A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ರಷ್ಯಾದ ಲೇಖಕ ಪ್ಲಖನೋವ್ ರಾಜ್ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ? | Civic News

ರಷ್ಯಾದ ಲೇಖಕ ಪ್ಲಖನೋವ್ ರಾಜ್ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ?

24 Apr 2018 5:11 PM | General
646 Report

ರಾಜ್‍ಕುಮಾರ್ ಅಭಿನಯದ ಚಿತ್ರಗಳು ಕೇವಲ ಚಿತ್ರಗಳಾಗಿರಲಿಲ್ಲ. ರಾಜ್‍ಕುಮಾರ್ ಕುಟುಂಬ, ಕುಟುಂಬ ಪ್ರೀತಿ, ಕೌಟುಂಬಿಕ ಸಾಮರಸ್ಯ ತುಂಬಿದರು. ರಾಜ್‍ಕುಮಾರ್ ಸಿನಿಮಾಗಳು ಬರೀ ಮನರಂಜನೆಯಾಗಿರಲಿಲ್ಲ ಅವರು ನಂಬಿದ ಮೌಲ್ಯಗಳೇ ಆಗಿರುತ್ತಿದ್ದವು ಬದಕನ್ನು ಬೆಳಗುವ ನಂದಾದೀಪವಾದವು. ಪ್ರತಿಯೊಂದು ಚಿತ್ರಗಳಲ್ಲಿ ಅಣ್ಣಾವ್ರು ಪಾತ್ರಗಳೇ ತಾವಾಗಿ ಆ ಪಾತ್ರಗಳಲ್ಲಿ ಅಭಿಮಾನಿಗಳನ್ನು ಆಹ್ವಾನಿಸುತ್ತಿದ್ದರು.

ತಮಗೆ ಸಿಕ್ಕ ಪ್ರತಿಯೊಂದು ಫಲಕ, ಪ್ರಶಸ್ತಿಗಳನ್ನು ಜನರಿಗೆ ತೋರಿಸಿ ಇದು ನನಗಲ್ಲ ನಿಮಗೆ ಎಂದು ಹೇಳುತ್ತಿದ್ದರು. ಇಂಥ ಕೆಲವು ಸರಳ ಮತ್ತು ಸಣ್ಣ ಸಣ್ಣ ವರ್ತನೆಗಳೆ ಅವರನ್ನು ಇನ್ನು ಜನರ ಹತ್ತಿರ ತರುತ್ತಿದ್ದವು. ರಾಜ್ ಎಲ್ಲೆ ಮಾತಾಡಲಿ ವಿಚಾರಮಾಡಿ, ತೂಕದ ಮಾತುಗಳನ್ನು ಆಡುತ್ತಿದ್ದರು. ಏಕೆಂದರೆ ಅವರು ಆಡುತ್ತಿದ್ದ ಕೆಲವು ಮಾತುಗಳು ಮಾತುಗಳಾಗಿ ಉಳಿಯುತ್ತಿರಲಿಲ್ಲ ಚಳುವಳಿಗಳೆ ಆಗಿ ಬಿಡುತ್ತಿದ್ದವು.ರಾಜ್‍ಗೆ ಯಾವುದೇ ದುಶ್ಛಟಗಳಿರಲಿಲ್ಲ. ತಮ್ಮ ಒಂದೇ ಒಂದು ಸಿನಿಮಾದಲ್ಲಿ ಸಿಗರೇಟು ಸೇದುವ ಅಥವಾ ಕುಡಿಯುವ ಚಟವುಳ್ಳ ಪಾತ್ರಗಳಲ್ಲಿ ರಾಜ್ ಅಭಿನಯಿಸದಿರಲು ಕಾರಣ ಸಿನಿಮಾ ಯುವಜನತೆಯ ಮನಸ್ಸಿನ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಅವರಿಗ್ಗಿದ್ದ ಕಳವಳ. ಯುವಜನತೆ ದಾರಿ ತಪ್ಪಬಾರದೆಂಬ ಕಾಳಜಿ ಕೂಡ.

