ಹಣ್ಣುಗಳ ರಾಜ ಮಾವಿನ ಹಣ್ಣು:  ನೀವು ತಿಳಿದುಕೊಳ್ಳಬೇಕಾದ ಈ ಹಣ್ಣಿನ ವಿಧಗಳು..!

06 Jun 2018 1:25 PM | General
2491 Report

ಹಣ್ಣುಗಳ ರಾಜ ಯಾವುದು ಅಂದರೆ ಎಲ್ಲರೂ ಫಟ್ ಅಂತಾ ಹೇಳುವುದು ಮಾವಿನಹಣ್ಣು ಎಂದು… ಎಸ್ ಮಾವಿನ ಹಣ್ಣಿನ ಕಾಲ ಬಂತು ಅಂದರೆ ಸಾಕು ಸಾಕಷ್ಟು ಜನರಿಗೆ ಸಖತ್ ಖುಷಿಯಾಗುತ್ತೆ…ಮಾವಿನ ಹಣ್ಣಿನ ಬೆಲೆ ಗಗನಕ್ಕೆ ಹೋದರು ತಿನ್ನೋರು ಮಾತ್ರ ಕಡಿಮೆ ಆಗಲ್ಲ.. ಅಷ್ಟು ಬೇಡಿಕೆ ಇರುತ್ತದೆ ಈ ಹಣ್ಣುಗಳ ರಾಜ ಮಾವಿನ ಹಣ್ಣಿಗೆ.  ಬಾಯಿಯನ್ನು ಚಪ್ಪರಿಸಿಕೊಂಡು ಈ ಮಾವಿನ ಹಣ್ಣನ್ನು ತಿನ್ನುತ್ತಾರೆ.. ಅಷ್ಟೆ ಅಲ್ಲದೆ ಅದರಿಂದ ವಿವಿಧ ರೀತಿಯ ಖಾದ್ಯಗಳನ್ನು ಕೂಡ ತಯಾರಿಸುತ್ತಾರೆ.ಮಾವಿನ ಹಣ್ಣಿನಲ್ಲಿ ಸಾಕಷ್ಟು ವಿಧಗಳಿವೆ.. ಆ ವಿಧಗಳು ಯಾವುವು ಎಂಬುದನ್ನು ನೋಡೋಣ..

ಅಲ್ಫೊನ್ಸೊ ಮಾವು (Alphonsos )

ಮಾವಿನ ಹಣ್ಣಿನ ವಿಧಗಳಲ್ಲಿ ಇದು ಕೂಡ ಒಂದು. ಈ ಹಣ್ಣು ತುಂಬಾ ಸಿಹಿಯಿಂದ ಕೂಡಿರುತ್ತದೆ ಮತ್ತು ಸುವಾಸನೆಯಿಂದ ಕೂಡಿರುತ್ತದೆ. ಈ ಹಣ್ಣನ್ನು ಹೆಚ್ಚಾಗಿ ಮಹಾರಾಷ್ಟ್ರ ರತ್ನಗಿರಿ,ದೇವ್ ಘಡ್, ರಾಯ್ ಘಡ್ ,ಕೊಂಕಣ ಪ್ರದೇಶಗಳು ಭಾರತದ ಪಶ್ಚಿಮ ಭಾಗದಲ್ಲಿ ಬೆಳೆಯಲಾಗುತ್ತದೆ. ಈ ಜಾತಿಯ ಮಾವಿನ ಹಣ್ಣು ದುಬಾರಿ ಹಣ್ಣುಗಳಲ್ಲಿ ಒಂದಾಗಿದೆ.

ಬಾದಾಮಿ ಮಾವು (Badami)

ಬಾದಾಮಿ ಹಣ್ಣು ಕೂಡ ಮಾವಿನ ಜಾತಿಗಳಲ್ಲಿ ಒಂದು. ಇದನ್ನು ಕರ್ನಾಟಕದ ಅಲ್ಫೋನ್ಸೊ ಎಂದು ಕರೆಯುತ್ತಾರೆ. ಇದು ಕರ್ನಾಟಕದಲ್ಲಿ ಹೆಚ್ಚು ಬೆಳೆಯಲ್ಪಡುತ್ತದೆ. ಈ ಮಾವಿನ ಹಣ್ಣು ಇತರ ಹಣ್ಣುಗಳಿಗೆ ಹೋಲಿಸಿದರೆ ರುಚಿ ಹೆಚ್ಚು.

