ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ-ಬಾಲಕಿಯರೇ ಮೇಲುಗೈ

26 May 2018 2:44 PM | General
346 Report

ಸಿಬಿಎಸ್‌ಇ 12 ನೇ ತರಗತಿಯ ಫಲಿತಾಂಶವನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಪ್ರಕಟ ಮಾಡಿದೆ. ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟ ಮಾಡಿದ್ದು ವಿದ್ಯಾರ್ಥಿಗಳು cbse.nic.in. ಇಲ್ಲಿ  ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ.

ಕಳೆದ ವರ್ಷಕ್ಕಿಂತ ಈ ವರ್ಷ ಸಿಬಿಎಸ್‌ಇ ಫಲಿತಾಂಶದಲ್ಲಿ ಏರಿಕೆ ಕಂಡು ಬಂದಿದ್ದು, ಕಳೆದ ವರ್ಷ ಶೇ.82.02ರಷ್ಟಿದ್ದು, ಈ ವರ್ಷ ಶೇ.83.01ಕ್ಕೆ ಏರಿಕೆಯಾಗಿದೆ. ಈ ಬಾರಿಯ ಫಲಿತಾಂಶದಲ್ಲಿ ಶೇ.97.32 ಫಲಿತಾಂಶ ಪಡೆಯುವ ಮೂಲಕ ತ್ರಿವೆಂಡ್ರಮ್ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿ ಚೆನ್ನೈ ಇದ್ದು 93.87ರಷ್ಟು ಫಲಿತಾಂಶ ಪಡೆದಿದೆ. ಇನ್ನು ಈ ಬಾರಿ ಫಲಿತಾಂಶದಲ್ಲಿ ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಒಟ್ಟು 15,674 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 14,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

 

Edited By

Manjula M

Reported By

Manjula M

Comments