ನಿಮ್ಮ ಲಿವರ್ ಪೋಷಣೆಗೆ ಒಂದಿಷ್ಟು ಸೂಕ್ತ ಆಹಾರಗಳು

20 Apr 2018 12:23 PM | General
415 Report

ಪ್ರತಿನಿತ್ಯದ ಬದುಕಿನಲ್ಲಿ ನಾವು ಮನಸ್ಸು ಬಯಸಿದ್ದನ್ನು ಬಲು ಸುಲಭವಾಗಿ ಸೇವಿಸುತ್ತೇವೆ. ಇದು ಆರೋಗ್ಯದ ಮೇಲೆ ಕೆಲವೊಮ್ಮೆ ತೀವ್ರ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ಚಿಂತಿಸುವುದೇ ಇಲ್ಲ. ಯಕೃತ್ತಿನ ಆರೋಗ್ಯವನ್ನು ಉತ್ತಮ ಪಡಿಸುವ ಅಥವಾ ಆರೋಗ್ಯವನ್ನು ಕಾಯ್ದುಕೊಳ್ಳುವ ಕೆಲವು ನೈಸರ್ಗಿಕ ಅಂಶಗಳನ್ನು ನಾವು ಗಮನಿಸಬೇಕಾಗುತ್ತದೆ. ಅವುಗಳನ್ನು ಆಹಾರ ಕೂಡ ಒಂದು.

ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಯಕೃತ್ತು ಸಹ ಒಂದು. ರಕ್ತವನ್ನು ಹೆಪ್ಪುಗಟ್ಟುವ ಅಂಶ ಹಾಗೂ ಪ್ರೋಟೀನ್, ಕಾರ್ಬೋಹೈಡ್ರೇಟ್ ಗಳನ್ನು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುವ  ಜವಾಬ್ದಾರಿಯನ್ನು ಯಕೃತ್ತು ಅಥವಾ ಲಿವರ್ ವಹಿಸಿ ಕೊಳ್ಳುತ್ತದೆ. ಯಕೃತ್ತಿನ ಆರೋಗ್ಯವನ್ನು ಜೋಪಾನದಿಂದ ನೋಡಿಕೊಳ್ಳಬೇಕು . ಹಾಗಾಗಿ ನಾವು ಹೇಳುವ ಒಂದಿಷ್ಟು ಆಹಾರವನ್ನು ಸೇವಿಸಿ ನಿಮ್ಮ ಲಿವರ್ ಅನ್ನು ಕಾಪಾಡಿಕೊಳ್ಳಿ. ಬೆಳ್ಳುಳ್ಳಿ,ಗ್ರೀನ್ ಟೀ,ಹುಳಿ ಹಣ್ಣುಗಳು,ಹಸಿರು ಸೊಪ್ಪುಗಳು,ಬೀಟ್ರೂಟ್,ಅರಿಶಿನ,ಆಲಿವ್ ಎಣ್ಣೆ....ಇವಿಷ್ಟು ನಮ್ಮ ಲೀವರ್ ಅನ್ನು ಕಾಪಾಡುವಲ್ಲಿ ಸಹಾಯಕವಾಗುತ್ತವೆ.

Edited By

Manjula M

Reported By

Manjula M

Comments