ಚೌನ್ಸ ಮಾವು (Chaunsa) 

ಈ ಹಣ್ಣು ತುಂಬಾ ಸಿಹಿಯಾಗಿರುತ್ತದೆ. ಈ ಹಣ್ಣನ್ನು ಉತ್ತರಭಾರತದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಈ ಹಣ್ಣು ಕೆಂಪು ಮತ್ತು ಚಿನ್ನದ ಹಳದಿ ಹಣ್ಣವನ್ನು ಹೊಂದಿರುತ್ತದೆ. ಈ ಹಣ್ಣು ಮುಖ್ಯವಾಗಿ ಮಿರ್ಪುರ್ ಖಾಸ್ ಸಿಂದ್ನಲ್ಲಿ ಬೆಳೆಯಲಾಯಿತು.

ದಾಶೇರಿ ಮಾವು (Dasheri)

ಉತ್ತರಪ್ರದೇಶಗಳಲ್ಲಿ ಬೆಳೆಯುವ ಈ ಹಣ್ಣು ಮಾವಿನ ಜಾತಿಗಳಲ್ಲಿ ಒಂದಾಗಿದೆ. ಇದರ ಹೆಸರು ದಾಶೇರಿ ಎಂದು. ಉತ್ತರ ಭಾರತದ ಪ್ರಸಿದ್ದವಾದ ಹಣ್ಣು ಇದಾಗಿದೆ. ಉತ್ತರ ಪ್ರದೇಶದ ಮಲಿಹಾಬಾದ್ ಎಂಬಲ್ಲಿ ಈ ಜಾತಿಯ ಮಾವಿನ ಹಣ್ಣನ್ನು ಬೆಳೆಯುತ್ತಾರೆ. ಚೌಸ್, ಫಝ್ಲಿ, ಲಕ್ನೋವಾ, ಜೌಹರಿ ಮತ್ತು ಸಫೇಡಾದಂತಹ ಇತರ ವಿಧದ ಮಾವಿನಹಣ್ಣುಗಳನ್ನು ಕೂಡ ಇಲ್ಲಿ ಬೆಳೆಯುತ್ತಾರೆ.

ಕೇಸರ್ ಮಾವು (Kesar)

ಮಾವಿನ ಹಣ್ಣಿನ ಜಾತಿಗಳಲ್ಲಿ ಈ ಕೇಸರ್ ಕೂಡ ಒಂದು.ಇದನ್ನು ಗಿರ್ ಕೇಸರ್ ಎಂದು ಕೂಡ ಕರೆಯುತ್ತಾರೆ. ಈ ಹಣ್ಣನ್ನು ಗುಜುರಾತ್ ನ ಸೌರಾಷ್ಟ್ರಗಳಲ್ಲಿ ಹಾಗೂ ಜುನಾಗಡ್ ಅಮ್ರೆಲಿ ಮತ್ತು ಗಿರ್ನಾನ ತಪ್ಪಲಿನಲ್ಲಿ ಬೆಳೆಯುತ್ತಾರೆ.

ಲ್ಯಾಂಗ್ರಾ ಮಾವು (Langra)

ಉತ್ತರ ಭಾರತದಲ್ಲಿ ಅತ್ಯಂತ ಹೆಚ್ಚು ಶ್ರೇಷ್ಠವಾದ ಮಾವುಗಳಲ್ಲಿ ಒಂದಾಗಿದೆ ಈ ಲ್ಯಾಂಗ್ರಾ  ಮಾವಿನ ಹಣ್ಣು.ಈ ಹಣ್ಣನ್ನು ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.

