ಆರ್‌ಟಿಇ ಅಡಿ ಶಾಲಾ ಮಕ್ಕಳ ದಾಖಲಾತಿ ಆರಂಭ

20 Apr 2018 1:21 PM | General
594 Report

ಆರ್‌ಟಿಇ ಅಡಿ ಶಾಲಾ ಮಕ್ಕಳ ದಾಖಲಾತಿ ಇಂದಿನಿಂದ ಆರಂಭಗೊಳ್ಳಲಿದೆ. ಈಗಾಗಲೇ ಸಾಕಷ್ಟು ಮಂದಿ ಪೋಷಕರು ಮನೆಯ ಸಮೀಪದ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಲು ಆರ್‍ಟಿಇ ಅಡಿ ಅರ್ಜಿಗಳನ್ನು ಕೂಡ ಸಲ್ಲಿಸಿದ್ದಾರೆ.

ಈ ನಿಯಮದಂತೆ ಅರ್ಹ ಅರ್ಜಿಗಳನ್ನು ಈಗಾಗಲೇ ವಿಂಗಡಿಸಲಾಗಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿಂದು ಲಾಟರಿ ಎತ್ತುವ ಮೂಲಕ ಮಕ್ಕಳು ಯಾವ ಶಾಲೆಗೆ ದಾಖಲಾತಿ ಪಡೆಯುತ್ತಾರೆ ಎಂಬುದನ್ನು ತಿಳಿಸುತ್ತಾರೆ. ರಾತ್ರಿ ವೇಳೆಗೆ ಪೋಷಕರಿಗೆ ಎಸ್‍ಎಂಎಸ್ ಮೂಲಕ ಮಾಹಿತಿಯು ಕೂಡ ಸಿಗಲಿದೆ ಎಂದು ಇಲಾಖೆಯ ಮೂಲಗಳು ಈಗಾಗಲೆ ತಿಳಿಸಿವೆ. ಇದು ಮೊದಲ ಸುತ್ತಿನ ಪ್ರಕ್ರಿಯೆ. ಇನ್ನೂ ಹಲವು ದಿನಗಳ ಕಾಲ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಆರ್ ಟಿ ಇ ಅಧಿಕಾರಿಗಳು ತಿಳಿಸಿದ್ದಾರೆ.

 

Edited By

Manjula M

Reported By

Manjula M

Comments