ಇಸ್ರೋದಿಂದ ಮತ್ತೊಂದು ಸಾಧನೆ, ಭಾರತದ ಮುಡಿಗೆ ಮತ್ತೊಂದು ಗರಿ!

07 May 2018 5:58 PM | General
511 Report

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಶ್ವದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಇದೇ ಮೊದಲ ಬಾರಿಗೆ ಮಾಡಿದೆ. ಸ್ವದೇಶಿ ತಂತ್ರಜ್ಞಾನ ಬಳಸಿಕೊಂಡು ಪರಮಾಣು ಗಡಿಯಾರವನ್ನು ಅಭಿವೃದ್ಧಿಪಡಿಸಿದ್ದು ಈ ಪರಮಾಣು ಗಡಿಯಾರದಿಂದ ಉಪಗ್ರಹಗಳಿರುವ ಸ್ಥಳವನ್ನು ಕಂಡು ಹಿಡಿಯಬಹುದಾಗಿದೆಯಂತೆ.

ಇದುವರೆಗೂ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳು ಹೊಂದಿದ್ದ ಪರಮಾಣು ಗಡಿಯಾರವನ್ನು ಇದೀಗ, ಇಸ್ರೋ ಕೂಡ ಯಶಸ್ವಿಯಾಗಿ ಅಭಿವೃದ್ದಿಪಡಿಸಿ ಮತ್ತೊಂದು ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಅಹಮದಾಬಾದ್‌ನಲ್ಲಿರುವ ಇಸ್ರೋ ಸ್ಪೇಸ್​ ಅಪ್ಲಿಕೇಷನ್​​ ಸೆಂಟರ್‌ನಲ್ಲಿ ಈ ಗಡಿಯಾರವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ. ವಿಶ್ವ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಹೆಮ್ಮೆ ಮತ್ತಷ್ಟು ಉತ್ತುಂಗಕ್ಕೇರಿದೆ. ಭಾರತವು ಇದುವರೆಗೂ ಕೂಡ ಈ ಗಡಿಯಾರಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೆವು, ಇನ್ನು ಮುಂದೆ ನಾವು ತಯಾರಿಸಿದ ಗಡಿಯಾರವನ್ನೇ ಬಳಸಿಕೊಳ್ಳಲಾಗುವುದು. ಈ ತಂತ್ರಜ್ಞಾನವನ್ನು ಹೊಂದಿದ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ನಾವೂ ಒಬ್ಬರಾಗಿದ್ದೇವೆ ಎಂದು ಇಸ್ರೋ ಎಸ್​ಎಸಿ ನಿರ್ದೇಶಕ ತಾಪನ್​ ಮಿಶ್ರಾ ಅವರು ತುಂಬಾ ಸಂತೋಷದಿಂದ ಹೇಳಿದ್ದಾರೆ.

Edited By

Manjula M

Reported By

Manjula M

Comments