ಆರ್‌ಟಿಇ ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕ ಕೊಡಲ್ಲ -ಖಾಸಗಿ ಶಾಲೆಗಳ  ಈ ತಾರತಮ್ಯ ಸರಿಯೇ?

26 Apr 2018 10:42 AM | General
393 Report

ಶಿಕ್ಷಣ ಹಕ್ಕು ಕಾಯ್ದೆ ಅಡಿ ಖಾಸಗಿ ಶಾಲೆಗಳಲ್ಲಿ ಸೀಟು ಪಡೆದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರವನ್ನು ಸಂಬಂಧಪಟ್ಟ ಶಾಲೆಗಳೇ ನೀಡಬೇಕು ಎಂಬ ಸರ್ಕಾರದ ಆದೇಶವನ್ನು ಖಾಸಗಿ ಶಾಲೆಗಳು ನಿರಾಕರಿಸಿವೆ. ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ಖಾಸಗಿ ಶಾಲೆಗಳು ಆರ್ ಟಿ ಇ ಮಕ್ಕಳಿಗೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿವೆ.

ಕರ್ನಾಟಕ ಹೈಕೋರ್ಟ್ ಆರ್‌ಟಿಇ ಮತ್ತು ಸಾಮಾನ್ಯ ವಿದ್ಯಾರ್ಥಿಗಳ ನಡುವೆ ಯಾವುದೇ ರೀತಿಯಲ್ಲಿ ತಾರತಮ್ಯ ನೀತಿ ಅನುಸರಿಸದೆ ಸಮಾನವಾಗಿ ಕಾಣಬೇಕು ಎಂದು ಹೇಳಿದೆ.ಅದನ್ನು ಬಿಟ್ಟು  ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ನೀಡಬೇಕು ಎಂದು ಎಲ್ಲೂ ಕೂಡ ಸೂಚಿಸಿಲ್ಲ. ಒಂದು ವೇಳೆ ಆರ್ ಟಿಇ ಮಕ್ಕಳಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ನೀಡಿದರೆ ತಾರತಮ್ಯ ನೀತಿ ಅನುಸರಿಸಿದಂತಾಗುತ್ತದೆ ಎಂದು ಖಾಸಗಿ ಶಾಲೆಗಳು ತಿಳಿಸಿವೆ.ಇದರ ಬಗ್ಗೆ ಆರ್ ಟಿ ಇ ಯಾವ ರೀತಿಯಾಗಿ ಹೆಜ್ಜೆಯನ್ನು ಇಡುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.

 

 

Edited By

Manjula M

Reported By

Manjula M

Comments