ಶ್ರೀದೇವಿ ಸಾವಿನ ಸ್ವತಂತ್ರ ತನಿಖೆ ವಜಾಗೊಳಿಸಿದ ಸುಪ್ರೀಂ..!

11 May 2018 1:55 PM | General
413 Report

ದುಬೈನಲ್ಲಿರುವ ಪಂಚಾತಾರ ಹೋಟೆಲ್‍ನ ಬಾತ್‍ಟಬ್‍ನಲ್ಲಿ ಆಕಸ್ಮಿಕವಾಗಿ ಬಿದ್ದು, ಫೆ.24ರಂದು ಶ್ರೀದೇವಿ ಮೃತಪಟ್ಟಿದ್ದರು. ಆದರೆ ಇದೀಗ ಬಾಲಿವುಡ್ ಅಭಿನೇತ್ರಿ ಶ್ರೀದೇವಿ ಸಾವಿನ ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇದೀಗ  ವಜಾಗೊಳಿಸಿದೆ.

ಶ್ರೀದೇವಿ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಮತ್ತು ಗೊಂದಲಗಳಿವೆ. ಈ ಬಗ್ಗೆ ಸ್ವತಂತ್ರ ಸಂಸ್ಥೆಯೊಂದರಿಂದ ತನಿಖೆ ನಡೆಸಬೇಕೆಂದು ಸುನಿಲ್ ಸಿಂಗ್ ಎಂಬುವರು ಸುಪ್ರೀಂಕೋರ್ಟ್‍ಗೆ ಅರ್ಜಿಯನ್ನು ಸಲ್ಲಿಸಿದ್ದು ಇದೀಗ ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಯಾದ ದೀಪಕ್ ಮಿಶ್ರ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನು ಒಳಗೊಂಡ ಪೀಠ ಕೋರಿಕೆಯನ್ನು ವಜಾಗೊಳಿಸಿದೆ.

Edited By

Manjula M

Reported By

Manjula M

Comments