ರಷ್ಯಾದ ಲೇಖಕ ಪ್ಲಖನೋವ್ ಒಂದು ಕಡೆ ಹೀಗೆ ಹೇಳಿದ್ದಾರೆ. “ಕಲಾಕಾರರು ಜನರಿಂದ ಮನ್ನಣೆಯನ್ನು ಬಯಸುತ್ತಾರೆ. ಜನರು ಕಲಾಕಾರರಿಂದ ಜವಾಬ್ದಾರಿಯನ್ನು ಬಯಸುತ್ತಾರೆ. ನಿಜ. ಯಾವುದೇ ಕಲಾವಿದರು, ಸಾಹಿತಿ, ಯಾರೇ ಆಗಲಿ ಜನರಿಗೆ ಜವಾಬ್ದಾರರಾಗಬೇಕು. ಆಗ ಮಾತ್ರ ಅವರಲ್ಲಿ ಸದಭಿರುಚಿ ಮತ್ತು ಸಮಕಾಲೀನ ಸಾಮಾಜಿಕ ನೆಲೆಗಳು ಜಾಗೃತವಾಗಿರುತ್ತವೆ”. ಅದನ್ನು ಸಾಭೀತು ಪಡಿಸಿದ್ದು ಡಾ. ರಾಜ್‍ಕುಮಾರ್.ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಮದ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದ ಅವರು ಎಲ್ಲಾರಿಗೂ ಅದನ್ನೆ ಉಪದೇಶಿಸುತ್ತಿದ್ದರು. ತಮ್ಮ 25 ನೇ ವಯಸ್ಸಿಗೆ ಯೋಗ ಕಲಿಯಲಾರಂಭಿಸಿದ ರಾಜ್ ಎರಡೇ ವರ್ಷದಲ್ಲಿ ಅದರ ಪರಿಣಿತಿ ಪಡೆದು ಯೋಗ ಸಾಮಥ್ರ್ಯವನ್ನು ಕಾಮನಬಿಲ್ಲು ಅತ್ಯತ್ತಮ ಚಿತ್ರದ ಮೂಲಕ ಪ್ರದರ್ಶಿಸಿ ಯೋಗಪಟುವಾಗುವುದರ ಜೊತೆ ಅನೇಕ ಯುವಕರಿಗೆ ಯೋಗಭ್ಯಾಸದ ಸಂದೇಶವನ್ನೂ ನೀಡಿ ಸ್ಪೂರ್ತಿಯಾದರು.

ರಾಜ್ ಕೇವಲ ಒಬ್ಬ ನಟನಾಗಿದಿದ್ದರೆ ಈ ಪರಿಯ ಜನಪ್ರಿಯತೆಯನ್ನು ಪಡೆಯುತ್ತಿದ್ದರೋ ಇಲ್ಲವೋ ಆದರೆ ರಾಜ್ ಆರಿಸಿಕೊಂಡ ಪಾತ್ರಗಳು ಮತ್ತು ಅವುಗಳ ಮೂಲಕ ಸಮಾಜಕ್ಕೆ ಅವರು ಕೊಟ್ಟ ಸಂದೇಶ ಅಮೋಘ ಹಾಗೂ ಪ್ರತಿಯೊಬ್ಬರ ಜೀವನಕ್ಕೂ ಅತ್ಯಮೂಲ್ಯವಾಗಿ ಜನಪ್ರಿಯತೆಗೆ ಕಾರಣವಾದರು.ರಾಜ್‍ಕುಮಾರ್ ನಟನೆಯಲ್ಲೂ, ನಟನೆಯಾಚೆಯಲ್ಲೂ ಒಂದು ಆಕರ್ಷಿತ ವ್ಯಕ್ತಿತ್ವ. ಅವರು ನಡೆದು ಬಂದ ದಾರಿ, ಆದರ್ಶ, ಶಿಸ್ತು, ವಿನಯದ ನಾಯಕರಾಗಿಬಿಟ್ಟರು. ಮಗನಿದ್ದರೆ ರಾಜ್‍ಕುಮಾರ್‍ನಂತೆ ಇರಬೇಕು ಎನ್ನುವ ತಾಯಂದಿರು ಈ ನಾಡ ಮನೆ ಮನೆಯಲ್ಲಿದ್ದಾರೆ. ಅಣ್ಣಾವ್ರು ಹೋಗುವಾಗಲು ತಮ್ಮ ಕಣ್ಣುಗಳನ್ನು ಮತ್ತೊಬ್ಬರಿಗೆ ಕೊಟ್ಟು ಅಂಧನ ಬಾಳಿಗೆ ಹೊಸಬೆಳಕು ನೀಡಿದರು.

