ರೈತರಿಗೆ ಬಿಗ್ ಶಾಕ್​ ನೀಡಲು ರೆಡಿಯಾದ ಕೆಎಮ್​ಎಫ್​..!

02 Jun 2018 1:46 PM | General
678 Report

ರಾಜ್ಯದಲ್ಲಿ ಹೈನುಗಾರಿಕೆಯನ್ನು ನಂಬಿಕೊಂಡಿದ್ದ ರೈತರ ಜೇಬಿಗೆ ಕತ್ತರಿ ಹಾಕುವುದಕ್ಕೆ ಸರ್ಕಾರವು ಈಗಾಗಲೇ ಚಿಂತನೆಯನ್ನು ನಡೆಸಿದೆ ಎನ್ನುವ ಆಘಾತಕಾರಿ ಸುದ್ದಿಯನ್ನು ವರದಿ ಮಾಡಿದೆ.

ರಾಜ್ಯದಲ್ಲಿ ಹಾಲಿನ ಉತ್ಪನ್ನವು ಹೆಚ್ಚಾಗಿರುವ ಕಾರಣ ಪ್ರತಿ ಲೀಟರ್​ ಹಾಲಿಗೆ 2 ರೂಪಾಯಿಗಳನ್ನು ಖಡಿತಗೊಳಿಸುವುದಕ್ಕೆ ಕೆಎಮ್​ಎಫ್​ ಚಿಂತನೆ ನಡೆಸಿದೆ ಎನ್ನುವ ಸುದ್ದಿ ತಿಳಿದಿದೆ. ರಾಜ್ಯದಲ್ಲಿ  ಮೊದಲು ಸುಮಾರು 73 -75 ಲಕ್ಷ ಲೀಟರ್​ ಹಾಲು ಉತ್ಪತ್ತಿಯಾಗುತ್ತಿತು  81 ಲಕ್ಷ ಲೀಟರ್​ ಹಾಲು ಉತ್ಪಾದನೆಯಾಗುತ್ತಿರುವ ಕಾರಣದಿಂದಾಗಿ ಅದನ್ನು ಮಾರಾಟ ಮಾಡುವುದಕ್ಕೆ ಕಷ್ಟವಾಗುತ್ತಿದೆ ಎನ್ನುವ ಕಾರಣವನ್ನಿಟ್ಟು ರೈತರು ನೀಡುವ ಹಾಲಿನ ಬೆಲೆಯಲ್ಲಿ 2 ರೂ ಖಡಿತಗೊಳಿಸುವುದಕ್ಕೆ ಚಿಂತನೆಯನ್ನು ನಡೆಸಿದೆ.ಈಗ ತಾನೆ ಮೈತ್ರಿ ಸರ್ಕಾರ ರಚನೆ ಆಗಿದೆ.ರೈತ ಪರ ಸರ್ಕಾರ ಎಂದು ಹೇಳಿಕೊಳ್ಳುವ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರದಲ್ಲಿಯೆ ಈ ರೀತಿಯ ನಿರ್ಧಾರ ಎಷ್ಟು ಸರಿ ಎನ್ನುವುದು ರೈತರ ಪ್ರಶ್ನೆಯಾಗಿದೆ. ರೈತರ ಸಾಲ ಮನ್ನಾ ವಿಚಾರದಲ್ಲಿಯೇ ಸಾಕಷ್ಟು ಗೊಂದಲಗಳ ಮಧ್ಯೆದಲ್ಲಿಯೇ ಈ ವಿಷಯ ಕೂಡ ರೈತರಿಗೆ ಶಾಕ್ ನೀಡಿದೆ.

Edited By

Manjula M

Reported By

Manjula M

Comments