ಸೀಬೆ ಎಲೆಗಳು ನಿಮ್ಮ ಸೌಂದರ್ಯವನ್ನು ವೃದ್ದಿಸುತ್ತೆ..!

02 May 2018 3:24 PM | General
465 Report

ಪ್ರಕೃತಿಯಲ್ಲಿ ಸಿಗುವಂತಹ ಎಲ್ಲಾ ರೀತಿಯ ಹಣ್ಣುಗಳು ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಕಾಲಕ್ಕೆ ಅನುಗುಣವಾಗಿ ಹಣ್ಣುಗಳು ಸಿಗುವುದು. ಅದರಲ್ಲಿ ಸೀಬೆ ಹಣ್ಣು ಕೂಡ ಒಂದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.


ಅದೇ ರೀತಿ ಸೀಬೆ ಎಲೆಗಳನ್ನು ಸೌಂದರ್ಯವರ್ಧಕವಾಗಿಯು ಬಳಸಿಕೊಳ್ಳಬಹುದು. ಇದು ದೇಹದ ಸೌಂದರ್ಯ ಹೆಚ್ಚಿಸುವುದು.ಸೀಬೆ ಎಲೆಗಳು, ತ್ವಚೆ, ಕೂದಲಿಗೆ ತುಂಬಾ ಪರಿಣಾಮಕಾರಿ. ಬ್ಯಾಕ್ಟೀರಿಯಾ ವಿರೋಧಿ, ಆ್ಯಂಟಿಆಕ್ಸಿಡೆಂಟ್ ಇತ್ಯಾದಿ ಗುಣಗಳು ಈ ಸೀಬೆ ಎಲೆಗಳಲ್ಲಿ ಇವೆ. ಚರ್ಮ ಮತ್ತು ತ್ವಚೆಗೆ ಇದನ್ನು ಸೌಂದರ್ಯವರ್ಧಕವಾಗಿ ಬಳಸಿದರೆ ತುಂಬಾ ಲಾಭಕಾರಿ. ಕಪ್ಪು ಕಲೆಗಳ ನಿವಾರಣೆ ಕಪ್ಪು ಕಲೆಗಳ ನಿವಾರಣೆ ಮಾಡುವಲ್ಲಿ ಸೀಬೆ ಎಲೆಗಳು ತುಂಬಾ ಪರಿಣಾಮಕಾರಿ. ಕೆಲವು ಸೀಬೆ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ. ಸ್ವಲ್ಪ ನೀರು ಹಾಕಿ ಸೀಬೆ ಎಲೆಗಳನ್ನು  ರುಬ್ಬಿಕೊಳ್ಳಿ ಮತ್ತು ಇದಕ್ಕೆ ಚಿಟಿಕೆಯಷ್ಟು ಅರಶಿನ ಪುಡಿ ಹಾಕಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಬೆರಳ ತುದಿಯಿಂದ ಸ್ಕ್ರಬ್ ಮಾಡಿ. ತಣ್ಣೀರಿನಿಂದ ಇದನ್ನು ತೊಳೆಯಿರಿ. ವಾರದಲ್ಲಿ ಎರಡು ಸಲ ಹೀಗೆ ಮಾಡುವುದರಿಂದ ಮುಖದ ಕಾಂತಿ ಹೊಳೆಯುತ್ತದೆ.



Edited By

Manjula M

Reported By

Manjula M

Comments