ಮಿರಾಕಲ್ ಎನಿಸುವ ಈ ಮಿರಾಕಲ್ ಗಾರ್ಡನ್ ಗೆ ನೀವೊಮ್ಮೆ ವಿಸಿಟ್ ಕೊಡಿ..!

08 May 2018 2:33 PM | General
840 Report

ಹೂವು ಚೆಲುವೆಲ್ಲಾ ನಂದೆಂದಿತೂ.. ಹೌದು.. ಹೂವಿನ ಚೆಲುವಿಗೆ ಮಾರುಹೋದ ಮಂದಿಯೇ ಇಲ್ಲಾ.. ಕಣ್ಣಿಗೆ ಆಕರ್ಷಕವಾದ ವಿವಿಧ ಬಗೆಯ ಹೂವುಗಳು ಸುವಾಸನೆಯ ಪರಿಮಳ ಬೀರುತ್ತಿದ್ರೆ ಅಹಾ ಎಷ್ಟು ಚೆಂದಾ ಅಲ್ವಾ…ಯಾವುದೆ ಗೊಂದಲವಿಲ್ಲದೆ ಕೊಂಚ ರಿಲ್ಯಾಕ್ಸ್ ಪಡೆಯೋ ಗಾರ್ಡನ್‍ಗಳು…ಮುಖದಲ್ಲಿ ಮಂದವಾಸವನ್ನು ನೀಡುವ ಕಲರ್ ಕಲರ್ ಹೂಗಳು.. ಎತ್ತ ನೋಡಿದರೂ ಬಣ್ಣ ಬಣ್ಣದ ಹೂ ಗುಚ್ಚಗಳು.. ನೋಡೋಕೆ ಎರಡು ಕಣ್ಣುಗಳೂ ಸಾಲದು.. ಎಸ್.. ದುಬೈನಲ್ಲಿನ ಈ ಗಾರ್ಡನ್ ನಿಜಕ್ಕೂ ನೋಡುಗರಿಗೆ ಮಿರಾಕಲ್ ಅನ್ನಿಸದೇ ಇರಲ್ಲಾ.

ಹೂಗಳು ಎಂದರೆ ಅಂದರೆ ಎಲ್ಲರಿಗೂ ತುಂಬಾನೆ ಇಷ್ಟ.. ಅದರಲ್ಲೂ ಬಣ್ಣ ಬಣ್ಣದ ಹೂಗಳು ಒಂದೆ ಕಡೆ ಇದ್ದರೆ ಮುಗಿತೂ ಅಲ್ಲಿಂದ ಎದ್ದು ಬರೋಕೆ ಮನಸೆ ಆಗೋದಿಲ್ಲ… ಸ್ವರ್ಗನೆ ಧರೆಗೆ ಇಳಿದು ಬಂದಂತೆ ಇರುತ್ತದೆ.. ಎಲ್ಲೆಡೆ ಚುಮ್ಮುವ ಕಾರಂಜಿ ಇದ್ದರಂತೂ ಆಹಾ ಅದರ ಅನುಭವವನ್ನು ಹೇಳಿಕೊಳ್ಳೊಕೆ ಸಾದ್ಯವೇ ಇಲ್ಲ.. ಎಲ್ಲರೂ ಕೂಡ ಪ್ಯಾಮಿಲಿ ಸಮೇತ ಹೋಗುವಂತ ಪ್ಲೇಸ್‍ಗಳಲ್ಲಿ ಗಾರ್ಡನ್‍ಗಳೂ ಕೂಡ ಒಂದು..ನಾವು ಈಗ ಹೇಳಿರ್ತೋದು ಕೂಡ ಒಂದು ಗಾರ್ಡನ್ ಬಗ್ಗೆ.. ಯಾವುದು ಅಂತಿರಾ.. ಅದೇ ಕಣ್ರೀ ವಿಶ್ವದ ಅತಿ ದೊಡ್ಡ ಹೂವಿನ ಉದ್ಯಾನವನಗಳಲ್ಲಿ ಒಂದಾದ ದುಬೈನಲ್ಲಿರೋ ಮಿರಾಕಲ್ ಗಾರ್ಡನ್.. ಈ ಮಿರಾಕಲ್ ಗಾರ್ಡನ್ ನ ನೋಡೋಕೆ ಎರಡು ಕಣ್ಣು ಸಾಲುವುದಿಲ್ಲ.. ಅಷ್ಟು ಕಲರ್‍ಫುಲ್ ಆಗಿದೆ ಅಂತನೇ ಹೇಳಬಹುದು.. ಎಲ್ಲೆಡೆ ಬಣ್ಣ ಬಣ್ಣದ ಹೂಗಳು ಅದನ್ನು ನೋಡೊಕೆ ಬಂದಿರೋ ಜನ ಸಮೂಹ…ಎಲ್ಲೆಡೆ ಪೋಟೊ ತೆಗಿಸಿಕೊಳ್ತಿರೋ ಪ್ರೇಮಿಗಳು.. ವಾವ್ ಸೂಪರ್  ಅಂತನೇ ಹೇಳಬಹುದು..

