ನೀವು ಬಿಪಿಎಲ್ ಕಾರ್ಡ್ ಹೊಂದಿದ್ದೀರಾ? ಹಾಗಾದ್ರೆ ಮೋದಿ ಸರ್ಕಾರದಿಂದ ಸಿಕ್ತು ಅನ್ಕೊಳ್ಳಿ ಬಂಪರ್ ಗಿಫ್ಟ್..!

28 May 2018 10:44 AM | General
23670 Report

ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಬಂದು ನಾಲ್ಕು ವರ್ಷಗಳು ಪೂರೈಸಿವೆ. ಹಾಗಾಗಿ ದೇಶದ ಜನರ ಆರೋಗ್ಯ ಸ್ಥಿತಿ ಸುಧಾರಿಸುವುದಕ್ಕಾಗಿ ಇದೇ ಆಗಸ್ಟ್​ 15ರಂದು ಯೋಜನೆಯೊಂದನ್ನು ಜಾರಿಗೆ ತರಲಿದ್ದಾರೆ. ಇಡೀ ದೇಶದ ಬಡ ರೈತ ವರ್ಗದವರಿಗೂ ಮತ್ತು ಕಾರ್ಮಿಕ ವರ್ಗಗಳಿಗೆ ಅನುಕೂಲವಾಗುವಂತಹ ಯೋಜನೆಯು ಇದಾಗಲಿದೆ. ಅಷ್ಟೆ ಅಲ್ಲದೆ ಈ ಯೋಜನೆಯು ಭಾರತದಲ್ಲಿ ಬಿಪಿಎಲ್​ ಕಾರ್ಡ್​ ಹೊಂದಿರುವ ವ್ಯಕ್ತಿಗಳಿಗೆ ಸುಲಭವಾಗಿ ಸಿಗಲಿದೆ ಎಂದು ತಿಳಿಸಿದ್ದಾರೆ.

ತಮ್ಮ ಸರ್ಕಾರದ ಮಹತ್ವಾಕಾಂಕ್ಷಿ ‘ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ’ಯನ್ನು ಇದೇ ಆಗಸ್ಟ್​ 15 ಬಿಡುಗಡೆ ಮಾಡಲಿದ್ದಾರೆ ಎಂದು ಸರ್ಕಾರಿ ಮೂಲಗಳು ವರದಿ ಮಾಡಿ ತಿಳಿಸಿವೆ. ಈ ಯೋಜನೆಯಲ್ಲಿ ಖಾಸಗೀ ಆಸ್ಪತ್ರೆಗಳಿಗೂ ಸೇರಿದಂತೆ ಮಹಿಳೆಯರ ಹೆರಿಗೆಯ ಸಮಯದಲ್ಲಿ ಹಾಗೂ ಸಿಸೆರಿಯನ್ ಗೆ​ ಅದಕ್ಕೆ ತಗಲುವ ವೆಚ್ಚವನ್ನು ಆರೋಗ್ಯ ವಿಮೆಯ ಮೂಲಕ ದೇಶದಲ್ಲಿರುವ 50 ಕೋಟಿ ಜನರಿಗೆ ತಲುಪಿಸುವ ಗುರಿಯನ್ನು ನರೇಂದ್ರಮೋದಿ ಸರ್ಕಾರ ಕೈಗೆತ್ತಿಕೊಂಡಿದೆ.

ಆರೋಗ್ಯ ಸಚಿವಾಲಯವು ‘ಮೋದಿ ಕೇರ್‌’ ಯೋಜನೆಯಡಿಯಲ್ಲಿ ಈಗಾಗಲೇ 1354 ಚಿಕಿತ್ಸಾ ಪ್ಯಾಕೇಜ್‌ಗಳನ್ನು ಅಂತಿಮಗೊಳಿಸಿದ್ದು, ಅದರಲ್ಲಿ ಹೃದಯ ರೋಗ,ನೇತ್ರ ಸಮಸ್ಯೆ, ಮೂಳೆ ಸಮಸ್ಯೆ, ಮೂತ್ರಕೋಶ ಸಮಸ್ಯೆ ಹಾಗೂ ಕ್ಯಾನ್ಸರ್‌ನಂತಹ  23 ಕಾಯಿಲೆಗಳೂ ಚಿಕಿತ್ಸಾ ಪ್ಯಾಕೆಜ್ ನಲ್ಲಿ ಬರುತ್ತವೆ. ಒಂದು ಸ್ಟಂಟ್ ಅಳವಡಿಕೆಗೆ ಒಳಗೊಂಡ ಆಯಂಜಿಯೋಪ್ಲಾಸ್ಟಿಗೆ 50,000 ರೂ, ಎರಡು ಸ್ಟಂಟ್‌ಗಳಿಗೆ 65,000 ರೂ, ಮಂಡಿ ಚಿಪ್ಪುಗಳ ಬದಲಾವಣೆಗೆ 80,000, ಸಿಸೇರಿಯನ್‌ ಹೆರಿಗೆಗೆ 9,000 ರೂ. ದರವನ್ನು ನಿಗದಿಗೊಳಿಸಲಾಗಿದೆ. ಇದು ಕೇಂದ್ರ ಸರ್ಕಾರಿ ನೌಕರರಿಗೆ ಲಭಿಸುತ್ತಿರುವ ಚಿಕಿತ್ಸಾ ದರಕ್ಕಿಂತ ಶೇ.15ರಿಂದ ಶೇ.20ರಷ್ಟುಕಡಿಮೆಯಾಗಲಿದೆ ಎನ್ನಬಹುದು.

ಖಾಸಗಿ ಆಸ್ಪತ್ರೆಗಳಲ್ಲಿ ಆಯಂಜಿಯೋಪ್ಲಾಸ್ಟಿಗೆ 1.5ರಿಂದ 2 ಲಕ್ಷ ರೂ, ಸಿಸೇರಿಯನ್‌ ಗೆ 1.5 ರೂ, ಲಕ್ಷ, ಮಂಡಿ ಚಿಪ್ಪು ಬದಲಾವಣೆಗೆ 3.5 ಲಕ್ಷ ರೂ, ಪಾವತಿಸಬೇಕಾಗಿದೆ. ಆ ದರಗಳಿಗೆ ಹೋಲಿಸಿದರೆ ಕೇಂದ್ರ ಸರ್ಕಾರ ನಿಗದಿಪಡಿಸುತ್ತಿರುವ ದರ ತುಂಬಾನೇ ಕಡಿಮೆಯಿದೆ. ದರಪಟ್ಟಿ ಒಳಗೊಂಡ 205 ಪುಟಗಳ ಕರಡನ್ನು ಕೇಂದ್ರ ಸರ್ಕಾರವು ರಾಜ್ಯಗಳಿಗೆ ರವಾನೆ ಮಾಡಲಾಗಿದೆ. ಈ ಯೋಜನೆ ಜಾರಿಗೆ ಬಂದರೆ, ದರ ಇಳಿಕೆ ಮಾಡುವಂತಹ ಒತ್ತಡ ಖಾಸಗಿ ಆಸ್ಪತ್ರೆಗಳ ಸಾಮಾನ್ಯವಾಗಿ ಬೀಳಲಿದೆ.

 

 

Edited By

Manjula M

Reported By

Manjula M

Comments