ದರ್ಶನ್ ಮತ ಹಾಕಲು ಬರದೆ ಇರುವುದಕ್ಕೆ ಇದೇ ಕಾರಣನಾ..?!

28 May 2018 11:32 AM | General
431 Report

ಇಂದು ಆರ್ ಆರ್ ನಗರದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತದಾನ ಮಾಡುತ್ತಿಲ್ಲ.

ಎಸ್… ಯಜಮಾನ ಚಿತ್ರದ ಶೂಟಿಂಗ್ ಗಾಗಿ ದರ್ಶನ್ ಅವರು ಮುಂಬೈಗೆ ಹೋಗಿದ್ದು, ಮತದಾನ ಮಾಡಲು ಬರುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ದರ್ಶನ್ ಅವರು ಮುಂಬೈನಲ್ಲಿ ಯಜಮಾನ ಚಿತ್ರದ ಶೂಟಿಂಗ್ ನಲ್ಲಿದ್ದು, ಯಜಮಾನ ಚಿತ್ರಕ್ಕೆ ಮೊದಲೇ ಡೇಟ್ಸ್ ಫಿಕ್ಸ್ ಆಗಿದ್ದರಿಂದ ಮತದಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಚುನಾವಣೆ ದಿನಾಂಕ ಪೋಸ್ಟ್ ಪೋನ್ ಆಗಿದ್ದರಿಂದ ಓಟ್ ಮಾಡುತ್ತಿಲ್ಲ ಎಂದು ತಿಳಿದುಬಂದಿದೆ.

 

Edited By

Manjula M

Reported By

Manjula M

Comments