ದುಬೈ ಎಂಬ ಹೆಸರು ಕೇಳಿದ ತಕ್ಷಣ ಮನಸ್ಸಿನಲ್ಲಿ ಮೂಡುವ ಒಂದು ವಿಷಯ ಅಂದರೆ ಗಗನಚುಂಬಿ ಕಟ್ಟಡಗಳು.. ಸುಂದರವಾದ ಬೀಚುಗಳು, ಐಷಾರಾಮಿ ಹೋಟೆಲ್‍ಗಳು ಎಲ್ಲಿ ನೋಡಿದರೂ ಕೂಡ ಇವೆ ನಮ್ಮ ಕಣ್ಣ ಮುಂದೆ ಬಂದು ಹೋಗುತ್ತವೆ. ಬುರ್ಜ ಖಲೀಫ ಎಂಬ ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಇರುವುದು ಕೂಡ ದುಬೈನಲ್ಲೆ.. ಹೀಗಿರುವ ದುಬೈನಲ್ಲಿ ಹೊಸ ಸೇರ್ಪಡೆ ಎಂಬಂತೆ ಮಿರಾಕಲ್ ಗಾರ್ಡನ್ ಕೂಡ ಸೇರಿಕೊಂಡು ದುಬೈ ಮೆರುಗನ್ನು ಜಾಸ್ತಿ ಮಾಡಿದೆ.. ಈ ಮಿರಾಕಲ್ ಗಾರ್ಡನ್ ಧರೆಗಿಳಿದ ಸ್ವರ್ಗದಂತೆ ಇದೆ ಎಂದರೆ ನೀವೆಲ್ಲಾ ನಂಬಲೆ ಬೇಕು..ಹೆಸರೇ ಹೇಳುವಂತೆ ಮಿರಾಕಲ್ ಗಾರ್ಡನ್.. ಅಂದರೆ ಅದ್ಭುತ ಕ್ಷಣಗಳನ್ನು ತೆರೆದಿಡುವಂತ ಸ್ಥಳ ಎಂದರೆ ನಿಜಕ್ಕೂ ತಪ್ಪಾಗಲಾದರು. ನಿಜಕ್ಕೂ ಇದೊಂದು ಅದ್ಭುತ ಅಂತನೇ ಹೇಳಬಹುದು.. ಕಣ್ಮನಗಳನ್ನು ಸೆಳೆಯುವಂತಹ ತಣಿಸುವಂತಹ ಹೂ ರಾಶಿಯ ಬೃಂದಾವನ.. ಈ ಗಾರ್ಡನ್‍ನಲ್ಲಿ ಎತ್ತ  ನೋಡಿದರೂ ಹೂ ರಾಶಿಗಳು, ಬಣ್ಣಗಳ ಓಕುಳಿಯಂತಿರುವ ರಾಶಿ ರಾಶಿ ಹೂ ಗುಚ್ಚಗಳು.. ಬಿಳಿ ಹಸಿರು ಹಳದಿ ಕೆಂಪು ನೀಲಿ 60 ಕ್ಕಿಂತಲೂ ಹೆಚ್ಚಿನ ಬಣ್ಣಗಳು.. ಕಣ್ಣಿಗೆ ನಿಲುಕುವವರೆಗೂ ಕಾಣುವ ಹೂ ರಾಶಿಗಳು.ಇದುವೆ ಮಿರಾಕಲ್ ಗಾರ್ಡನ್‍ನ ಸೊಬಗು ಅಂತನೇ ಹೇಳಬಹುದು.. ನವೆಂಬರ್ 22 2012 ರಂದು ಆರಂಭವಾದ ಈ ಗಾರ್ಡನ್ ಕೆಲಸದ ಹೊಣೆ ಹೊತ್ತ ಅಲ ಅಯಿನ್ ಎಂಬಲ್ಲಿಯ ಅಕ್ಬರ್‍ಲ್ಯಾಂಡ್ ಸ್ಕೇಪಿಂಗ್ ಅಂಡ್ ಎಗ್ರಿಕಲ್ಚರಲ್ ಕಂಪನಿಯು ಸತತ ಪ್ರಯತ್ನದಿಂದ ಮೂರು ತಿಂಗಳಿನ ಒಳಗೆ ಉತ್ತಮವಾದ ಬೃಂದಾವನವನ್ನು ಇಲ್ಲಿ ರೂಪಿಸಿಕೊಟ್ಟಿತು.. ಇದರಲ್ಲಿ ವಿವಿಧ ಶೈಲಿಗಳಲ್ಲಿ ಅಂದರೆ ಹ್ಯಾಂಗಿಂಗ್ , ಹಾರ್ಟ್ ಶೇಪ್, ನಕ್ಷತ್ರ, ಪಿರಮಿಡ್, ವಿವಿಧ ಅಂತಸ್ತುಗಳಲ್ಲಿ ಸಿಂಗಾರಗೊಂಡ ಹೂಗಳು.. ಎರಡು ಬೀದಿಗಳಲ್ಲಿ ಹೂಗಳಿಂದ ನಿರ್ಮಿತವಾದ ಗೋಳಗಳು, ಪಾಥ್ ವೇಯಲ್ಲಿ ಬಣ್ಣದ ಹೂಗಳ ಚಪ್ಪರ ಹಾಗೂ ಹೂಗಳಲ್ಲಿ ಮಿಂದೆದ್ದ ವಿಂಟೇಜ್ ಕಾರುಗಳು ಚಿತ್ತಾಕರ್ಷಕವಾಗಿದೆ.

