ಮೋದಿ ಸರ್ಕಾರದ ಈ ಯೋಜನೆಯಿಂದ 6 ತಿಂಗಳಲ್ಲಿ ರೂ. 5 ಕೋಟಿ ಗಳಿಸಿ ಶ್ರೀಮಂತರಾಗಬಹುದು..! ಹೇಗೆ ಅಂತೀರಾ..ಇದನ್ನೊಮ್ಮೆ ಓದಿ

29 May 2018 11:35 AM | General
14946 Report

ಯಾರಿಗ್ ತಾನೆ ಕೋಟ್ಯಾಧೀಶರಾಗಬೇಕೆಂಬ ಆಸೆ ಇರಲ್ಲ ಹೇಳಿ? ಎಲ್ಲರಿಗೂ ಕೂಡ ಈ ರೀತಿಯ ಆಸೆ ಇದ್ದೆ ಇರುತ್ತದೆ. ಆದರೆ ಅಷ್ಟು ಸುಲಭವಾಗಿ ಹೇಗೆ ಕೋಟ್ಯಾಧಿಷರಾಗಬಹುದು ಅಂತ ಯೋಚನೆ ಮಾಡುತ್ತಾ ಕುಳಿತರೆ ಸಾಕಷ್ಟು ಯೋಚನೆಗಳು ನಮ್ಮ ತಲೆಗೆ ಬರುತ್ತವೆ. ಚಿಂತೆ ಬಿಡಿ… ಅದನ್ನ ಸುಲಭಮಾಡೋದಕ್ಕೆ ಅಂತಾನೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅವಕಾಶವನ್ನು ಕಲ್ಪಿಸಿದೆ. ಆ ಅವಕಾಶವನ್ನು ಬಳಸಿಕೊಂಡರೆ ನೀವೂ ಕೂಡ ಶ್ರೀಮಂತರಾಗಬಹುದು.

ಕೇಂದ್ರ ಸರ್ಕಾರದಿಂದ ಸಿಗುತ್ತೆ 5.ಕೋಟಿ ರೂ ಬಹುಮಾನ….

ಕೇಂದ್ರ ಸರ್ಕಾರವು ಸೆಂಟ್ರಲ್ ಬೋರ್ಡ್  ಆಫ್ ಡೈರೆಕ್ಟ್ ಟ್ಯಾಕ್ಸ್ ಇಲಾಖೆಯು ಇತ್ತೀಚೆಗೆ ಪುರಸ್ಕಾರ ಯೋಜನೆಯನ್ನು ಪರಿಷ್ಕರಿಸಿದ್ದು, ಬಹುಮಾನದ ಮೊತ್ತವನ್ನು 5 ಕೋಟಿ ರೂಪಾಯಿಗೆ ಏರಿಸಿದೆ. ಇಷ್ಟು ದೊಡ್ಡ ಮೊತ್ತದ ಬಹುಮಾನ ನಿಮ್ಮದಾಗಬೇಕು ಅಂದರೆ ಏನು ಮಾಡಬೇಕು ಗೊತ್ತಾ? ಆದಾಯ ತೆರಿಗೆ ವಂಚಕರು ಹಾಗೂ ಕಾಳಧನವನ್ನು ಸಂಗ್ರಹಿಸಿರುವವರ ಬಗ್ಗೆ ಖಚಿತವಾದ ಮಾಹಿತಿಯನ್ನು ನೀವು ನೀಡಬೇಕಾಗುತ್ತದೆ. ಒಂದು ವೇಳೆ ಆದರೆ ಸುಳ್ಳು ಮಾಹಿತಿ ನೀಡಿದರೆ ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಸಹ ನಿಮಗೆ ನೆನಪಿರಲಿ.   Income-Tax Informants Reward Scheme 2018: ಎಂದು ಆಂಗ್ಲಭಾಷೆಯಲ್ಲಿ  ಕರೆಯಲಾಗುವ ಆದಾಯ ತೆರಿಗೆ ಮಾಹಿತಿದಾರರ ಪುರಸ್ಕಾರ ಯೋಜನೆಯನ್ನು ಕೇಂದ್ರ ಸರ್ಕಾರವು ಏಪ್ರಿಲ್ 24, 2018 ರಿಂದ ಜಾರಿಗೆ ತಂದಿದೆ. ಮುಚ್ಚಿಡಲಾದ ಆದಾಯ ಮತ್ತು ಆದಾಯ ತೆರಿಗೆ ವಂಚನೆ ಕುರಿತಾದ ಕಾಳಧನ ಕಾಯ್ದೆ-2015 ಹಾಗೂ ತೆರಿಗೆ ವಸೂಲು ಕಾಯ್ದೆ-2015 ರ ಅನ್ವಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದರೆ ಮಾಹಿತಿದಾರರಿಗೆ ಬಹುಮಾನ ನೀಡುವ ಯೋಜನೆ ಇದಾಗಿದೆ. ನೀವೂ ಕೂಡ ಈ ಯೋಜನೆಯನ್ನು ಪಡೆದುಕೊಳ್ಳಬಹುದು.

