ಮುಖದ ಕಾಂತಿಗೆ ನೈಸರ್ಗಿಕ ಫೇಸ್ ಪ್ಯಾಕ್

03 May 2018 4:22 PM | General
445 Report

ಕೆಲವರಿಗೆ ಯಾವಾಗಲೂ ತಮ್ಮ ತಮ್ಮ ಸೌಂದರ್ಯದ ಬಗ್ಗೆಯೆ ಚಿಂತೆ..ಅದರಲ್ಲೂ  ಹೆಣ್ಣು ಮಕ್ಕಳಿಗಂತೂ ಸ್ವಲ್ಪ ಹೆಚ್ಚು ಎನ್ನಬಹುದು.ಅದಕ್ಕಾಗಿಯೆ ಮನೆಯಲ್ಲಿಯೇ ಸುಲಭವಾಗಿ ತಯಾರಿಸುವ ಫೇಸ್ ಪ್ಯಾಕುಗಳು ರಾಸಾಯನಿಕಗಳಿಂದಲೂ ಮುಕ್ತವಾಗಿರುತ್ತವೆ.

ಈ ಬಗೆಯಲ್ಲಿ ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್ ಗಳು ಬ್ಯೂಟಿ ಪಾರ್ಲರುಗಳಲ್ಲಿ ನೀಡುವಂತಹ ಹೊಳಪನ್ನೇ ನಿಮ್ಮ ಮುಖಕ್ಕೆ ನೀಡಿ ಕನಿಷ್ಠವೆಂದರೂ ಒಂದು ವಾರಗಳವರೆಗೆ ಪರಿಣಾಮಕಾರಿಯಾದ ಹೊಳಪನ್ನು ನೀಡುತ್ತದೆ ಮತ್ತು ತ್ವಚೆಯ ಮೇಲೆ ಯಾವುದೇ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ… ಹಾಗಾಗಿ ನಿಮ್ಮ ಈ ಕೆಳಗಿನ ಫೇಸ್ ಪ್ಯಾಕ್ ಅನ್ನು ಬಳಸಿ ನಿಮ್ಮ ತ್ವಚೆ ಕಾಪಾಡಿಕೊಳ್ಳಿ.

ಮೊಸರು ಮತ್ತು ಟೊಮ್ಯಾಟೋ  

ಟೊಮ್ಯಾಟೋ ರಸಕ್ಕೆ  ಮೊಸರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ತದ ನಂತರ ನಿಮ್ಮ ಮುಖದ ಎಲ್ಲಾ ಭಾಗಗಳಿಗೂ ಕೂಡ ಸಮವಾಗಿ ಹಚ್ಚಿಕೊಳ್ಳಿ. ಈ ಬಗೆಯ ಮಾಸ್ಕ್ ನಿಮ್ಮ ಮುಖಕ್ಕೆ ಕಾಂತಿಯನ್ನು ಕೊಡುವಲ್ಲಿ ಬಹಳ ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ಮತ್ತು ಟೊಮ್ಯಾಟೊದಲ್ಲಿರುವ ಸಿಟ್ರಿಕ್ ಆಸಿಡ್ ಎರಡೂ ಬಗೆಯ ಆಸಿಡುಗಳೂ ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗುತ್ತವೆ.. ಮೊಸರು ತ್ವಚೆಯನ್ನು ತಂಪುಗೊಳಿಸುತ್ತದೆ ಮತ್ತು ಆರ್ದ್ರತೆಯನ್ನು ಹೆಚ್ಚಿಸುತ್ತದೆ. ಈ ಮೂಲಕ ಕಳೆಗುಂದಿದ ತ್ವಚೆ, ಮಂದವಾದ ತ್ವಚೆಗಳಂತಹಾ ಸಮಸ್ಯೆಗಳನ್ನು ಗಣನೀಯ ಪ್ರಮಾಣದಲ್ಲಿ ಇಳಿಸುತ್ತದೆ. ಹಾಗಾಗಿ ನೀವು ಕೂಡ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ.


Edited By

Manjula M

Reported By

Manjula M

Comments