ಯಾಕಂದ್ರೆ ಅವರ ಚಿತ್ರಗಳನ್ನು ನೋಡಿ ಜನಸಾಮಾನ್ಯರು ಬದುಕು ರೂಪಿಸಿಕೊಂಡಿದ್ದಾರೆ. ಪ್ರಬುದ್ದರು ಸಾಮಾಜಿಕ ಜವಾಬ್ದಾರಿಗಳನ್ನು ಹೊತ್ತಿದ್ದಾರೆ. ದಾರಿ ಕ್ರಮಿಸಲು ಮೊದಲ ಹೆಜ್ಜೆ ಮುಖ್ಯವಾಗಿರುವಂತೆ, ಕಟ್ಟಡ ಹತ್ತಲು ಮೊದಲ ಪಾವಟಿಗೆ ಪ್ರಮುಖವಾಗುವಂತೆ ರಾಜ್‍ಕುಮಾರ್ ಚಿತ್ರಗಳು ಸಾಮಾಜಿಕ ಪರಿವರ್ತನೆಗಾಗಿ ಜನಾಂದೋಲನವನ್ನು ರೂಪಿಸದಿದ್ದರೂ, ಜನರೊಳಗೆ ಒಂದು ಅರಿವಿನ ದೀಪ ಹಚ್ಚುವಲ್ಲಿ ಮಹತ್ವದ ಪಾತ್ರವಹಿಸಿದರು.ಜನಸಾಮಾನ್ಯರ ಆಶೀವಾರ್ದವನ್ನು ಪಡೆದುಕೊಂಡು, ನಂಬಿಕೊಂಡು, ಅವರನ್ನೆ ದೇವರಾಗಿಸಿಕೊಂಡ ಸಾಮಾನ್ಯ ಮನುಷ್ಯ, ಬೆವರಿನ ಸಂಸ್ಕøತಿಯ ಸಾಂಸ್ಕøತಿಯ ನಾಯಕ. ಊಟ ಮಾಡಿ ಸಾಬೂನಿಂದ ಕೈ ತೊಳೆದರೆ ಅನ್ನದಾತನ ನೆನಪು ಮಾಸೀತು, ಹೆಚ್ಚು ಮಾತಾನಾಡಿದರೆ ನಿರ್ದೇಶಕರ ಖರ್ಚು ಹೆಚ್ಚಿತು, ತೆರಿಗೆ ಕಟ್ಟದಿದ್ದರೆ ಸಾಮಾಜಿಕ ಹಾನಿಯಾದೀತೂ, ಕೆಟ್ಟ ಪಾತ್ರಗಳಲ್ಲಿ ನಟಿಸಿದರೆ ಸಮಾಜಕ್ಕೆ ತಪ್ಪು ಸಂದೇಶ ಹೋದಿತು ಎಂಬ ಸಣ್ಣ ಸಣ್ಣ ತಿಳುವಳಿಕೆಗಳೊಂದಿಗೆ ಸದಾ ಅರಿವಿನ ಬಾಳನ್ನು ಬಾಳಿದ ರಾಜ್ ಎಂದುಗೂ ಅಜರಾಮರ.

ಇನ್ನೂ ಬಹು ಮುಖ್ಯವಾದ ಅಂಶವೆಂದರೆ ಚಿತ್ರರಂಗದ ಯಾವುದೇ ಕಲಾವಿದರು, ತಂತ್ರಜ್ಞರು ಖಾಯಿಲೆಗೆ ಬಿದ್ದಾಗ ಮೊದಲು ರಾಜಕುಮಾರ್ ಅವರು ಸ್ಪಂದಿಸುತ್ತಿದ್ದರು. ತಾವಾಗಿಯೇ ಹೋಗಿ ಅಥವಾ ಪಾರ್ವತಮ್ಮವರನ್ನು ಕಳಿಸಿ ಒಂದಿಷ್ಟು ಧನ ಸಹಾಯ ಮಾಡಿ ಆರ್ಥಿಕ ಹಾಗೂ ನೈತಿಕ ಬೆಂಬಲ ನೀಡುತ್ತಿದ್ದರು. ಆದರೆ ರಾಜ್‍ಕುಮಾರ್ ಸ್ವತಃ ಕೆಲಸಗಳಿಗೆ ಪ್ರಚಾರ ಬಯಸುತ್ತಿರಲಿಲ್ಲ. ಯಾಕಂದ್ರೆ ಬಲಗೈಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಭಾವನೆ ಮತ್ತು ಅವರ ನಿಲುವಾಗಿತ್ತು. 

Edited By

Manjula M

Reported By

Manjula M

Comments