ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಬಾರಿ ಮಳೆ

24 Apr 2018 4:15 PM | General
508 Report

ಉದ್ಯಾನನಗರಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಸುರಿದ ಭಾರೀ ಮಳೆಯಿಂದಾಗಿ ಕೆಲವೆಡೆ ಸಂಚಾರಕ್ಕೂ ಅಸ್ತವ್ಯಸ್ತವಾಗಿತ್ತು.. ಇಂದು ಮಧ್ಯಾಹ್ನ ಗುಡುಗು, ಮಿಂಚು ಸಹಿತ ಮಳೆ ನಗರದ ಕೆಲವೆಡೆ ಬಿದ್ದಿದೆ.

ರಾಜಾಜಿನಗರದ ರಾಜ್‍ಕುಮಾರ್ ರಸ್ತೆಯಲ್ಲಿ ಭಾರೀ ಗಾಳಿ ಮಳೆಯಿಂದ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಹಾಗೂ ವಿದ್ಯುತ್ ಕಂಬ ಉರುಳಿ ಬಿದ್ದಿವೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪಾರಾಗಿದ್ದಾರೆ.ಇನ್ನು ಹಲವೆಡೆ ಮರದ ಕೊಂಬೆಗಳು ಮುರಿದು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದ್ದರೆ, ಮತ್ತೆ ಕೆಲವು ಕಡೆ ನಿಂತಿದ್ದ ವಾಹನಗಳ ಮೇಲೂ ಮರಗಳು ಬಿದ್ದಿವೆ.

Edited By

Manjula M

Reported By

Manjula M

Comments

Cancel
Done