ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಆತ್ಮಹತ್ಯೆ ಬಗ್ಗೆ ಯೋಚನೆ ಮಾಡುದ್ರಾ ಈ ನಟಿ..!

14 May 2018 3:04 PM | General
1112 Report

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರದ ಮೂಲಕ ಹಿಂದಿ ಸಿನಿಮಾರಂಗಕ್ಕೆ ಪ್ರವೇಶ ಮಾಡಿದ 17 ವರ್ಷದ ಮುದ್ದು ಚೆಲುವೆ ಜೈರಾ ವಾಸೀಮ್ ಈ ವರೆಗೂ ಮಾಡಿರುವುದು ಕೇವಲ ಎರಡೇ ಸಿನಿಮಾ ಅಷ್ಟೆ. 'ದಂಗಲ್' ಮತ್ತು 'ಸೀಕ್ರೆಟ್ ಸೂಪರ್ ಸ್ಟಾರ್' ಎಂಬ ಎರಡು ಚಿತ್ರದಲ್ಲಿ ಜೈರಾ ನಟಿಸಿದ್ದರು.

ಮೊದಲ ಚಿತ್ರದ ಅಭಿನಯದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ಖ್ಯಾತಿ ಈ ನಟಿಗೆ ಸಲ್ಲುತ್ತದೆ. ಅತಿ ಚಿಕ್ಕವಯಸ್ಸಿನಲ್ಲೇ ದೊಡ್ಡ ಯಶಸ್ಸುನ್ನು ಕಂಡ ಜೈರಾ ತನ್ನ ಬಗ್ಗೆ ಒಂದು ಸ್ಫೋಟಕ ಸುದ್ದಿಯನ್ನು ಹಂಚಿಕೊಂಡಿದ್ದಾರೆ.ಈ ವಿಷಯವನ್ನು ನಂಬಲು ಅಸಾಧ್ಯವೆನಿಸಿದರೂ ಕೂಡ ನಂಬಬೇಕಾದ ಅನಿವಾರ್ಯತೆ. ಹೌದು, ಕಳೆದ ಹಲವು ವರ್ಷಗಳಿಂದ ಜೈರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಈ ಬಗ್ಗೆ ಸ್ವತಃ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದೇನೆ ಈ ಸಂದರ್ಭದಲ್ಲಿ ನಾನು ಅನುಭವಿಸುವ ಮಾನಸಿಕ ವೇತನೆ, ನೋವು ಯಾರಿಗೂ ಬೇಡ. ಇದ್ದಕ್ಕಿದ್ದ ಹಾಗೆ ಸುಸ್ತು, ನರಗಳ ತೊಂದರೆ, ಆತ್ಮಹತ್ಯೆಯ ಯೋಚನೆಗಳು ಕೂಡ ಬಂದಿದ್ದವು. ರಾತ್ರಿಯಲ್ಲಿ ನಿದ್ದೆ ಬರುತ್ತಿಲ್ಲ…ಮದ್ಯರಾತ್ರಿಯಲ್ಲಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಈ ಪರಿಸ್ಥಿತಿ ಯಾರಿಗೂ ಕೂಡ ಬೇಡ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.

 

Edited By

Manjula M

Reported By

Manjula M

Comments