿದನು.. ಅದನ್ನು ಪ್ರಾರಂಭಿಸುವುದಕ್ಕೂ ಮುನ್ನ ಆತ ತುಂಬಾ ಕಷ್ಟಪಟ್ಟನು. 4 ವರ್ಷಗಳ ಕಾಲ ಗ್ರೌಂಡ್ ವರ್ಕ್ ಮಾಡಿದ. ಪುಣೆಯನ್ನೆಲ್ಲಾ  ಸುತ್ತಾಡಿದ. ಎಲ್ಲಾ ರೀತಿಯ ಟೀ ಟೇಸ್ಟ್ ಮಾಡಿದ. ಕೊನೆಗೆ ತನ್ನದೇ ಬ್ರ್ಯಾಂಡ್ ಕ್ರಿಯೇಟ್ ಮಾಡುವಂತೆ ತಾನು ಒಂದು ಸ್ಪೆಷಲ್ ಟೀ ತಯಾರಿಸಿ ಮಾರಾಟ ಮಾಡಲು ಪ್ರಾರಂಭಿಸಿದನು.ಇದೀಗ ಆತನ ತಿಂಗಳಿನ ಸಂಬಳ ಬರೋಬರಿ ರೂ.10 ಲಕ್ಷಗಳಿಂದ ರೂ.12 ಲಕ್ಷಗಲು. ಟೀ ಮಾರಿ ಅಷ್ಟೊಂದು ಸಂಪಾದನೆ ಮಾಡುತ್ತಾರೆ ಅಂದರೆ ಸುಮ್ಮನೆ ಅಲ್ಲ…

Edited By

Manjula M

Reported By

Manjula M

Comments