ಮೌಂಟ್ ಎವರೆಸ್ಟ್ ಏರಿದ ಭಾರತದ ಮೊದಲ ತಂದೆ-ಮಗಳು

17 May 2018 11:49 AM | General
539 Report

ಮೌಂಟ್ ಎವರೆಸ್ಟ್ ಶಿಖರವನ್ನು ಹತ್ತಿದವರಲ್ಲಿ ಸಾಕಷ್ಟು ಜನ ಇದ್ದಾರೆ. ಆದರೆ ಇದೇ ಮೊದಲ ಬಾರಿಗೆ ಭಾರತದ ತಂದೆ ಮಗಳು ಮೌಂಟ್ ಎವರೆಸ್ಟ್ ಏರಿದ ಮೊದಲ ಭಾರತೀಯರಾಗಿದ್ದಾರೆ.

ದೆಹಲಿಯ ಗುರುಗ್ರಾಮ ಮೂಲದ ಅಜಿತ್ ಬಜಾಜ್ (53) ಮತ್ತು ಮಗಳು ದೀಯಾ ಬಜಾಜ್(24) ಪ್ರಪಂಚದ ಅತ್ಯಂತ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಏರಿದ ಭಾರತದ ಮೊದಲ ತಂದೆ-ಮಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಂದೆ ಮತ್ತು ಮಗಳು ಏ.16ರಂದು ಪರ್ವತಾರೋಹಣಕ್ಕೆ ತೆರಳಿದ್ದು, ಬುಧವಾರ ಮುಂಜಾನೆ 4.30ರ ವೇಳೆಗೆ ದೀಯಾ ಎವರೆಸ್ಟ್ ತಲುಪಿದ್ದರೆ, ತಂದೆ ಅಜಿತ್ 15ನಿ. ತಡವಾಗಿ ಎವರೆಸ್ಟ್  ಶಿಖರವನ್ನು ಏರಿದರು.

 

Edited By

Manjula M

Reported By

Manjula M

Comments