ಪ್ರಥಮ ಪಿ ಯು ಪ್ರವೇಶಕ್ಕೆ ಅರ್ಜಿ ವಿತರಣೆ ಪ್ರಾರಂಭ : ಮೇ.14ರವರೆಗೆ ವಿತರಣೆ

ಎಸ್ ಎಸ್ ಎಲ್ ಸಿ ಫಲಿತಾಂಶ ಬಂದು ಎರಡು ದಿನಗಳು ಕಳೆದಿದೆ ಅಷ್ಟೆ. ಆಗಲೇ ಕೆಲವು ಕಾಲೇಜುಗಳು ಪ್ರಥಮ ಪಿಯು ಪ್ರವೇಶಕ್ಕೆ ಅರ್ಜಿ ನೀಡಲು ಪ್ರಾರಂಭ ಮಾಡಿವೆ.
ನಗರದ ಕೆಲ ಪ್ರತಿಷ್ಠಿತ ಕಾಲೇಜುಗಳಲ್ಲಿ ಅರ್ಜಿ ಪಡೆಯಲು ನೂಕುನುಗ್ಗಲು ಶುರುವಾಗಿದೆ. ಈ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶವು ಕೂಡ ಶೇ.4ರಷ್ಟು ಹೆಚ್ಚಾಗಿರುವುದರಿಂದ ಕೆಲವು ಖಾಸಗಿ ಪ್ರತಿಷ್ಠಿತ ಕಾಲೇಜುಗಳು ಕಟ್‌ಆಫ್ ಏರಿಸಲು ನಿರ್ಧಾರ ಮಾಡಿವೆ. ನಗರದ ಪಿಇಎಸ್, ಎಂಇಇಎಸ್, ಮೌಂಟ್ ಕಾರ್ಮಲ್ ಸೇರಿ ಇತರೆ ಹಲವು ಕಾಲೇಜುಗಳ ಮುಂದೆ ಪೋಷಕರು ಮತ್ತು ವಿದ್ಯಾರ್ಥಿಗಳು ಅರ್ಜಿ ಪಡೆಯಲು ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಕಂಡು ಬಂದವು..
Comments