ನೌಕರರು ಸದ್ಯಕ್ಕೆ ಪಿಎಫ್ ಹಣ ಡ್ರಾ ಮಾಡೋಕಾಗಲ್ಲ..!

03 May 2018 3:42 PM | General
659 Report

ನೌಕರರ ಭವಿಷ್ಯ ನಿಧಿ ಪೋರ್ಟಲ್ ಹ್ಯಾಕ್ ಆಗಿರುವ ಸುದ್ದಿ ಈಗಾಗಲೇ ವೈರಲ್ ಆಗಿದೆ. ನೌಕರರ ಭವಿಷ್ಯ ನಿಧಿ ಮಾತ್ರ ಈ ಆರೋಪವನ್ನು ತಳ್ಳಿ ಹಾಕಿದೆ. ಪೋರ್ಟಲ್ ಹ್ಯಾಕ್ ಆಗಿಲ್ಲ. ಮುಂಜಾಗೃತ ಕ್ರಮವಾಗಿ ಪೋರ್ಟಲ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ  ತನಿಖೆ ನಡೆಯುತ್ತಿದ್ದು, ನೌಕರರು ಆತಂಕಪಡುವ ಅಗತ್ಯವಿಲ್ಲವೆಂದು ಇಪಿಎಫ್‌ಒ ಸಂಸ್ಥೆ ತಿಳಿಸಿದೆ.

ಇಪಿಎಫ್‌ಒ ಸಂಸ್ಥೆ  ಪೋರ್ಟಲ್ ಕೆಲಸ ಸ್ಥಗಿತಗೊಳಿಸಿರುವುದು ನೌಕರರಿಗೆ ಸಿಕ್ಕಾಪಟ್ಟೆ ತಲೆನೋವಾಗಿದೆ. ಅಗತ್ಯ ಕೆಲಸಕ್ಕೆ ಪಿಎಫ್ ಖಾತೆಯಿಂದ ಹಣ ತೆಗೆಯಲು ಸಾಧ್ಯವಾಗ್ತಿಲ್ಲ. ಇಪಿಎಫ್ ಒ ಪೋರ್ಟಲ್ ಏಪ್ರಿಲ್ 22ರಿಂದಲೇ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ. ಹಣ ಹೊರತೆಗೆಯಲು ಹಾಗೂ ಹಣ ವರ್ಗಾವಣೆ ಮಾಡಲು ಸದ್ಯ ಸಾಧ್ಯವಿಲ್ಲ. ಪಿಎಫ್ ಕಚೇರಿಯ ಸರ್ವರ್ ಆಫ್ ಆಗಿರುವುದೇ ಇದಕ್ಕೆ ಕಾರಣವಾಗಿದೆ ಎಂದಿದ್ದಾರೆ. ಕಾಗದ ರಹಿತ ಆಡಳಿತ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ನೌಕರರ ಭವಿಷ್ಯ ನಿಧಿಯ ಅನೇಕ ಸೇವೆಗಳನ್ನು ಆನ್ಲೈನ್ ಮಾಡಿದೆ. ನೌಕರರು ಪಾಸ್ಬುಕ್ ಮೂಲಕ ನೌಕರರ ಅಕೌಂಟ್ ನಲ್ಲಿ ಎಷ್ಟು ಹಣವಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಆದ್ರೆ ಸರ್ವರ್ ಡೌನ್ ಆಗಿರುವ ಕಾರಣ ವೆಬ್ಸೈಟ್ ಓಪನ್ ಆಗ್ತಿಲ್ಲ. ಮಿಸ್ಡ್ ಕಾಲ್, ಎಸ್ ಎಂ ಎಸ್, ಆ್ಯಪ್ ಮೂಲಕವೂ ಯಾವುದೇ ಮಾಹಿತಿ ಸಿಗ್ತಿಲ್ಲ. ಹಣ ಡ್ರಾ ಮಾಡಬಯಸುವವರು ಪಿಎಫ್ ಕಚೇರಿಗೆ ಹೋಗಿ ಫಾರ್ಮ್ ತುಂಬಿ ಹಣ ಪಡೆಯಬೇಕಾಗಿದೆ ಎಂದು ಸಂಸ್ಥೆಯು ತಿಳಿಸಿದೆ.

 

Edited By

Manjula M

Reported By

Manjula M

Comments