ಮಲಗೋಬಾ ಮಾವು (Mulgoba)

ಮುಲ್ಗೋಬಾ ತಮಿಳುನಾಡಿನ ರಾಜ್ಯ ಮತ್ತು ದಕ್ಷಿಣ ಭಾರತದ ಇತರ ಭಾಗಗಳಲ್ಲಿ ಬೆಳೆಯುವ ಅತ್ಯುತ್ತಮ ಮಾವಿನ ಹಣ್ಣಾಗಿದೆ, ಮುಲ್ಗೋಬಾವನ್ನು "ದಕ್ಷಿಣ ಭಾರತದ ಆಲ್ಫೋನ್ಸೋ” ಎಂದು ಕೂಡ ಕರೆಯಲಾಗುತ್ತದೆ

ನೀಲಮ್ ಮಾವು (Neelam)

ನೀಲಮ್ ಮಾವಿನ ಹಣ್ಣನ್ನು  ಭಾರತದ ಅನೇಕ ಪ್ರದೇಶಗಳಲ್ಲಿ ಬೆಳೆಯುತ್ತಾರೆ, ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಹೇರಳವಾಗಿ ಕಂಡುಬರುತ್ತದೆ. ಈ ಮಾವಿನ ಹಣ್ಣುಗಳನ್ನು ಹೆಚ್ಚಾಗಿ ಹೈದರಾಬಾದ್ನಲ್ಲಿ ಬೆಳೆಯುತ್ತಾರೆ.

ಹಿಮ ಸಾಗರ್ ಮಾವು (Himsagar)

ಹಿಮಸಾಗರ್ ಮಾವುಗಳು ಪಶ್ಚಿಮ ಬಂಗಾಳ ಮತ್ತು ಒರಿಸ್ಸಾದ ವಿಶೇಷತೆಯಾಗಿದೆ, ಭಾರತದಲ್ಲಿ ಅಗ್ರ ಐದು ಮಾವಿನಹಣ್ಣುಗಳಲ್ಲಿ ಇದು ಕೂಡಾ ಒಂದಾಗಿದೆ. ರತಂಗಿರಿ ಹಪಸ್, ಬನಾರಾಸಿ ಲಾಂಗ್ಡಾ, ಗಿರ್ ಕೇಸರ್ ಮತ್ತು ಬಂಗನಾಪಲ್ಲಿಗಳ ಜೊತೆಗೆ ಹಿಮಸಾಗರ್ ಕೂಡ ಇದೆ.

ಬೆನಿಶನ್ ಮಾವು (Benishan)

ಆಂಧ್ರಪ್ರದೇಶದ ಬಂಗನಾಪಲ್ಲಿ ಪಟ್ಟಣದಲ್ಲಿ ಈ ಹಣ್ಣನ್ನು ಹೆಚ್ಚಾಗಿ ಬೆಳೆಯುತ್ತಾರೆ. ಸಾಮಾನ್ಯವಾದ ತಳಿಗಳಲ್ಲಿ ಒಂದಾದ ಬೆನಿಶನ್ ಮಾವನ್ನು ಬಂಗನಾಪಲ್ಲಿ ಎಂದು ಕೂಡ ಕರೆಯಲಾಗುತ್ತದೆ. ಈ ಮಾವಿನಕಾಯಿಗಳು 350-400 ಗ್ರಾಂಗಳಷ್ಟು ತೂಕವನ್ನು ಹೊಂದಿದ್ದು, ದಕ್ಷಿಣ ಭಾರತದಲ್ಲಿನ ಮಾವಿನಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ.

ಮಾವಿನ ಹಣ್ಣುಗಳಲ್ಲಿ ಇರುವ ಒಂದಿಷ್ಟು ವಿಧಗಳನ್ನು ನಾವು ತಿಳಿಸಿಕೊಟ್ಟಿದ್ದೇವೆ. ಇನ್ನೂ ನಮ್ಮ ಕರ್ನಾಟಕದಲ್ಲಿ ತೋತಾಪುರಿ,ರಸಪುರಿ,ಮೆಣಸು ಈ ರೀತಿಯಾಗಿ ಇನ್ನು ಸಾಕಷ್ಟು ವಿಧಗಳಿವೆ. ಮಾವಿನ ಸೀಸನ್ ಮುಗಿಯುತ್ತಾ ಬರುತ್ತಿದೆ. ಆದಷ್ಟು ಬೇಗ ನಿಮ್ಮ ಬಾಯಿಯನ್ನು ಸಿಹಿ ಮಾಡಿಕೊಳ್ಳಿ.

Edited By

Manjula M

Reported By

Manjula M

Comments