ಈ ವಿಷಯದ ಬಗ್ಗೆ ಸರ್ಕಾರಕ್ಕೆ ಯಾರು ಬೇಕಾದರೂ ಮಾಹಿತಿಯನ್ನು ನೀಡಬಹುದು.5 ಕೋಟಿ ರೂ. ಅಥವಾ ಅದಕ್ಕೂ ಮೀರಿದ ಆದಾಯ ತೆರಿಗೆ ವಂಚನೆ ಹಾಗೂ 1 ಕೋಟಿ ರೂಪಾಯಿವರೆಗಿನ ಬೇನಾಮಿ ಸ್ಥಿರಾಸ್ತಿ, ಚರಾಸ್ತಿಗಳ ನಿರ್ದಿಷ್ಟ ಮಾಹಿತಿಗಳನ್ನು ನೀಡಬಹುದು. ಆದರೆ ಈ ಎಲ್ಲ ಆರೋಪಗಳನ್ನು ರುಜುವಾತು ಪಡಿಸುವ ಸೂಕ್ತ ದಾಖಲೆಗಳನ್ನು ನೀಡುವುದು ತುಂಬಾ ಅಗತ್ಯವಾಗಿರುತ್ತದೆ.ಕಪ್ಪುಹಣದ ಬಗ್ಗೆ ಮಾಹಿತಿ ಇರುವವರು ಡೈರೆಕ್ಟರ್ ಜನರಲ್ ಆಫ್ ಇನ್‌ಕಮ್ ಟ್ಯಾಕ್ಸ್ (ಇಂಟೆಲಿಜೆನ್ಸ್) ಅವರನ್ನು ಸಂಪರ್ಕಿಸಬಹುದು. ಅದೇ ರೀತಿಯಾಗಿ ಬಿಟಿಐ ಸ್ಕೀಂನಡಿ ಮಾಹಿತಿಯನ್ನು ನೀಡಬಯಸುವವರು ಆದಾಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದು.

ಈ ಎರಡೂ ಸ್ಕೀಂನಲ್ಲಿ ಮಾಹಿತಿ ನೀಡುವವರು ನಿರ್ದಿಷ್ಟ ಫಾರ್ಮನಲ್ಲಿ ವಿವರಗಳನ್ನು ಫಿಲ್ ಮಾಡಿ ಸೂಕ್ತ ದಾಖಲೆಗಳೊಂದಿಗೆ ಇಲಾಖೆಗೆ ಸಲ್ಲಿಸಬೇಕಾಗಿರುವುದು ಅವಶ್ಯಕವಾಗಿರುತ್ತದೆ. ಅಲ್ಲದೆ ಈ ಫಾರ್ಮ್ ನಲ್ಲಿ ಮಾಹಿತಿ ನೀಡುವವರು ತಮ್ಮ ವೈಯಕ್ತಿಕ ವಿವರಗಳಾದ ಹೆಸರು, ತಂದೆಯ ಹೆಸರು, ವಿಳಾಸ, ಆಧಾರ ಸಂಖ್ಯೆ, ದೂರವಾಣಿ ಸಂಖ್ಯೆ ಮುಂತಾದ ವಿವರಗಳನ್ನು ನಮೂದಿಸಬೇಕಾಗಿರುವುದು ಕಡ್ಡಾಯವಾಗಿರುತ್ತದೆ.ಇದರೊಂದಿಗೆ ತೆರಿಗೆ ವಂಚಕರು ಹಾಗೂ ಕಪ್ಪುಹಣ ಸಂಗ್ರಹಿಸಿರುವವರ ಹೆಸರು, ವಿಳಾಸ, ಅವರು ಹೊಂದಿರುವ ಆಸ್ತಿಗಳ ಮಾಹಿತಿ ಮುಂತಾದ ವಿವರಗಳನ್ನು ಸಲ್ಲಿಸಬೇಕಿರುತ್ತದೆ. ನೀವು ನಿಡಿರುವ ಮಾಹಿತಿ ಎಲ್ಲಾ ಸರಿಯಿದ್ದು ಅದನ್ನ ಕೂಲಂಕುಶವಾಗಿ  ಪರಿಶೀಲನೆ ನಡೆಸಿದ ಬಳಿಕ ನಾಲ್ಕು ತಿಂಗಳಲ್ಲಿ ಮಧ್ಯಂತರ ಬಹುಮಾನ ಮತ್ತು ವಂಚನೆ, ಬೇನಾಮಿ ಆಸ್ತಿಯನ್ನು ವಶಪಡಿಸಿಕೊಂಡ ಆರು ತಿಂಗಳ ಒಳಗೆ ಅಂತಿಮ ಬಹುಮಾನವನ್ನು ನೀಡಲಾಗುವುದು. ಸರ್ಕಾರದ ಈ ಯೋಜನೆಯನ್ನು ನೀವು ಸದುಪಯೋಗ ಪಡಿಸಿಕೊಂಡು ಶ್ರಿಮಂತರಾಗಿರಿ.

Edited By

Manjula M

Reported By

Manjula M

Comments