ರಮ್ಯಾ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್!

02 May 2018 9:14 AM | General
365 Report

ಮುಖ್ಯನ್ಯಾಯಮೂರ್ತಿಯಾದ ದೀಪಕ್ ಮಿಶ್ರಾ ವಿರುದ್ಧ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಮುಖ್ಯಸ್ಥೆಯಾದ  ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿ ಹೇಳಿಕೆಯನ್ನು ನೀಡಿದ್ದಾರೆ. ಅವರ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬೇಕು ಎಂದು ನ್ಯಾಯವಾದಿಯೊಬ್ಬರು ಸುಪ್ರೀಂಕೋರ್ಟ್ ಗೆ ಮನವಿಯನ್ನು ಸಲ್ಲಿಸಿದ್ದಾರೆ.

ಅಡ್ವೊಕೇಟ್ ಆದ ಅರುಣ್ ಕುಮಾರ್ ಎಂಬುವರು ರಮ್ಯಾ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಜರುಗಿಸಬೇಕು ಎಂದು ಮನವಿಯನ್ನು ಮಾಡಿದ್ದಾರೆ. ಮಹಾಭಿಯೋಗ ಪ್ರಸ್ತಾವನೆ ವೇಳೆ ಸಿಜೆಐ ದೀಪಕ್ ಮಿಶ್ರಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಕೀಳು ಮಟ್ಟದ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದರು ಎಂದು ಅರುಣ್ ಕುಮಾರ್ ಅರ್ಜಿಯಲ್ಲಿ ಉಲ್ಲೇಖನ ಮಾಡಿದ್ದಾರೆ.

Edited By

Manjula M

Reported By

Manjula M

Comments