ಇಂದು ನಮೋ app ಮೂಲಕ ಉಜ್ವಲ ಯೋಜನೆ ಫಲಾನುಭವಿಗಳೊಂದಿಗೆ ಮೋದಿ ಸಂವಾದ

28 May 2018 3:51 PM | General
478 Report

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದು ನಾಲ್ಕು ವರ್ಷಗಳು ಕಳೆದಿವೆ. "ಕಳೆದ ನಾಲ್ಕು ವರ್ಷಗಳಲ್ಲಿ ಉಜ್ವಲ ಯೋಜನೆಯ ಮೂಲಕ ಬಿಜೆಪಿ ಸರ್ಕಾರವು 10 ಕೋಟಿ ಮನೆಗಳಿಗೆ ಎಲ್ ಪಿ ಪಿ  ಸಂಪರ್ಕವನ್ನು ಒದಗಿಸಿದೆ. ಹಿಂದಿನ ಸರ್ಕಾರಕ್ಕೆ ದಶಕಗಳ ಕಾಲವೂ ಮಾಡಲಾಗದ ಸಾಧನೆಯೊಂದನ್ನು ಎನ್ ಡಿ ಎ ಸರ್ಕಾರ ಮಾಡಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಮಹಿಳೆಯ ಆರೋಗ್ಯ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಸ್ವಚ್ಛ ಅಡಿಗೆ ಅನಿಲ ಒದಗಿಸುವ ಸರ್ಕಾರದ ಉಜ್ವಲ ಯೋಜನೆಯ ಫಲಾನುಭವಿಗಳೊಂದಿಗೆ ತಮ್ಮ ನಮೋ app ಮೂಲಕ ಇಂದು ಪ್ರಧಾನಿ ಮೋದಿ ಸಂವಾದವನ್ನು ನಡೆಸಿದರು. ಉಜ್ವಲ ಯೋಜನೆ ಸಾಮಾಜಿಕ ಸಬಲೀಕರಣದತ್ತ ಇಟ್ಟ ದಿಟ್ಟ ಹೆಜ್ಜೆ ಎಂದು ಅವರು ಈ ಸಮಯದಲ್ಲಿ ಬಣ್ಣಿಸಿದರು. ದೇಶದ ಹಲವು ಜನರ ಮೇಲೆ ಈ ಉಜ್ವಲ ಯೋಜನೆಯು ಪರಿಣಾಮ ಬೀರಿದೆ. ಇದು ಭಾರತದ ಮಹಿಳಾ ಶಕ್ತಿಗೆ ಮತ್ತಷ್ಟು ಬಲವನ್ನು ನೀಡಿದೆ ಎಂದು ಅವರು ತಿಳಿಸಿದ್ದಾರೆ. "ಎಲ್ ಪಿಜಿ ಸಂಪರ್ಕ ಎಂಬುದು ಕೇವಲ ದಲಿತರ ಸ್ವತ್ತು ಎಂಬ ಕಾಲ ಬದಲಾಗಿದೆ. 2014 ರವರೆಗೆ ಕೇವಲ 13 ಕೋಟಿ ಕುಟುಂಬಗಳು ಮಾತ್ರ ಎಲ್ ಪಿಜಿ ಸಂಪರ್ಕ ಹೊಂದಿದ್ದವು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ 10 ಕೋಟಿಗೂ ಅಧಿಕ ಕುಟುಂಬ ಹೊಸದಾಗಿ ಎಲ್ ಪಿಜಿ ಸಂಪರ್ಕ ಪಡೆದಿದೆ" ಎಂದು ಅವರು ಹೆಮ್ಮೆಯನ್ನು  ವ್ಯಕ್ತಪಡಿಸಿದರು. ಉಜ್ವಲ ಯೋಜನೆಯನ್ನು ಮೇ 1, 2016 ರಲ್ಲಿ ಮೋದಿಯವರು ಉತ್ತರ ಪ್ರದೇಶದಲ್ಲಿ ಬಿಡುಗಡೆಗೊಳಿಸಿದರು. ಈ ಯೋಜನೆಯಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ 5 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅಡಿಗೆ ಅನಿಲ ಸಂಪರ್ಕವನ್ನು ನೀಡಲಾಗಿದೆ.

 

Edited By

Manjula M

Reported By

Manjula M

Comments