ನೂರು ಕೋಟಿ ಆಸ್ತಿ ತ್ಯಜಿಸಿದ 24ರ ಯುವಕ!

21 Apr 2018 11:17 AM | General
405 Report

ಮುಂಬೈ ಮೂಲದ 24ರ ಯುವಕ ಮೋಕ್ಷೇಶ್ ಸೇಟ್ ಶುಕ್ರವಾರ ಬೆಳಗ್ಗೆ ಜೈನ ದೀಕ್ಷೆಯನ್ನು ಸ್ವೀಕರಿಸಿದ್ದಾರೆ.ಮೋಕ್ಷೇಶ್ ಕುಟುಂಬಕ್ಕೆ ಜೆ ಕೆ ಕಾರ್ಪೊರೇಷನ್ ಹೆಸರಿನ ವಜ್ರ ಲೋಹದ ಮತ್ತು ಸಕ್ಕರೆ ಉದ್ಯಮಗಳಿವೆ.  ಈತ ಸುಮಾರು ನೂರು ಕೋಟಿ ಆಸ್ತಿಯನ್ನು ತ್ಯಜಿಸಿದ್ದಾರೆ. ಚಾರ್ಟೇಡ್ ಅಕೌಂಟೆಂಟ್ ಆಗಿರುವ ಇವರು ಎಲ್ಲಾ ಆಸ್ತಿಯನ್ನು ಬಿಟ್ಟು ಗಾಂಧಿನಗರ-ಅಹಮದಾಬಾದ್ ರಸ್ತೆಯ ತಪೋವನ ಸರ್ಕಲ್‍ನಲ್ಲಿ ಶುಕ್ರವಾರ ಜೈನ ದೀಕ್ಷೆಯನ್ನು ಸ್ವೀಕರಿಸಿದರು.

ವಿದ್ಯಾಭ್ಯಾಸದಲ್ಲಿ ಮೊದಲಿಗನಾಗಿದ್ದ ನಾನು ಕಂಪನಿಯ ಲೆಕ್ಕ ಪರಿಶೋಧನೆಗಿಂತ ಧರ್ಮದ ಪರಿಶೋಧನೆಯ ವಿದ್ಯಾರ್ಥಿಯಾಗಲು ಬಯಸುತ್ತೇನೆ 15 ವರ್ಷ ಇದ್ದಾಗಲೇ ಸನ್ಯಾಸಿಯಾಗಲು ನಾನು ಇಷ್ಟ ಪಟ್ಟಿದೆ.. ಈ ಪ್ರಪಂಚದಿಂದ ನೆಮ್ಮದಿಯ ಜೀವನ ಸಿಗದ ಕಾರಣ ಈ ನಿರ್ಧಾರವನ್ನು ಕೈಗೊಂಡಿದ್ದೇನೆ. ನನ್ನೊಬ್ಬನ ಸಂತೋಷಕ್ಕಿಂತ ಎಲ್ಲರ ಸಂತೋಷವನ್ನು ಮುಖ್ಯ ಎಂದು ಮೋಕ್ಷೇಶ್ ಹೇಳಿದ್ದಾರೆ. ಮೋಕ್ಷೇಶ್ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವುವನ್ನು ಹೊಂದಿದ್ದರು ಆದ್ದರಿಂದ  ಸನ್ಯಾಸಿಯಾಗುವ ಬಯಕೆಯನ್ನು 8 ವರ್ಷದ ಕೆಳಗೆ ವ್ಯಕ್ತಪಡಿಸಿದ್ದರು. ಮೊದಲಿಗೆ ವಿದ್ಯಾಭ್ಯಾಸ ಮುಗಿಸಿ ಒಮ್ಮೆ ಪ್ರಪಂಚವನ್ನು ನೋಡಿ ಬಾ ಎಂದಿದ್ದೆವು. 200 ವರ್ಷ ಇತಿಹಾಸ ಇರುವ ನಮ್ಮ ಕುಟುಂಬದ ಪುರುಷ ಸದಸ್ಯರ ಪೈಕಿ ಸನ್ಯಾಸಿ ಆಗುತ್ತಿರುವುದು ಇವನೇ ಮೊದಲನೆಯವನು. ಮಹಿಳೆಯರ ಪೈಕಿ 5 ಜನ ಸಾಧ್ವಿಗಳಾಗಿದ್ದಾರೆ ಎಂದು ಗಿರೀಶ್ ಸೇಟ್ ತಿಳಿಸಿದರು.

 

Edited By

Manjula M

Reported By

Manjula M

Comments