ಸುಮಾರು 72000 ಚದುರ ಮೀಟರ್ ವಿಸ್ತಾರವಾಗಿರುವ ಈ ಗಾರ್ಡನ್ 60ಕ್ಕಿಂತ ಹೆಚ್ಚು ಬಗೆಯ ಬಣ್ಣದ ಹೂಗಳಿರುವ ಗಿಡವನ್ನು ಹೊಂದಿದ್ದು, ಇಲ್ಲಿ ಸುಮಾರು ನಾಲ್ಕುವರೆ ಕೋಟಿ ಹೂಗಳಿರಬಹುದೆಂದು ಅಂದಾಜಿಸಲಾಗಿದೆ. ಬೇರೆ ಬೇರೆ ದೇಶಳಿಂದ ತರಿಸಲಾಗಿರರುವ ಈ ಗಿಡಗಳ ಹೂಗಳೆಲ್ಲಾ ಹಲವು ದಿನಗಳ ಕಾಲ ಅರಳಿ ಸುವಾಸನೆ ಬೀರುವ ಸಾಮಥ್ರ್ಯ ಹೊಂದಿವೆ. ಇನ್ನೂ ಕೆಲವು ಗಿಡಗಳಂತು ಕೊಲ್ಲಿ ರಾಷ್ಟ್ರದಲ್ಲೇ ಮೊದಲ ಬಾರಿಗೆ ತರಿಸಿದ ಹೆಗ್ಗಳಿಕೆಗೆ ಭಾಜನವಾಗಿದೆ.ಗಿನ್ನಿಸ್ ಬುಕ್‍ನಲ್ಲಿ ದಾಖಲಾಗಿರುವ ಇದೇ  ಆಲ್ ಅಯಿನ್‍ನಲ್ಲಿ ರೂಪುಗೊಂಡ ಅಲ ಅಯಿನ್ ಪ್ಯಾರಡೈಸ್ ಅನ್ನುವ ಜಗತ್ತಿನ ಅತಿ ದೊಡ್ಡ ಹ್ಯಾಂಗಿಂಗ್ ಗಾರ್ಡನ್ ಹೋಲುವ ಈ ಗಾರ್ಡನ್ನ ಮತ್ತೊಂದು ವಿಶೇಷತೆ ಅಂದ್ರೆ ಹೂ ಗಳಿಂದಲೇ ಆವೃತವಾದ ಅತ್ಯಂತ ಉದ್ದದ ಗೋಡೆ.. ಇದರ ಉದ್ದ ಸರಿ ಸುಮಾರು 1 ಕಿಮೀ.. ಮತ್ತೊಂದು ಇನ್ಟ್ರೆಸ್ಟಿಂಗ್ ವಿಷಯ ಅಂದ್ರೆ ಈ ಗೋಡೆ ಗಿನ್ನಿಸ್ ಬುಕ್‍ನಲ್ಲಿ ಸ್ಥಾನ ಪಡೆಯಲು ಹೊರಟಿದೆ.. ನೀವು ಕೂಡ ಒಮ್ಮೆ ಬಿಡುವು ಮಾಡಿಕೊಂಡು ಈ ಮಿರಾಕಲ್ ಗಾರ್ಡನ್ ಗೆ ಫ್ಯಾಮಿಲಿ ಸಮೇತ ಹೋಗಿ ಬನ್ನಿ.

 

Edited By

Manjula M

Reported By

Manjula M

Comments