ಮಗ ಪಿಯುಸಿ ಫೇಲಾದ ಅಂತ ತಾಯಿ ಹೀಗ್ ಮಾಡೋದಾ..?

04 May 2018 11:04 AM | General
522 Report

ಧಾರವಾಡದಲ್ಲಿ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಮಗ ಫೇಲಾದ ಕಾರಣ ತಾಯಿ ಕಾಲೇಜ್ ಪ್ರಾಂಶುಪಾಲರ ಚೆಂಬರ್ ನಲ್ಲಿ ರಂಪಾಟ ಮಾಡಿದ್ದಾರೆ.ರಾಹುಲ್ ಕುಲಕರ್ಣಿ ಎಂಬ ವಿದ್ಯಾರ್ಥಿಯ ತಾಯಿಯಾದ ರಮಾ ಕುಲಕರ್ಣಿಯೇ ಪ್ರಾಂಶುಪಾಲರ ಚೆಂಬರ್ ನಲ್ಲಿ ರಂಪಾಟ ಮಾಡಿರುವವರು.

ಧಾರವಾಡ ಕೆಸಿಡಿ ಕಾಲೇಜಿನ ಪ್ರಥಮ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ರಾಹುಲ್ ಎರಡು ವಿಷಯದಲ್ಲಿ ಫೇಲಾಗಿದ್ದಾನೆ. ಇದನ್ನೇ ನೆಪ ಇಟ್ಟುಕೊಂಡು ರಾಹುಲ್ ತಾಯಿ ರಮಾ ಕುಲಕರ್ಣಿ ಅವರು ಗುರುವಾರ ಕೆಸಿಡಿ ಕಾಲೇಜಿನ ಪ್ರಾಂಶುಪಾಲರ ಕಚೇರಿಗೆ ನುಗ್ಗಿ ದಾಂಧಲೆಯನ್ನು ಮಾಡಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ಪ್ರಾಂಶುಪಾಲರಿಗೆ ಬೈದಿದ್ದಾರೆ. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕೂಡಾ ಅಪಮಾನ ಮಾಡಿರುವ ರಮಾ ಕುಲಕರ್ಣಿ ತನ್ನ ಮಗನನ್ನ ಪಾಸ್ ಮಾಡುವಂತೆ ಬೇಡಿಕೆಯಿಟ್ಟು ರಾದ್ದಾಂತ ಮಾಡಿದ್ದಾರೆ. ಘಟನೆ ಸಂಬಂಧವಾಗಿ ರಮಾ ಕುಲಕರ್ಣಿ ಅವರ ಮೇಲೆ ಉಪನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿರುವ ಕರ್ನಾಟಕ ವಿವಿ ಅಧಿಕಾರಿ ಮಂಡಳಿ, ಅವರ ಮೇಲೆ ಕ್ರಮ ಕೈಗೊಳ್ಳಲು ಕೋರಿದ್ದಾರೆ. ಸದ್ಯ ಪೊಲೀಸರು ರಮಾ ಅವರನ್ನ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ಧಾರೆ ಎನ್ನಲಾಗಿದೆ.

 

Edited By

Manjula M

Reported By

Manjula M

Comments