ಮೇ 11, 12 ರಂದು ಬಸ್ ಸಿಗೋದು ಸ್ವಲ್ಪ ಕಷ್ಟ..!

09 May 2018 3:58 PM | General
474 Report

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸುಮಾರು 4 ಸಾವಿರ ಬಸ್‌ಗಳು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವುದರಿಂದ ಮೇ 11 ಮತ್ತು 12 ರಂದು ಎರಡು ದಿನ ಬಸ್ ಸಂಚಾರದಲ್ಲಿ ಸಾಕಷ್ಟು ವ್ಯತ್ಯಯವಾಗಲಿದೆ.

ಮೇ 12 ರಂದು ಮತದಾನ ಪ್ರಕ್ರಿಯೆ ನಡೆಯುವುದರಿಂದ ಮೇ 11 ರಂದು ಚುನಾವಣಾ ಸಿಬ್ಬಂದಿ ನಿಗದಿತ ಮತಗಟ್ಟೆಗಳಿಗೆ ತೆರಳುತ್ತಾರೆ. ಹಾಗಾಗಿ ಪೊಲೀಸರು ಕೂಡ ತೆರಳುತ್ತಾರೆ. ನಿಗಮದಲ್ಲಿ ಒಟ್ಟು 8800 ಬಸ್‌ಗಳಿದ್ದು, ಈ ಪೈಕಿ 4 ಸಾವಿರ ಬಸ್‌ಗಳು ಚುನಾವಣಾ ಕಾರ್ಯಕ್ಕೆ ನಿಯೋಜನೆ ಆಗಿರುವುದರಿಂದ  ರಾಜ್ಯದ ಬಹುತೇಕ ಮಾರ್ಗಗಳಲ್ಲಿ ಈ ಎರಡೂ ದಿನ ಬಸ್ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಲಿದೆ. ಇದರಿಂದ ರಾಜ್ಯದ ವಿವಿಧೆಡೆ ತೆರಳುವ ಪ್ರಯಾಣಿಕರಿಗೆ ಸಮಸ್ಯೆಯಾಗಲಿದೆ ಎಂದು ತಿಳಿಸಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮದಿಂದಲೂ(ಬಿಎಂಟಿಸಿ) ಕೂಡ ಒಂದು ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

 

Edited By

Manjula M

Reported By

Manjula M

Comments