ಕೋಳಿಗಳ ಮೂಲಕ ನಿಫಾ ವೈರಸ್ ಹರಡುತ್ತಿದೆಯಾ?

29 May 2018 2:47 PM | General
649 Report

ಬಾವಲಿಗಳ ಮೂಲಕ ನಿಪಾಹ್ ವೈರಸ್ ಹರಡುತ್ತದೆ ಎಂದು ಹೇಳುತ್ತಿದ್ದರು. ಆದರೆ ಈಗ  ಕೋಳಿಗಳ ಮೂಲಕ ಹರಡುತ್ತಿದೆ ಎನ್ನುವ ಸಂದೇಶಗಳು ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆಪ್ ಹಾಗು ಫೇಸ್ ಬುಕ್ ಗಳಲ್ಲಿ ಹರಿದಾಡುತ್ತಿದೆ.

ಕಲ್ಲಿಕೋಟೆ ಆರೋಗ್ಯಾಧಿಕಾರಿಯ ಹೆಸರಿನಲ್ಲಿ ಈ ಸಂದೇಶಗಳನ್ನು ರವಾನಿಸಲಾಗುತ್ತಿದೆ. ಬಾವಲಿಗಳ ಮೂಲಕ ನಿಪಾಹ್ ವೈರಸ್ ಹರಡುವುದಿಲ್ಲ ಎಂದು ಲ್ಯಾಬ್ ವರದಿಗಳು ತಿಳಿಸಿದ ನಂತರ ಇದೀಗ ನಿಪಾಹ್ ವೈರಸ್ ಗೆ ಕೋಳಿಗಳೇ ಕಾರಣ ಎನ್ನುವ ವದಂತಿ ಹೆಚ್ಚಾಗಿ ಹರಡುತ್ತಿದೆ.ಇಂತಹ ವದಂತಿಗಳು ಕಿಡಿಗೇಡಿಗಳ ಕೃತ್ಯವಾಗಿದ್ದು, ಜನರು ಈ ರೀತಿಯ ಸಂದೇಶಗಳನ್ನು ನಂಬಬಾರದು ಎಂದು ಕಲ್ಲಿಕೋಟೆ ಜಿಲ್ಲಾ ವೈದ್ಯಾಧಿಕಾರಿ ಡಾ.ವಿ. ಜಯಶ್ರೀ ಅವರು ಹೇಳಿದ್ದಾರೆ.. ಇದನ್ನು ಸಾರ್ವಜನಿಕರು ನಂಬಬಾರದು ಎಂದು ಸಹ ತಿಳಿಸಿದ್ದಾರೆ.

Edited By

Manjula M

Reported By

Manjula M

Comments